

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ದಿ 11-08-2015 ಮಂಗಳವಾರ ರೂಢಿಗತ ಪರಂಪರೆಯಂತೆ ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಯಾಮಪೂಜೆ ಜರುಗಲಿದೆ . ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ಒಂದು ವಿಶೇಷ ಪೂಜೆ, ಕೊನೆಯಲ್ಲಿ ಹೋಮ ಇರುವುದು . ಲೋಕ ಕಲ್ಯಾಣಾರ್ಥ ನಡೆಯುವ ಜಗದೀಶ್ವರನ ಸೇವಾ ಕೈಂಕರ್ಯದಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಆತ್ಮೀಯ ಆಮಂತ್ರಣ .