Donate

Help us to help others, please Donate

Related Links

e-Procurement Process 2015

Tender Application Form

Related Links

‘ಸಾರ್ವಭೌಮ ವಿದ್ಯಾರ್ಥಿ ವೇತನ’ವಿತರಣಾ ಕಾರ್ಯಕ್ರಮ

ಮಂಗಳವಾರ, ಜನವರಿ 12th, 2016 -

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಸಾರ್ವಭೌಮಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಗೋಕರ್ಣ, ಸಗಡಗೇರಿ, ನಾಡುಮಾಸ್ಕೇರಿ, ಅಗ್ರಗೋಣ , ತೊರ್ಕೆ, ಹನೇಹಳ್ಳಿ,ಹಿರೇಗುತ್ತಿ , ಬರ್ಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಅರ್ಹವಿದ್ಯಾರ್ಥಿಗಳಿಗೆ ಯಾವುದೇ ಜಾತಿ-ಮತ ಬೇಧವಿಲ್ಲದೆ , ವಿದ್ಯಾರ್ಜನೆಗೆ ಪ್ರೋತ್ಸಾಹದಾಯಕವಾಗಿ ‘ಸಾರ್ವಭೌಮ ವಿದ್ಯಾರ್ಥಿ ವೇತನ’ ನೀಡುತ್ತಿದ್ದು , ದಿನಾಂಕ ೧೦-೦೧-೨೦೧೬ ರಂದು ದ್ವಿತೀಯ ವರ್ಷದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ಶ್ರೀ ಮಹಾಬಲೇಶ್ವರ ದೇವಾಲಯದ ಅಮೃತಾನ್ನ ಭವನದಲ್ಲಿ ಜರುಗಿತು .
ಇಂಜಿನಿಯರಿಂಗ್ / ಮೆಡಿಕಲ್ / ಎಮ್ ಬಿ ಎ ಕಲಿಯುತ್ತಿರುವ 31 ವಿದ್ಯಾರ್ಥಿಗಳು , ನರ್ಸಿಂಗ್ / ಡಿಪ್ಲೋಮಾ ಕಲಿಯುತ್ತಿರುವ 112 ವಿದ್ಯಾರ್ಥಿಗಳು , ಪದವಿ ವ್ಯಾಸಂಗ ಮಾಡುತ್ತಿರುವ 298 ವಿದ್ಯಾರ್ಥಿಗಳು ಮತ್ತು ಪಿಯುಸಿ ಕಲಿಯುತ್ತಿರುವ 208ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಸ್ವೀಕರಿಸಿದರು . ಒಟ್ಟೂ 649 ವಿದ್ಯಾರ್ಥಿಗಳಿಗೆ 19,41,000 ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು .
ಕಾರ್ಯಕ್ರಮದ ಉದ್ಘಾಟನೆಯನ್ನು ನುಡಿಜೇನು ಪತ್ರಿಕೆಯ ಸಂಪಾದಕ ಶ್ರೀ ಬಿ ಹೊನ್ನಪ್ಪ ನೇರವೇರಿಸಿದರು . ಮುಖ್ಯ ಅತಿಥಿಗಳಾಗಿ ಉಪಾಧಿವಂತ ಮಂಡಳಿಯ ಅಧ್ಯಕ್ಷ ವೇ ಗಣೇಶ ಭಟ್ ಹಿರೇಗಂಗೆ , ಜಿ ಪಂ ಸದಸ್ಯ ಶ್ರೀ ಪ್ರದೀಪ ನಾಯಕ , ಶ್ರೀ ಮಹಾಬಲೇಶ್ವರ ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಸಾರ್ವಭೌಮ ವಿದ್ಯಾನಿಧಿ ಸಮಿತಿಯ ಸಂಯೋಜಕರಾದ ಶ್ರೀ ಮುರಳೀಧರ ಪ್ರಭು ಕುಮಟಾ, ಶ್ರೀ ರಾಜೀವ ಗಾಂವಕರ್ ಹಿರೇಗುತ್ತಿ , ಶ್ರೀ ಮಠದ ವಿದ್ಯಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಶಾರದಾ ಜಯಗೋವಿಂದ , ಸಿದ್ದಾರ್ಥ ಫೌಂಡೇಶನ್ ನ ಶ್ರೀಮತಿ ರೀಮಾ ನಾಯರ್ ,ಶ್ರೀ ಬೀರಣ್ಣ ನಾಯಕ ಅಡಿಗೋಣ , ಗ್ರಾ ಪಂ ಸದಸ್ಯ ಶ್ರೀ ಮಹೇಶ ಶೆಟ್ಟಿ , ಹಾಗೂ ಊರ ನಾಗರೀಕರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು . ಶಿಕ್ಷಕರಾದ ಶ್ರೀ ಸಿ ಜಿ ನಾಯಕ ದೊರೆ ಹಾಗೂ ಶ್ರೀ ರಾಜಶೇಖರ ಭಾಗೆವಾಡಿ ಇವರು ಕಾರ್ಯಕ್ರಮ ನಿರೂಪಿಸಿದರು .

Leave a Reply

Highslide for Wordpress Plugin