

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಶ್ರೀ ಸದಾಶಿವ ಮಹಾರಾಜ್ ಗುಲ್ಬರ್ಗ ಇವರು ಶಿಷ್ಯವೃಂದವನ್ನು ಒಡಗೂಡಿ ಶ್ರೀ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು . ಪ್ರಧಾನ ಅರ್ಚಕ ವೇ. ಶಿತಿಕಂಠ ಹಿರೇ ಭಟ್, ವೇ ನರಸಿಂಹ ಉಪಾಧ್ಯ ಮತ್ತು ಇತರ ಉಪಾಧಿವಂತ ಪುರೋಹಿತರು ಪೂಜಾ ಕೈಂಕರ್ಯ ನೆರವೇರಿಸಿದರು . ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿ, ಶಾಲು ಹೊದೆಸಿ ಸನ್ಮಾನಿಸಿದರು .