ತಾಮ್ರಪರ್ಣಿ
ಮಂಗಳವಾರ, ಜುಲಾಯಿ 1st, 2014ತಾಮ್ರಾಚಲ ಪರ್ವತದಿಂದ ಹರಿದು ಬಂದು ಸಾಗರ ಸೇರುವ ನದಿಯಾಗಿತ್ತೆಂದು ಪುರಾಣದಲ್ಲಿ ಉಲ್ಲೇಖಿದೆ . ತಾಮ್ರಗೌರಿ ದೇವಾಲಯದ ಎದುರಿನಲ್ಲಿ ಒಂದು ಕೊಳದ ರೂಪದಲ್ಲಿ ಮಾತ್ರ ಉಳಿದುಕೊಂಡಿದೆ . ಈ ಸ್ಥಳ ಆಸ್ತಿ ವಿಸರ್ಜನೆಗೆ ಖ್ಯಾತ ಸ್ಥಳ .


Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ತಾಮ್ರಾಚಲ ಪರ್ವತದಿಂದ ಹರಿದು ಬಂದು ಸಾಗರ ಸೇರುವ ನದಿಯಾಗಿತ್ತೆಂದು ಪುರಾಣದಲ್ಲಿ ಉಲ್ಲೇಖಿದೆ . ತಾಮ್ರಗೌರಿ ದೇವಾಲಯದ ಎದುರಿನಲ್ಲಿ ಒಂದು ಕೊಳದ ರೂಪದಲ್ಲಿ ಮಾತ್ರ ಉಳಿದುಕೊಂಡಿದೆ . ಈ ಸ್ಥಳ ಆಸ್ತಿ ವಿಸರ್ಜನೆಗೆ ಖ್ಯಾತ ಸ್ಥಳ .
ನಾಗ ಶಾಪ ವಿಮೋಚನೆಗಾಗಿ ಹಾಗೂ ಸಂತಾನ ಫಲ ಪ್ರಾಪ್ತಿಗಾಗಿ ಈ ದೇವಾಲಯ ಪ್ರಸಿದ್ಧ . ಕೋಟಿ ತೀರ್ಥದಿಂದ ಮಹಾಬಲೇಶ್ವರ ದೇವಾಲಯಕ್ಕೆ ಬರುವ ಮಾರ್ಗದಲ್ಲಿ ಈ ದೇವಾಲಯ ಇದೆ .
ಮಾರ್ಕಾಂಡೇಯನಿಂದ ಸ್ಥಾಪಿಸಿದ ಗಣಪತಿ “ಹಿತ್ತಲ ಗಣಪತಿ”. ಈ ದೇವಾಲಯ ಗೋಕರ್ಣದ ರಥಬೀದಿಯಲ್ಲಿದೆ.
ಪುರಾಣದ ಪ್ರಕಾರ ಬ್ರಹ್ಮನ ಮಾನಸ ಪುತ್ರಿ ಸುರಭಿಯು ತಪವನ್ನಾಚರಿಸಿದ ಸ್ಥಳ ಪಿತೃಸ್ಥಾಲೇಶ್ವರ , ಮೋಕ್ಷ ಸ್ಥಳವೆಂದು ಪ್ರತೀತಿ . ರುದ್ರಪಾದ ಇಲ್ಲಿ ಮಾಡಿದ ಪಿತೃ ಕಾರ್ಯಗಳು ಅನಂತ ಫಲದಾಯಕ .
ಶಿವನಿಂದ ವರ ಪಡೆದ ಖರ ರಕ್ಕಸನನ್ನು ವಿಷ್ಣುವು ಮೋಹಿನಿಯ ರೂಪ ಧರಿಸಿ ಖರನನ್ನು ಸಂಹರಿಸಿದನು . ಶಿವನು ಇದರಿಂದ ಸಂಪ್ರೀತನಾಗಿ ಹರಿಯೊಂದಿಗೆ ಹರ ನೆಲೆಸಿದ ಈ ಸ್ಥಳವೇ “ಶಂಕರ ನಾರಾಯಣ ” ಎಂದು ಪ್ರಸಿದ್ಧಿಯಾಯಿತು .
ಪರಶಿವನ ಪೂಜಿಸಿ ಶ್ರೀ ಕೃಷ್ಣನು ಬಾಣಾಸುರ ನೊಂದಿಗೆ ಹೋರಾಡಿ ಸೋಲಿಸಿದನು . ಕೃಷ್ಣಾಷ್ಟಮಿಯ ದಿನ ಶ್ರೀ ಮಹಾಬಲೇಶ್ವರ ದೇವರ ಉತ್ಸವಮೂರ್ತಿ ಇಲ್ಲಿಗೆ ಬರುತ್ತದೆ . ಈ ಗುಡಿಯು ಕೋಟಿತೀರ್ಥದ ಕಟ್ಟೆಯ ಮೇಲಿದೆ .
ಋಷಿ ಮುನಿಗಳು ಪಾತಾಳದಲ್ಲಿರುವ ಗಂಗೆಯನ್ನು ಪಡೆಯಲು ಮಾರ್ಗವನ್ನು ತಿಳಿಯಲು ಮುಂದಾದರು . ಗಣಪತಿಯನ್ನು ಕೋಟಿತೀರ್ಥದ ಆಗ್ನೇಯ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ ಬೇಡಿದರು . ಗಣಪತಿಯು ಶಿವಭಕ್ತ ಸುಮಿತ್ರನ ಮುಖಾಂತರ ಪರಮೇಶ್ವರನನ್ನು ಸಂಪರ್ಕಿಸಿ ಪಡೆಯಬಹುದೆಂಬ ಉಪಾಯವನ್ನು ತಿಳಿಸಿದನು . ಋಷಿ ಮುನಿಗಳು ಈ ಮೂಲಕ ಗಂಗೆಯನ್ನು ಪಡೆದರು . ಋಷಿ ಮುನಿಗಳ ಚಿಂತೆ ದೂರ ಮಾಡಿದ ಗಣಪತಿಯನ್ನು ಪಟ್ಟ ವಿನಾಯಕ ಎಂದು ಕರೆದರು .
ದೇವತೆಗಳ ಆವಾಸಸ್ಥಳ ಶತಶೃಂಗ ಪರ್ವತದಲ್ಲಿ ನೆಲೆನಿಂತ ದುರ್ಗೆಯೇ ವೈತರಣಿ ದೇವಿ .
ಶಿವ-ಪಾರ್ವತಿ ಇವರು ಗೋಕರ್ಣದ ಶತಶೃಂಗ ಪರ್ವತದಲ್ಲಿ ‘ಉಮಾ-ಮಹೇಶ್ವರ’ರಾಗಿ ನೆಲೆನಿಂತ ಕ್ಷೇತ್ರ . ಪೌರಾಣಿಕ ಹಾಗೂ ನೈಸರ್ಗಿಕವಾಗಿ ಪ್ರಸಿದ್ಧ ಸ್ಥಳ .
ರಾವಣನನ್ನು ಕೊಂದ ಪಾಪ ಪರಿಹಾರಕ್ಕಾಗಿ ವಸಿಷ್ಟರ ಅಪ್ಪಣೆಯಂತೆ ಶ್ರೀರಾಮನು ಸಮುದ್ರ ತೀರದಲ್ಲಿ ಕುಳಿತು ಗುಡಿಯನ್ನು ನಿರ್ಮಿಸಿ ತಪವನ್ನು ಕೈಗೊಂಡನು . ವರ್ಷದ ಎಲ್ಲ ದಿನಗಳಲ್ಲಿಯೂ ದೊರಕುವ ಪರಿಶುದ್ಧವಾದ ಖನಿಜಯುಕ್ತ ನೀರಿನ ಸೆಲೆ ಇದೆ . ಇದು ‘ರಾಮತೀರ್ಥ’ ಎಂದು ಪ್ರಸಿದ್ಧಿಯಾಗಿದೆ .