

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ಶಿವಗಂಗಾ ವಿವಾಹೋತ್ಸವವು ಆಶ್ವೀಜ ಬಹುಳ ಚತುರ್ದಶಿ ದಿನ ೨೯-೧೦-೨೦೧೬ ಶನಿವಾರ ವೈಭವದಿಂದ ಜರುಗಿತು . ಗೋಕರ್ಣದ ವಿಶಾಲವಾದ ಮಹಾಬಲೇಶ್ವರ ಕಡಲ ತೀರದಲ್ಲಿ ಸೂರ್ಯ ಪಶ್ಚಿಮಾ೦ಬುಧಿಗೆ ತೆರಳುತ್ತಿರುವ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತ ಜನರ ಸಮ್ಮುಖದಲ್ಲಿ ನಿಶ್ಚಯಿತ ವಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು. ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಹಾಲಕ್ಕಿ ಸಮಾಜದ ಗುಮಟೆಪಾಂಗ್ -ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು.
ವಿವಾಹದ ನಂತರ ದೇವದಂಪತಿಗಳಿಗೆ ಶ್ರೀ ದೇವಾಲಯದ ಅಮೃತಾನ್ನ ವಿಭಾಗದಲ್ಲಿ ರಾಜೋಪಚಾರ ಪೂಜೆ ಸಲ್ಲಿಸಲಾಯಿತು , ನಂತರ ಪ್ರಸಾದ ವಿತರಣೆ ಜರುಗಿತು . ಉತ್ಸವದಲ್ಲಿ ಸರ್ವಸಮುದಾಯದ ಜನರು ಶೃದ್ಧಾ -ಭಕ್ತಿಯಿಂದ ಭಾಗವಹಿಸಿದ್ದರು .