

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಗೋಕರ್ಣ, ಫೆ ೨: ಗೋಕರ್ಣ, ಫೆ ೨: ಇದೇ ಬರುವ ೧೭ರಿಂದ ೨೬ನೆ ತಾರೀಕಿನ ವರೆಗೆ ನಡೆಯುವ ಶಿವರಾತ್ರಿ ಕಾರ್ಯಕ್ರಮದ ತಯಾರಿಗಾಗಿ ಕಾರ್ಯಕರ್ತರ ಸಿದ್ಧತಾ ಸಭೆಯು ಜರುಗಿತು. ಇದಕ್ಕೂ ಮೊದಲು ಮಾಧ್ಯಮ ಮಿತ್ರರೊಂದಿಗೆ ಮಾತನಾಡುತ್ತಾ, ಗೋಕರ್ಣದ ಮಹತ್ವವನ್ನು ಶ್ರೀ ಸಂಸ್ಥಾನ ಗೋಕರ್ಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು ವಿವರಿಸುತ್ತಾ ‘ವಿಶ್ವಕ್ಕೆ ಒಂದೇ ಗೋಕರ್ಣ, ವರ್ಷಕ್ಕೆ ಒಂದೇ ಶಿವರಾತ್ರಿ’ ಎಂದು ಒತ್ತಿಹೇಳಿದರು.
ಶಿವರಾತ್ರಿ ಎಂದರೆ ಕಾಲ, ಗೋಕರ್ಣ ಎಂದರೆ ದೇಶ. ಈ ವರ್ಷ ಗೋಕರ್ಣದ ಶಿವರಾತ್ರಿಯು ಕಾಲ ಮತ್ತು ದೇಶ, ಇವೆರಡರ ಅಭೂತಪೂರ್ವ ಸಂಗಮವನ್ನು ಸಾರುತ್ತದೆ ಎಂದು ತಿಳಿಸಿದರು. ಇತಿಹಾಸ, ಪುರಾಣ ಎರಡರಲ್ಲೂ ವಿಶೇಷ ಪ್ರಸಿದ್ಧಿ ಪಡೆದ ಗೊಕರ್ಣವು ಮತ್ತೆ ಕೇಂದ್ರ ಸ್ಥಾನವಾಗಬೇಕು ಎಂದು ಇದೇ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶ್ರೀ ಗುರುಗಳು ಗೋಕರ್ಣದ ಸಮಗ್ರ ಅಭಿವೃದ್ಧಿಯ ತಮ್ಮ ಕನಸನ್ನು ಬಿಚ್ಚಿಟ್ಟರು.
ಫೆಬ್ರವರಿ 7th, 2009 at 2:23 pm
i think there should be still more info on the front page!!