Donate

Help us to help others, please Donate

Related Links

e-Procurement Process 2015

Tender Application Form

Related Links

ಶಿವಗಂಗಾ ವಿವಾಹ ಮಹೋತ್ಸವ ಸಂಪನ್ನ

ಮಂಗಳವಾರ, ನವೆಂಬರ 10th, 2015 -

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಮನ್ಮಥ ಸಂವತ್ಸರದ ಶಿವಗಂಗಾ ವಿವಾಹ ಮಹೋತ್ಸವವು (ಗಂಗಾಷ್ಟಮಿಯ ದಿನ ಆದ ನಿಶ್ಚಿತಾರ್ಥದ ಪ್ರಕಾರ ) ಆಶ್ವೀಜ ಬಹುಳ ಚತುರ್ದಶಿ 10-11-2015, ಮಂಗಳವಾರ ಇಂದು ಇಳಿ ಹೊತ್ತಿನಲ್ಲಿ ಗೋಕರ್ಣದಿಂದ ಸ್ವಲ್ಪ ದೂರದ ಸಮುದ್ರ ದಂಡೆಯಲ್ಲಿ ಸಂಪನ್ನಗೊಂಡಿತು .

ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಜಾನಪದ ಹಾಡುಗಳು, ಹಾಲಕ್ಕಿ ಸಮುದಾಯದ ಸಾಂಪ್ರದಾಯಕ ಗುಮಟೆ ಪಾಂಗ್ ಉತ್ಸವಕ್ಕೆ ಮೆರುಗನ್ನು ನೀಡಿದವು .ಸಾಗರ ತೀರದಲ್ಲಿ ಜನಸಾಗರ ಸೇರಿತ್ತು .
ವಿವಾಹದ ನಂತರ ಶಿವ ಗಂಗಾ - ದೇವ ದಂಪತಿಗಳು ಶ್ರೀ ದೇವಾಲಯದ ‘ಅಮೃತಾನ್ನ’ ಕ್ಕೆ ಚಿತ್ತೈಸಿ ವಿಶೇಷ ಪೂಜೆ ಸ್ವೀಕರಿಸಿದರು . ಅಷ್ಟಾವಧಾನ ಸೇವೆ ಸಲ್ಲಿಸಲಾಯಿತು . ನಂತರ ಪ್ರಸಾದ ವಿತರಣೆ ಜರುಗಿತು . ಉಪಾಧಿವಂತ ಮಂಡಳಿಯ ಅಧ್ಯಕ್ಷರು , ಸದಸ್ಯರು , ಊರಜನರು , ಭಕ್ತಾದಿಗಳು ಹಾಜರಿದ್ದರು .

Leave a Reply

Highslide for Wordpress Plugin