

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಕೇಂದ್ರ ಸಚಿವ ಶ್ರೀ ಶ್ರೀಪಾದ ನಾಯ್ಕ ಇವರು ಭೇಟಿ ನೀಡಿ ಶ್ರೀ ಆತ್ಮಲಿಂಗಕ್ಕೆ ರುದ್ರಾಭಿಷೇಕ, ನವಧಾನ್ಯಭಿಷೇಕ , ಸುವರ್ಣ ನಾಗಾಭರಣ ಪೂಜೆ ನೆರವೇರಿಸಿದರು . ಶ್ರೀ ದೇವಾಲಯದ ಪೂಜಾ ಪದ್ಧತಿ , ನಿರ್ವಹಣೆ ಬಗ್ಗೆ ಸಂತಸ ವ್ಯಕ್ತಪಡಿಸಿದರು . ವೇ ಬಾಲಕೃಷ್ಣ ಜಂಭೆ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು . ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ ಗೌರವಿಸಿದರು .