

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಗಣೇಶ ಚತುರ್ಥಿ ಪ್ರಯುಕ್ತ ಗಣಪನ ಮೂರ್ತಿಯನ್ನು ವೆಂಕಟರಮಣ ದೇವಾಲಯದಿಂದ ಪಲ್ಲಕ್ಕಿ ಉತ್ಸವದಲ್ಲಿ ವಾಲಗ ,ಕಟ್ಟಿಗೆ , ದೀವಟಿಗೆ ಸಮೇತ ವೈಭವದಿಂದ ಕರೆತರಲಾಯಿತು . ಇಂದು ವಿಶೇಷ ಪಂಚಭಕ್ಷ ನೈವೇದ್ಯ , ಮಹಾಮಂಗಳಾರತಿ ನಡೆಯಲಿದೆ. ದಿನಾಂಕ 19-09-2015 ಶನಿವಾರ ಸಾಯಂಕಾಲ ದಂಡಾವಳಿ ಪೂಜೆ , ವಿದ್ವಜ್ಜನರಿಂದ ವೇದಸಭೆ ಜರುಗಲಿದೆ . ನಾಲ್ಕನೇ ದಿನ ಗಣಪತಿ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂಡ್ರಿಸಿ , ವೆಂಕಟರಮಣ ದೇವಾಲಯದವರೆಗೆ ಹೋಗಿ ಅಲ್ಲಿಂದ ರಥಬೀದಿಯಲ್ಲಿ ಬಿರುದು-ಬಾವಲಿ, ಪಕ್ಕೆ-ಪರಾಕು ಸಹಿತ ಮೆರವಣಿಗೆಯಲ್ಲಿ ಸಮುದ್ರಕ್ಕೆ ತಂದು ವಿಸರ್ಜನೆ ಮಾಡಲಾಗುತ್ತದೆ . ಅಂದು ಶ್ರೀ ಮಹಾಬಲೇಶ್ವರ ದೇವಾಲಯದ ಗಣಪತಿ ಮೂರ್ತಿಯನ್ನು ವಿಸರ್ಜಿಸಿದ ನಂತರವೇ ಊರಿನ ಗಣಪತಿ ಮೂರ್ತಿಗಳನ್ನು ಸಮುದ್ರಕ್ಕೆ ತಂದು ವಿಸರ್ಜಿಸಲಾಗುತ್ತದೆ.