

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಶಿವಗಂಗಾ ವಿವಾಹ ಮಹೋತ್ಸವವು (ಗಂಗಾಷ್ಟಮಿಯ ದಿನ ಆದ ನಿಶ್ಚಿತಾರ್ಥದ ಪ್ರಕಾರ ) ಇದೇ ಬರುವ ಆಶ್ವೀಜ ಬಹುಳ ಚತುರ್ದಶಿ 10-11-2015, ಮಂಗಳವಾರ ಇಳಿ ಹೊತ್ತಿನಲ್ಲಿ ಗೋಕರ್ಣದಿಂದ ಸ್ವಲ್ಪ ದೂರದ ಸಮುದ್ರ ದಂಡೆಯಲ್ಲಿ ನೆರವೇರುತ್ತದೆ.ಸ್ಥಳೀಯ ಎಲ್ಲ ಜನಾಂಗದವರೂ ಈ ವಿವಾಹ ಮಹೋತ್ಸವದಲ್ಲಿ ಭಕ್ತಿ,ಶೃದ್ಧೆ, ಉತ್ಸಾಹ, ಸಂಭ್ರಮಗಳಿಂದ ಭಾಗವಹಿಸುತ್ತಾರೆ. ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡುತ್ತವೆ.