

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ರೂಢಿಗತ ಪರಂಪರೆಯಂತೆ ಮನ್ಮಥ ಸಂವತ್ಸರದ ನೂತನ ಪಂಚಾಗ ಪಠಣ ಜರುಗಿತು. ವೆ. ಮೂ . ನಾರಾಯಣ ಪಂಡಿತರು ಶ್ರೀ ದೇವಾಲಯದ ಮಂಟಪದಲ್ಲಿ ಪಂಚಾಗ ಪಠಣ ಕಾರ್ಯಕ್ರಮ ನೆರವೇರಿಸಿದರು . ಉಪಾಧಿವಂತ ಮಂಡಳದ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.