ವಿಶ್ವ ಮಂಗಲ ಗೋ ಗ್ರಾಮ ಯಾತ್ರಾ : ವಿಶ್ವದೊಳಿತಿಗೆ ಗೋಮಾತೆಯ ಯಾತ್ರೆ.
ಶನಿವಾರ, ಜನವರಿ 31st, 2009 -
|| ಹರೇ ರಾಮ ||
ಪ್ರಿಯರೇ,
ಶ್ರೀ ಸಂಸ್ಥಾನ ಗೋಕರ್ಣ, ಶ್ರೀಮಜ್ಜಗದುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮನೋಸಂಕಲ್ಪದ ವಿಶ್ವಮಂಗಳ ಗೋ ಗ್ರಾಮ ಯಾತ್ರೆ ಯು ಇದೇ ಬರುವ (೨೦೦೯ ರ) ವಿಜಯದಶಮಿಯ ಸುಮುಹೂರ್ತ ದಲ್ಲಿ ಪ್ರಾರಂಭವಾಗಲಿದೆ. ವಿಶ್ವದೊಳಿತಿಗಾಗಿ ನಡೆಯುವ ಈ ಯಾತ್ರೆಯು ಭಾರತದಾದ್ಯಂತ ಸಾಗಿ ಭಾರತೀಯರಲ್ಲಿ ಗೋವಿನ ಬಗೆಗೆ ಕ್ರಾಂತಿಯನ್ನು ಮೂಡಿಸಲಿದೆ.
ಗೋ ಗ್ರಾಮ ಯಾತ್ರೆಯ ಮುನ್ನೋಟ :
-
೨೦೦೯ ರ ವಿಜಯದಶಮಿಯಂದು ಯಾತ್ರೆ ಶುಭಾರಂಭ
-
ಯಾತ್ರೆಯು 108 ದಿನಗಳ ಕಾಲ ನಡೆಯಲಿದೆ
-
ಭಾರತಾದ್ಯಂತ ಈ ಯಾತ್ರೆಯು ಒಟ್ಟು 400 ಕಾರ್ಯಕ್ರಮಗಳನ್ನು ನಡೆಸಿಕೊಡಲಿದೆ.
-
ಒಟ್ಟು ೨೦,೦೦೦ ಕಿಲೋಮೀಟರುಗಳನ್ನು ಕ್ರಮಿಸಲಿದೆ.
-
ದೇಶದಾದ್ಯಂತ ತಾಲೂಕು - ಜಿಲ್ಲೆ ಮಟ್ಟದಲ್ಲಿ ನಡೆಯುವ ಉಪ ಯಾತ್ರೆಗಳು ತಮ್ಮ ರಾಜ್ಯಗಳಲ್ಲಿ ಈ ಯಾತ್ರೆಯನ್ನು ಸೇರಲಿದೆ.
-
೨೧ ಕೋಟಿ ಸಹಿ ಅಭಿಯಾನವನ್ನು ಈ ಯಾತ್ರೆಯು ಹಮ್ಮಿಕೊಂಡಿದೆ.
-
ಸಾಂಸ್ಕೃತಿಕ ಕಾರ್ಯಕ್ರಮಗಳು, ಗೋ ಪೂಜೆ, ಗೋ ಸಂದೇಶ ಇತ್ಯಾದಿ ಕಾರ್ಯಕ್ರಮಗಳು ಯಾತ್ರೆಯಾದ್ಯಂತ ಹಮ್ಮಿಕೊಳ್ಳಲಾಗುವುದು.
-
ಗೋವನ್ನು ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಲು ಯಾತ್ರೆಯು ಒತ್ತಾಯಿಸುತ್ತದೆ.
-
ಕಸಾಯಿ ಖಾನೆಗಳ ಸಮಗ್ರ ನಿರ್ಮೂಲನಕ್ಕೆ ಯಾತ್ರೆ ಆಗ್ರಹಿಸುವುದು.
-
ಸಂವಿಧಾನಬದ್ಧ ಗೋ-ಹತ್ಯಾ ಕಾನೂನನ್ನುಜಾರಿಗೆ ತರಲು ಒತ್ತಾಯಿಸುತ್ತದೆ.
ಎಲ್ಲಾ ಗೋ-ಭಕ್ತರನ್ನು ಸಂಪರ್ಕಿಸಲು ಸಿದ್ಧತಾ ಯಾತ್ರೆಯನ್ನು ಅಕ್ಟೋಬರ್ ೨೦೦೮ ರಿಂದ ಫೆಬ್ರವರಿ ೨೦೦೯ ರ ತನಕ ನಡೆಸಲಾಗುವುದು.
~oO0Oo~
ಫೆಬ್ರವರಿ 24th, 2009 at 5:05 pm
we are ready to give full support for this yatra with all aspect- money, time-bringing friends
thanking you
ಮೇ 1st, 2009 at 5:34 pm
navella jothegiddeve