

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಬ್ರಹ್ಮಶ್ರೀ ಮಳಿಯನ್ ಶಂಕರನ್ ನಂಬೂದಿರಿ - ಭಾಗವತ ಹಂಸ - ಇವರ ಮಾರ್ಗದರ್ಶನದಲ್ಲಿ ಮಲ್ಲಿಯೂರು ಆಧ್ಯಾತ್ಮಿಕ ಪೀಠ೦ ದೆಹಲಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ “ಶ್ರೀ ಭಾಗವತ ಸಪ್ತಾಹ ” ಕಾರ್ಯಕ್ರಮವನ್ನು ನಡೆಸುತ್ತಿದ್ದಾರೆ . ಆಸ್ತಿಕ ಸಮಾಜದವರು ಈವರೆಗೆ ಅಸಂಖ್ಯಾತ ಭಾಗವತ ಸಪ್ತಾಹ ನಡೆಸಿದ್ದು, ದೆಹಲಿಯಿಂದ ಹೊರಗೆ ಇದು ಅವರ 16 ನೇಯ ಭಾಗವತ ಸಪ್ತಾಹ . ಈ ಸಂಘಟನೆಯ ಮಾರ್ಗದರ್ಶಕರಾದ ಬ್ರಹ್ಮಶ್ರೀ ಮಳಿಯನ್ ಶಂಕರನ್ ನಂಬೂದಿರಿ ಇವರು ಈ ಹಿಂದೆ ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರಿಂದ ಪ್ರತಿಷ್ಠಿತ “ಪುರುಷೋತ್ತಮ” ಪ್ರಶಸ್ತಿಯನ್ನೂ ಪಡೆದಿರುತ್ತಾರೆ .