

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಇಂದು ಆಗಮಿಸಿ ಶ್ರೀ ಮಹಾಬಲೇಶ್ವರ , ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು .
“ಕಳೆದ ೨೧ ತಿಂಗಳುಗಳ ನಂತರ ಶ್ರೀ ಸವಾರಿಯ ಸಂಚಾರವು ಶ್ರೀ ಕ್ಷೇತ್ರ ಗೋಕರ್ಣದ ಮೂಲಕ ಪ್ರಾರಂಭಗೊಂಡಿದೆ , ನಮ್ಮ ಮೂಲ ಸ್ಥಾನವಾದ ಸಾರ್ವಭೌಮ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರು ಮತ್ತು ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿ ಈ ವಿಜಯ ಯಾತ್ರೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಶ್ರೀ ಶ್ರೀಗಳವರು ತಿಳಿಸಿದರು . ”
ಈ ಸಂದರ್ಭದಲ್ಲಿ ವಿಜಯವಾಣಿ ಪತ್ರಿಕೆಯವರು ಪ್ರಕಟಿಸಿರುವ “ಸಂಸ್ಕೃತಿ” ವಿಶೇಷ ಪುರವಣಿಯನ್ನು ಪರಮಪೂಜ್ಯರು ಬಿಡುಗಡೆಗೊಳಿಸಿದರು .
ಶ್ರೀ ದೇವಾಲಯದ ವತಿಯಿಂದ ಪ್ರಾರಂಭಗೊಂಡ ನೀರಿನ ಕೊರತೆಯ ಗ್ರಾಮಗಳಿಗೆ ನೀರು ವಿತರಿಸುವ “ಜೀವಜಲ ಉಚಿತ ವಿತರಣೆ” ಯೋಜನೆಗೆ ಆಶೀರ್ವಾದ ಪೂರ್ವಕ ಶುಭಕೋರಿದರು .
ಶ್ರೀ ದೇವಾಲಯಕ್ಕಾಗಿ ಶ್ರೀ ಕ್ಷೇತ್ರ ಗೋಕರ್ಣದ ಉಪಾಧಿವ೦ತ ಮಂಡಳಿಯವರು ತಯಾರಿಸುತ್ತಿರುವ ಬೆಳ್ಳಿಯ ರಥ ಕಾಮಗಾರಿಯನ್ನು ಅವಲೋಕಿಸಿ ಇದೊ೦ದು ಸ್ತುತ್ಯ ಕಾರ್ಯ . ಬೇಗ ಕಾಮಗಾರಿ ಪೂರ್ಣಗೊಳ್ಳಲಿ ಎಂದು ಆಶಿಸಿದರು .