

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಮಾಘ ಕೃಷ್ಣ ತೃಯೋದಶಿ - ಸೋಮವಾರ - ಶಿವಯೋಗದ ದಿನವಾದ ಇಂದು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭಕ್ತಸಾಗರ ಹರಿದಿದೆ .
ಬೃಹತ್ ಸಂಖೆಯಲ್ಲಿ ಸೇರಿದ್ದ ಭಕ್ತರು ಶಾಂತಿ - ಸಮಾಧಾನಗಳಿಂದ ಶ್ರೀ ಆತ್ಮಲಿಂಗ ಸ್ಪರ್ಶದರ್ಶನ, ಪೂಜೆ ಸೇವೆ ಕೈಗೊಂಡರು .
ಸಮುದ್ರ ತೀರದಿಂದ ದೇವಾಲಯದವರೆಗೆ ದರ್ಶನ ಸರದಿ ಸಾಲು ಹಬ್ಬಿತ್ತು . ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ
ಭಕ್ತಾದಿಗಳಿಗೆ ಶ್ರೀ ದೇವಾಲಯದ ವತಿಯಿಂದ ಅಮೃತಾನ್ನ ವಿಶೇಷ ಉಪಹಾರ ಪ್ರಸಾದ ವಿತರಿಸಲಾಯಿತು .