

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ರೂಢಿಗತ ಪರಂಪರೆಯಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು 24-08-2016 ಬುಧವಾರ ಸಾಯಂಕಾಲ ನಂದಿ ಮಂಟಪದಲ್ಲಿರುವ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ನೆರವೇರಲಿದೆ .
ನಾಳೆ ದಿನಾಂಕ 25-08-2016 ಗುರುವಾರ ಸಂಜೆ ‘ದಧಿ ಶಿಕ್ಯೋತ್ಸವ’ ಜರುಗಲಿದೆ . ಶ್ರೀದೇವರ ಉತ್ಸವವು ಬಿರುದು ಬಾವಲಿ, ಪಕ್ಕೆ-ಪರಾಕು ಸಮೇತ ವಾದ್ಯಗಳೊಂದಿಗೆ ಕೃಷ್ಣಾಪುರ ದೇವಾಲಯಕ್ಕೆ ತೆರಳುತ್ತದೆ . ಈ ಎಲ್ಲ ಕಾರ್ಯಕ್ರಮಗಳಿಗೆ ಸರ್ವರಿಗೂ ಆತ್ಮೀಯ ಆಮಂತ್ರಣ .