Donate

Help us to help others, please Donate

Related Links

e-Procurement Process 2015

Tender Application Form

Related Links

Gou Garbha

ಗೋ-ಗರ್ಭ

ರವಿವಾರ, ಜೂನ್ 29th, 2014

ಸಾತ್ವಿಕ ಸೃಷ್ಟಿ ಮಾಡಲು ಪಾತಾಳದಲ್ಲಿ ಶಿವ ತಪಸ್ಸನ್ನು ಆಚರಿಸುತ್ತಿರುವಾಗ ಬ್ರಹ್ಮನು ಸೃಷ್ಟಿ ಕಾರ್ಯವನ್ನು ತಾನೇ ಆರಂಭಿಸಿದ. ಇದರಿಂದ ಕೋಪಗೊಂಡ ಶಿವ ಭೂಮಿಯನ್ನು ಸೀಳಿ ಹೊರಬರುವುದಾಗಿ ನಿಶ್ಚಯಿಸಿದಾಗ ಭೂದೇವಿಯು ಅಂಜಿ ತಾನು ಗೋ-ರೂಪ ಧರಿಸುವುದಾಗಿಯೂ ಆಗ ತನ್ನ ಕಿವಿಯಿಂದ ಹೊರಬಂದು ತನ್ನನ್ನು ಉಳಿಸುವಂತೆಯೂ ಬೇಡಿಕೊಳ್ಳುತ್ತಾಳೆ. ಇದಕ್ಕೆ ಒಪ್ಪಿದ ಶಿವನು ಗೋ-ರೂಪ ಧರಿಸಿದ ಭೂದೇವಿಯ ಕಿವಿಗಳಿಂದ ಹೊರಬಂದ ಎಂಬುದು ಈ ಸ್ಥಳದ ಪೌರಾಣಿಕ ಹಿನ್ನೆಲೆ. ಶ್ರೀ ಮಹಾಬಲೇಶ್ವರ ದೇವಾಲಯದಿಂದ ಹನುಮ ಜನ್ಮ ಭೂಮಿ-ಕುಡ್ಲೆ ಬೀಚ್ ಮಾರ್ಗದಲ್ಲಿ ಈ ಸ್ಥಳವಿದೆ.

Maneshwara Temple

ಮಾಣೇಶ್ವರ ಗುಡಿ

ರವಿವಾರ, ಜೂನ್ 29th, 2014

ಶತಶೃಂಗ ಪರ್ವತದ ತುದಿಯಲ್ಲಿ ಸಮುದ್ರ ತೀರದ ಬಳಿ ಮಾಣೇಶ್ವರ ಗುಡಿಯಿದೆ . ಪುರಾಣ ಪ್ರಕಾರ ಗೋಕರ್ಣ ಯಾತ್ರೆಗೆ ಬಂದ ಮಣಿಭದ್ರನಿಗೆ ಗೋಕರ್ಣವೆಲ್ಲ ಲಿಂಗಮಯವಾಗಿ ಕಂಡಿತಂತೆ . ಶಿವಭಕ್ತ ಮಾಣೇಶ್ವರ ಕಾಲನ್ನು ಊರಲಾಗದೇ ತಲೆಕೆಳಗಾಗಿ ನಿಂತನು . ಇಲ್ಲಿ ಮಾಣೇಶ್ವರನ ಪಾದವಿದೆ .

Mallikarjuna Temple

ಅಶೋಕೆ

ಶನಿವಾರ, ಜೂನ್ 28th, 2014

ಅಶೋಕೆ ಇದು ಶಾಂಕರಪೀಠವಾದ ಅವಿಚ್ಛಿನ್ನಗುರುಪರಂಪರೆಯ ಶ್ರೀರಾಮಚಂದ್ರಾಪುರಮಠದ ಸ್ಥಾಪನೆಗೂ ಕಾರಣವಾಗಿದೆ. ಮಲ್ಲಿಕಾರ್ಜುನ ದೇವಸ್ಥಾನ, ಮೂಲ ರಘೂತ್ತಮ ಮಠ, ವಿದ್ಯಾಮಂದಿರ ನಿರ್ಮಾಣ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಸಾಗಿದೆ .

ಸಮುದ್ರ ತೀರಗಳು

ಸಮುದ್ರ ತೀರಗಳು

ಶನಿವಾರ, ಜೂನ್ 28th, 2014

ವಿಶ್ವ ವಿಖ್ಯಾತ ಸಮುದ್ರ ತೀರವನ್ನು ಹೊಂದಿರುವ ಗೋಕರ್ಣ ಪ್ರಸಿಧ್ಧ ಪ್ರವಾಸೀ ಕೇಂದ್ರ ಎನಿಸಿದೆ. ಶ್ರೀ ಮಹಾಬಲೇಶ್ವರ ದೇವಾಲಯದ ಎದುರಿನ ‘ಮಹಾಬಲೇಶ್ವರ ಮುಖ್ಯ ಕಡಲ ತೀರ’, ‘ಓಂ ಕಡಲತೀರ ‘, ಕುಡ್ಲೆ ಕಡಲತೀರ’ , ‘ಅರ್ಧಚಂದ್ರ ಕಡಲ ತೀರ’ ಇವು ಪ್ರಸಿಧ್ಧಿ ಪಡೆದಿವೆ . ದೇಶ ವಿದೇಶಗಳ ಪ್ರವಾಸಿಗರ ಮನ ಸೆಳೆವ ವಾತಾವರಣ ಇದೆ. ಕಡಲು-ಕಾನನಗಳ ಮಿಶ್ರಣ ಗೋಕರ್ಣ .

ಮಹಾಗಣಪತಿ

ಮಹಾಗಣಪತಿ

ಶನಿವಾರ, ಜೂನ್ 28th, 2014

ವಟುರೂಪದಲ್ಲಿ ಬಂದು ಪರಶಿವನ ಆತ್ಮಲಿಂಗವನ್ನು ಸ್ಥಾಪಿಸಿದ ಗಣಪತಿಯು ಪಶ್ಚಿಮಾಭಿಮುಖವಾಗಿ ಕುಳಿತಿದ್ದಾನೆ . ಭಕ್ತಾದಿಗಳ ಇಷ್ಟಾರ್ಥ ನೆರವೇರಿಸುತ್ತ ಗೋಕರ್ಣದಲ್ಲಿ ನೆಲೆನಿಂತ ಗಣಪತಿ ಆದಿಪೂಜಿತನಾಗಿದ್ದಾನೆ . ಕೊಟ್ಟೆ ಕಡುಬಿನ ಪೂಜೆ ಇಲ್ಲಿ ವಿಶೇಷ .

ಶ್ರೀ ಆತ್ಮಲಿಂಗ

ಶ್ರೀ ಆತ್ಮಲಿಂಗ

ಶನಿವಾರ, ಜೂನ್ 28th, 2014

ತ್ರಿಲೋಕಬಾಧಕನಾಗಿದ್ದ ರಾವಣನು ಈ ಪ್ರಾಣಲಿಂಗದ ಪ್ರಭಾವನ್ನು ತಿಳಿದು ಶಿವನಿಂದ ಈ ಪ್ರಾಣಲಿಂಗವನ್ನು ಪಡೆಯಲು ತಪಸ್ಸನ್ನಾಚರಿಸಿ, ಈಶ್ವರನನ್ನು ಮೆಚ್ಚಿಸಿ ಲಿಂಗವನ್ನು ಪಡೆದ. ಜೊತೆಗೆ ಈಶ್ವರನಿಂದ ಈ ಲಿಂಗನ್ನು ಎಂದೂ ಭೂಮಿಯಮೇಲೆ ಇಡತಕ್ಕದ್ದಲ್ಲ ಎಂಬ ಎಚ್ಚರಿಕೆಯನ್ನೂ ಪಡೆದಿದ್ದ. ದೇವರ್ಷಿಪೀಡಕನಾಗಿ ಲೋಕಕಂಟಕನಾದ ರಾವಣನು ಈ ಲಿಂಗವನ್ನು ಪಡೆದರೆ ಆಗಬಹುದಾದ ವಿಪತ್ತನ್ನು ಅರಿತ ದೇವತೆಗಳು ವಿಷ್ಣುವನ್ನು ಕಂಡು ತಮ್ಮ ಭಯವನ್ನು ನಿವೇದಿಸಿದರು.ಹಾಗೂ ಆತನ ಸೂಚನೆಯಂತೆ ನಡೆದ ದೇವಕಾರ್ಯದಲ್ಲಿ ವಟುರೂಪಿಯಾದ ಗಣಪತಿಯೂ ಪಶ್ಚಿಮಸಮುದ್ರತೀರದಲ್ಲಿ ರಾವಣನೆದುರಾದ. ವಿಷ್ಣುಮಾಯೆಯಿಂದ ಸಂಧ್ಯಾಸಮಯವಾಗಲು, ನಿತ್ಯಕರ್ಮತತ್ಪರನಾದ ರಾವಣನು, ತಾನು ಸಂಧ್ಯಾಕಾರ್ಯ ಮುಗಿಸಿ […]

‘ಗುಡಿಯ ನೋಡಿರಣ್ಣ’ - ಸುವರ್ಣ ನ್ಯೂಸ್

ಶನಿವಾರ, ಜುಲಾಯಿ 20th, 2013

ಸುವರ್ಣ ನ್ಯೂಸ್ ವಾಹಿನಿಯಲ್ಲಿ ಪ್ರಕಟವಾದ ‘ಗುಡಿಯ ನೋಡಿರಣ್ಣ’ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯ.

Highslide for Wordpress Plugin