

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಶಿವರಾತ್ರಿ ಸಮಿತಿಯ ಮನ್ಮಥ ಸಂವತ್ಸರದ ಶಿವರಾತ್ರಿ ಮಹೋತ್ಸವದ ಪೂರ್ವಭಾವಿ ಸಭೆ 29-02-2016 ಸೋಮವಾರ ಜರುಗಿತು .
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಈ ವರ್ಷದ ಶಿವರಾತ್ರಿ ಮಹೋತ್ಸವವು ದಿನಾಂಕ 02-03-2016 ರಿಂದ ದಿನಾಂಕ 10-03-2016 ವರೆಗೆ ರೂಢಿಗತ ಪರಂಪರೆಯಂತೆ, ವೈಭವದಿಂದ ಜರುಗಲಿದೆ .
ಸಭೆಯಲ್ಲಿ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಶಿವರಾತ್ರಿ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ಡಾ ವಿ ಆರ್ ಮಲ್ಲನ್ , ಜಿ ಪಂ ಸದಸ್ಯರಾದ ಶ್ರೀ ಪ್ರದೀಪ ನಾಯಕ , ತಾ ಪಂ ಸದಸ್ಯ ಶ್ರೀ ಮಹೇಶ ಶೆಟ್ಟಿ ,ಶ್ರೀ ರಾಜೇಶ ನಾಯಕ , ಗ್ರಾ ಪಂ ಸದಸ್ಯರಾದ ಶ್ರೀ ರಮೇಶ ಪ್ರಸಾದ , ಶ್ರೀ ಮಹೇಶ ಮೂಡಂಗಿ , ಶ್ರೀ ಹೊನ್ನಪ್ಪ ಹಾಗೂ ಶ್ರೀ ಬೀರಣ್ಣ ನಾಯಕ ಅಡಿಗೋಣ ,ಡಾ ಶೀಲಾ ಹೊಸಮನೆ , ಶ್ರೀ ಎಂ ಎನ್ ಉಗ್ರು , ಶ್ರೀ ಜಯರಾಮ ಹೆಗಡೆ , ಶ್ರೀ ರಮೇಶ ಪಂಡಿತ , ಶ್ರೀ ವಾಸುದೇವ ಮೊರ್ಜೆ , ಶ್ರೀ ಸಿ ಜಿ ನಾಯಕ ದೊರೆ , ಶ್ರೀ ರಾಮೇಶ್ವರ ಕುರ್ಲೆ , ಶ್ರೀ ಪ್ರದೀಪ ನಾಯ್ಕ ಗೋಕರ್ಣ , ಶ್ರೀ ಶ್ರೀಧರ್ ಭಟ್ , ಶ್ರೀ ವೆಂಕಟೇಶ ಗೌಡ, ಶ್ರೀ ರಾಜಶೇಖರ ಭಾಗೆವಾಡಿ , ಶ್ರೀ ಮಧುಕರ ನಾಯಕ , ಹಾಗೂ ಸಮಿತಿಯ ಇತರ ಸದಸ್ಯರು ಉಪಸ್ಥಿತರಿದ್ದರು .
ಶಿವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ನಿವೃತ್ತ ನ್ಯಾಯಮೂರ್ತಿ , ಮಾಜಿ ರಾಜ್ಯಪಾಲರಾದ ನ್ಯಾ. ರಾಮ ಜೋಯಿಸರು ದಿನಾಂಕ 02-03-2016 ಸಾಯಂಕಾಲ 06.00 ಘಂಟೆಗೆ ನೆರವೇರಿಸಲಿದ್ದಾರೆ .
ದಿನಾಂಕ 07-03-2016 ರಂದು ಶಿವಯೋಗದ ಪುಣ್ಯ ಪರ್ವಕಾಲ ಇರುತ್ತದೆ . ದಿನಾಂಕ 09-03-2016 ರಂದು ಮಹಾರಥೋತ್ಸವ ಜರುಗಲಿದೆ . ಸಮುದ್ರ ತೀರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಬೃಹತ್ ವೇದಿಕೆ ಸಿದ್ಧಗೊಂಡಿದೆ . ದೇವಾಲಯವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದ್ದು , ಯಾತ್ರಿಕ ಭಕ್ತರ ಅನುಕೂಲಕ್ಕಾಗಿ ದೇವಾಲಯದಿಂದ ಸಮುದ್ರತೀರದ ವರೆಗೆ ಪೆಂಡಾಲ್ ಹಾಕಲಾಗಿದೆ. ‘ಅಮೃತಾನ್ನ’ ಪ್ರಸಾದ ಭೋಜನ ವ್ಯವಸ್ಥೆ ಎಂದಿನಂತೆ ಇರಲಿದೆ . ಸಮಿತಿಯ ಸದಸ್ಯರು ಸರ್ವರಿಗೂ ಹೃತ್ಪೂರ್ವಕ ಸ್ವಾಗತ ಕೋರಿರುತ್ತಾರೆ .