

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರಿಗೆ ಶ್ರೀ ಕ್ಷೇತ್ರ ಗೋಕರ್ಣ ಉಪಾಧಿವಂತ ಮಂಡಳಿ (ರಿ) ಇವರ ವತಿಯಿಂದ ಬೆಳ್ಳಿಯ ರಥವನ್ನು ಸಮರ್ಪಿಸಲಿದ್ದು , ಅದಕ್ಕಾಗಿ ದಿನಾಂಕ 13-02-2016, ಶುಕ್ರವಾರ ಸಾಯಂಕಾಲ ರಥವನ್ನು ಶ್ರೀ ವೆಂಕಟರಮಣ ದೇವಾಲಯದಿಂದ ವಾಲಗ, ವೇದಘೋಷ ಸಹಿತ ರಥಬೀದಿಯಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು . ಉಪಾಧಿವಂತ ಮಂಡಳಿಯ ಅಧ್ಯಕ್ಷರು, ಸದಸ್ಯರು , ಪ್ರಧಾನ ಅರ್ಚಕ ವೇ ಶಿತಿಕಂಠ ಹಿರೇ ಭಟ್ , ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಊರ ನಾಗರಿಕರು , ಭಕ್ತಾದಿಗಳು ಉಪಸ್ಥಿತರಿದ್ದರು.