

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ದೇವಾಲಯಕ್ಕೆ ಈ ದಿನ ಮಾಜಿ ಪ್ರಧಾನಿ ಶ್ರೀ ಎಚ್. ಡಿ ದೇವೇಗೌಡರು ಭೇಟಿ ನೀಡಿ ಶ್ರೀ ಆತ್ಮಲಿಂಗದ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ದೇವಾಲಯದ ವತಿಯಿಂದ ಜಿ. ಕೆ ಹೆಗಡೆ ಸ್ವಾಗತಿಸಿ ಶಾಲು ಹೊದೆಸಿ ಸನ್ಮಾನಿಸಿದರು.
ಶ್ರೀ ಕ್ಷೇತ್ರ ಗೋಕರ್ಣ ಉಪಾಧಿವಂತ ಮಂಡಲದ ಅಧ್ಯಕ್ಷರ ವೇ. ಗಣೇಶ್ ಭಟ್ಟ ಹಿರೇಗಂಗೆ ಪ್ರಧಾನ ಅರ್ಚಕರಾದ ವೇ. ಶಿತಿಕಂಠ ಹಿರೇ
ಹಾಗೂ ಉಪಾಧಿವಂತ ಮಂಡಲದ ಸದಸ್ಯರು ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.
ಹವನ, ಅಭಿಷೇಕ, ಸುವರ್ಣ ನಾಗಾಭರಣ ಪೂಜೆ ನೆರವೇರಿಸಿದ ಶ್ರೀಯುತರು ಶ್ರೀ ದೇವಾಲಯದ ಅಮೃತಾನ್ನ ವಿಭಾಗದಲ್ಲಿ ಪ್ರಸಾದ ಸ್ವೀಕರಿಸಿದರು .