Donate

Help us to help others, please Donate

Related Links

e-Procurement Process 2015

Tender Application Form

Related Links

ಗೋಕರ್ಣ ಬದಲಾಗುತ್ತಿದೆ.2 - ಶ್ರೀ ದು ಗು ಲಕ್ಷ್ಮಣ್

ಗೋಕರ್ಣ ಬದಲಾಗುತ್ತಿದೆ : ಹೊಸದಿಗಂತ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ಅವರ ನೇರನುಡಿಯ ಬರಹ

ಮಂಗಳವಾರ, ಮಾರ್ಚ 3rd, 2009

ಮೊನ್ನೆ ಸಂಪನ್ನಗೊಂಡ ಶಿವರಾತ್ರಿಯ ಬಗ್ಗೆ ಹೊಸದಿಗಂತದ ಪ್ರಧಾನ ಸಂಪಾದಕರಾದ ಶ್ರೀ ದು.ಗು.ಲಕ್ಷ್ಮಣ್ ರವರು ತಮ್ಮ ನೇರನುಡಿ ಅಂಕಣದಲ್ಲಿ ಅನುಭವ - ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಓದಿ, ಅಭಿಪ್ರಾಯ ತಿಳಿಸಿ . . .

Rathotsava at Gokarna on the occasion of Shivaratri Festival

18 to 26 Feb: Gokarna- Shivaratri 2009 brought the Shining back to the temple

ಗುರುವಾರ, ಫೆಬ್ರವರಿ 26th, 2009

Gokarna Feb, 26 - As per the holy guidance of Sri Raghaveshwara Bharati Swamiji, the nine-day Maha Shivaratri festival commenced from 18th of February till today, 26th. Religious, Cultural and many other entertaining programs commenced on the venue to make the first ever Mahashivaratri conducted by Sri Matha, a grand success. Many traditional cultural programs, […]

ಶ್ರೀ ಶ್ರೀ ರಾಘವೇಶ್ವರ ಭಾರತಿ ಸ್ವಾಮಿಜಿಯವರ ಆಶೀರ್ವಚನ

ಶಿವರಾತ್ರಿಯ ಸಮಾರೋಪ ಹಲವು ಹೊಸತುಗಳಿಗೆ ನಾಂದಿಯಾಗಲಿದೆ : ರಾಘವೇಶ್ವರ ಶ್ರೀ

ಗುರುವಾರ, ಫೆಬ್ರವರಿ 26th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೬ - ಪ್ರತಿಯೊಂದು ರಾತ್ರಿಯೂ ಶುಭ ಮುಂಜಾವಿನ ಪೂರ್ವರಂಗ. ಅಂತೆಯೇ ಶಿವರಾತ್ರಿಯ ಈ ಪರ್ವವು ಸಹ ಎಷ್ಟೋ ಕಾಲದಿಂದ ಅವ್ಯವಾಗಿದ್ದ ಆತ್ಮಲಿಂಗ ಸ್ವರೂಪಿಯಾದ ಶಿವ ತನ್ನ ವಿರಾಟ್ ಸ್ವರೂಪವನ್ನು ತೋರಿಸಿದ್ದಾನೆ. ’ಹರಹರ ಮಹಾದೇವ’ ಎಂಬ ಘೋಷಣೆಯಲ್ಲಿ ಉಳಿದೆಲ್ಲ ಶಬ್ದಗಳು ಮುಚ್ಚಿ ಹೋದವು ಎಂದು ಶ್ರೀ ರಾಘವೇಶ್ವರಭಾರತೀ ಶ್ರೀಗಳು ಮಹಾಶಿವರಾತ್ರಿ ಮಹೋತ್ಸವದ ಸಮಾರೋಪ ಸಭೆಯಲ್ಲಿ ನುಡಿದರು. ಇದು ಶಿವರಾತ್ರಿಯ ಸಮಾರೋಪ. ಆದರೆ ಹಲವು ಕಾರ್ಯಗಳ ಆರಂಭಕ್ಕೆ ನಾಂದಿ. ಫೆ.೨೭ರಂದು ಇಲ್ಲಿ ಗುರುಕುಲದ ಆರಂಭವಾಗುತ್ತಿದೆ. ಬರುವ […]

ಗೋಕರ್ಣದ  ಶಿವರಾತ್ರಿಯ ವಿಶೇಷ ವಿವರಗಳು

ಗೋಕರ್ಣ : ನಾಲ್ಕು ದಿಕ್ಕು, ನೂರು ಧ್ವನಿ

ಗುರುವಾರ, ಫೆಬ್ರವರಿ 26th, 2009

ಗೋಕರ್ಣ, ಫೆ.೨೬ - ಮಹಾಶಿವರಾತ್ರಿ ಉತ್ಸವ ವಿಧ್ಯುಕ್ತವಾಗಿ ಮಂಗಲವನ್ನು ಕಂಡಿದೆ. ಗೋಕರ್ಣದ ಮಟ್ಟಿಗೆ ಈ ಒಂಭತ್ತು ದಿನಗಳ ಉತ್ಸವ ಹೊಚ್ಚಹೊಸತು. ಇಲ್ಲಿಯವರೆಗೆ ವಾರ್ಷಿವಾಗಿ ಒಂಭತ್ತು ದಿನಗಳ ಉತ್ಸವ ನಡೆಯುತ್ತಿತ್ತಾದರೂ ಈ ರೀತಿಯ ಸಂಭ್ರಮ ಇರಲಿಲ್ಲ. ಧರ್ಮಸಭೆ, ಸಾರ್ವಭೌಮ ಪ್ರಶಸ್ತಿಯ ಮುಖಾಂತರ ನಾಡು, ನುಡಿ, ನಡೆಗೆ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಪುರಸ್ಕಾರ, ಗಂಗಾ ಜಲಾಭಿಷೇಕ, ಸಾಂಸ್ಕೃತಿಕ ಸಂಜೆ ಇವೆಲ್ಲವೂ ಈ ಶಿವರಾತ್ರಿಯ ಹೊಸತನ. ಸಾಮಾನ್ಯವಾಗಿ ರಾಮಚಂದ್ರಾಪುರಮಠದ ಕಾರ್ಯಕ್ರಮವೆಂದರೆ ಸಾಕು ಏನೋ ನಾವೀನ್ಯತೆ ಇದ್ದೇ ಇರುತ್ತದೆ ಎಂಬಷ್ಟರ ಮಟ್ಟಿಗೆ ಶ್ರೀಮಠದ […]

ಯಕ್ಷಗಾನ ದಿಗ್ಗಜ ದಿ.ಕೆರೆಮನೆ ಶ್ರೀ ಶಂಭು ಹೆಗಡೆಯವರಿಗೆ ಸಾರ್ವಭೌಮ ಸಮ್ಮಾನ ಪ್ರಶಸ್ತಿ ಪ್ರದಾನ.

ತ್ಯಾಗಬುದ್ಧಿಯಿಂದ ಮಾತ್ರ ಪರಮಾತ್ಮ ಸಾಕ್ಷಾತ್ಕಾರ - ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ

ಗುರುವಾರ, ಫೆಬ್ರವರಿ 26th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೫ - ಜಗತ್ತಿಗೆ, ಸಮಾಜಕ್ಕೆ ನನ್ನಿಂದ ಒಳಿತಾಗಲಿ ಎಂಬ ಬುದ್ಧಿಯಿಂದ ಮಾಡಿದ ಸ್ವಾರ್ಥ ಲೇಪವಿಲ್ಲದ ಕಾರ್ಯದಿಂದ ಮಾತ್ರ ಪರಮಾತ್ಮನನ್ನು ಹೊಂದಲು ಸಾಧ್ಯ. ಇದೇ ಮಾನವನಲ್ಲಿ ಮಾಧವನನ್ನು ನೋಡುವ ರೀತಿಯೂ ಸಹ ಜಗತ್ತಿನ ಎಲ್ಲ ಕಷ್ಟಕೋಟಲೆಗಳನ್ನು ತಾನು ನುಂಗಿ ಒಳ್ಳೆಯದನ್ನು ಜಗತ್ತಿಗೆ ನೀಡುವ ಸಂಕೇತ ಹಾಲಾಹಲವನ್ನು ಕುಡಿದು ಲೋಕಕ್ಕೆ ಶುಭವನ್ನು ನೀಡುವ ಈಶ್ವರನಲ್ಲಿ ವ್ಯಕ್ತವಾಗಿದೆ ಎಂದು ಹರಿಹರಪುರದ ಶ್ರೀಶಾರದಾಪೀಠಂನ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.

ಸಾರ್ವಭೌಮ ಸಮ್ಮಾನ ಸ್ವೀಕರಿಸುತ್ತಿರ್ವ ಶ್ರೀ ಮೋಹನ ಆಳ್ವ

ಬದುಕಿನಲ್ಲಿ ಸಾಮಾಜಿಕ ಜವಾಬ್ದಾರಿ ಅಗತ್ಯ - ಮೋಹನ ಆಳ್ವ

ಮಂಗಳವಾರ, ಫೆಬ್ರವರಿ 24th, 2009

ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೪ - ಸುಮಾರು ಇಪ್ಪತ್ತು ಸಹಸ್ರ ವರ್ಷಗಳ ಇತಿಹಾಸ ಹೊಂದಿದ ಜಾಗತಿಕ ಸ್ತರದ ಅತ್ಯಂತ ಪ್ರಾಚೀನ ಸಂಸ್ಕೃತಿ ನಮ್ಮದು. ಮೂರುಸಾವಿರಕ್ಕೂ ಮೀರಿದ ಭಾಷೆಗಳಿವೆ. ಈ ಎಲ್ಲವನ್ನೂ ಏಕಸೂತ್ರದಲ್ಲಿ ಬಂಧಿತವಾಗಿರುವುದು ಭಾರತೀಯ ಜೀವನ ಪದ್ಧತಿಯಿಂದ. ದಕ್ಷಿಣದ ಕನ್ಯಾಕುಮಾರಿಯಿಂದ ಉತ್ತರದ ಹಿಮಾಲಯದವರೆಗೆ ಭಾರತೀಯರು ಬದುಕಿದ ರೀತಿ ಒಂದೇ. ಇಂತಹ ಮಹತ್ತ್ವಪೂರ್ಣ ಸ್ಥಾನದಲ್ಲಿರುವ ನಮಗೆ ಸಾಮಾಜಿಕ ಜವಾಬ್ದಾರಿಯೂ ಇದ್ದೇ‌ಇದೆ ಎಂದು ಖ್ಯಾತ ಶಿಕ್ಷಣ ತಜ್ಞ ಮೂಡಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಹೇಳಿದ್ದಾರೆ.

ಮುಖ್ಯ ಮಂತ್ರಿಗಳಿಗೆ ನಂದಿಯ ಅನುಗ್ರಹ

ಮುಖ್ಯಮಂತ್ರಿಗಳಿಗೆ ನಂದಿಯ ಅನುಗ್ರಹ

ಸೋಮವಾರ, ಫೆಬ್ರವರಿ 23rd, 2009

ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ, ರೈತಪರ ಮುಂಗಡಪತ್ರ ಮಂಡಿಸಿ, ಕೃಷಿಪರ ಮುಖ್ಯಮಂತ್ರಿ ಎನಿಸಿದ ಬಿ.ಎಸ್. ಯಡಿಯೂರಪ್ಪನವರಿಗೆ ಪರಶಿವ ಕ್ಷೇತ್ರ ಗೋಕರ್ಣದಲ್ಲಿ ಮಹಾಶಿವರಾತ್ರಿಯ ಪರ್ವಕಾಲದಲ್ಲಿ ‘ನಂದಿ’ಯನ್ನು ಪ್ರದಾನ ಮಾಡಲಾಯಿತು. ಗೋಕರ್ಣ ಮಂಡಲಾಧೀಶ್ವರ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಅನುಗ್ರಹ ರೂಪವಾಗಿ ನಂದಿಯನ್ನು ನೀಡಿ, ನಾಡಿನ ಸುಖ-ಸಮೃದ್ಧಿ ಇನ್ನೂ ಹೆಚ್ಚಿನ ರೀತಿಯಲ್ಲಿ ವೃದ್ಧಿಸಲಿ ಎಂದು ಹಾರೈಸಿದರು. ಭಕ್ತಿಭಾವದಿಂದ ಭಾವುಕರಾದ ಮುಖ್ಯಮಂತ್ರಿಯವರು ನಂದಿಯ ಶಿರಕ್ಕೆ ತಲಬಾಗಿ ವಂದಿಸಿ, ಶ್ರೀಮಠ ನೀಡಿದ ಅಪೂರ್ವ ಕೊಡುಗೆಯನ್ನು ಆತ್ಮೀಯವಾಗಿ ಸ್ವೀಕರಿಸಿದರು.

ಎಲ್ಲೆಲ್ಲೂ ಜನವೋ ಜನ

ಎಲ್ಲೆಲ್ಲೂ ಜನವೋ ಜನ

ಸೋಮವಾರ, ಫೆಬ್ರವರಿ 23rd, 2009

ಆತ್ಮಲಿಂಗದ ಅಭಿಷೇಕ ಅರ್ಚನೆಗೆ ಭಕ್ತಾದಿಗಳು ದೊಡ್ಡ ಸಂದಣಿಯಲ್ಲೇ ನೆರೆದಿದ್ದಾರೆ. ಲಕ್ಷ ಲಕ್ಷಗಳಲ್ಲಿ ಎಂದು ಹೇಳಬಹುದೇನೋ. ಈ ಸಂದಣಿ ನಿನ್ನೆ ರಾತ್ರಿಯಿಂದಲೇ ನೆರೆಯಲು ಶುರುವಾಗಿದೆ. ಶಿವರಾತ್ರಿಯ ಪ್ರಯುಕ್ತ ಆತ್ಮಲಿಂಗಕ್ಕೆ ಮೊದಲ ಅಭಿಷೇಕ ನಿನ್ನೆ ಮಧ್ಯರಾತ್ರಿಯೇ ಪ್ರಾರಂಭವಾಗಿದ್ದು, ಇಂದೂ ಮುಂದುವರೆದಿದೆ. ರಾತ್ರಿ ಹಗಲುಗಳ ಯಾವುದೇ ಭೇದವಿಲ್ಲದೇ ಬಂದ ಭಕ್ತಸ್ತೋಮ ಮೊದಲು ಕೋಟಿತೀರ್ಥದಲ್ಲಿ ಮಿಂದು ನಂತರ ಸಮುದ್ರಕ್ಕೆ ಮೈಕೊಟ್ಟು ಅನಂತರ ಅಭಿಷೇಕದ ಸರತಿ ಸಾಲಿನಲ್ಲಿ ನಿಲ್ಲಲು ಧಾವಿಸುತ್ತಿದೆ. ಒಂದು ಸಾಲು ಕೋಟಿತೀರ್ಥದ ಕಡೆಯಿಂದ ದೇವಾಲಯವನ್ನು ಪ್ರವೇಶಿಸಿದರೆ, ಮತ್ತೊಂದು ಸಮುದ್ರದ ಕಡೆಯಿಂದ, ಹೀಗೆ […]

ಧರ್ಮಸಭೆಯ ಉದ್ಘಾಟನೆಯ ಸುಸಮಯ

ದೇವಾಲಯ ನಿರ್ವಾಹಕರು ಗೋಡೆಯಾಗದೆ ದ್ವಾರಗಳಾಗಬೇಕು - ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀ

ರವಿವಾರ, ಫೆಬ್ರವರಿ 22nd, 2009

ಗೋಕರ್ಣ, ಫೆ ೨೨ - ಗೋಕರ್ಣ ಭೋರ್ಗರೆವ ಕಡಲ ತೀರದಲ್ಲಿದೆ. ಈ ಕಡಲಿಗೆದುರಾಗಿಯೇ ಕರುಣೆಯನ್ನೇ ಒಡಲಾಳದಲ್ಲಿ ಕರುಣೆಯನ್ನು ಹೊತ್ತ ಸಾರ್ವಭೌಮ ಮಹಾಬಲನಿದ್ದಾನೆ. ಭಕ್ತರಿಗೆ ಕೈಲಾಸಕ್ಕೆ ಬರುವುದು ಕಷ್ಟವೆಂಬ ಅನುಕಂಪದಿಂದ ಇಲ್ಲಿಗೆ ಬಂದ ಶಿವ. ರಾವಣನು ತನ್ನ ಆತ್ಮಲಿಂಗವನ್ನು ಕಳೆದುಕೊಂಡಂತೆ ಮನುಷ್ಯರೂ ಕಳೆದುಕೊಳ್ಳದಿರಲೆಂದು ಪಾತಾಳದವರೆಗೂ ವ್ಯಾಪಿಸಿ ನಿಂತಿದ್ದಾನೆ. ಈ ದೇವಾಲಯದ ನಿರ್ವಹಣೆ ಬಹಳಕಾಲದ ನಂತರ ನಮಗೆ ಸಿಕ್ಕಿದೆ. ನಾವು ಭಕ್ತ-ದೇವರ ಮಧ್ಯೆ ಗೋಡೆಯಾಗದೆ ದ್ವಾರವಾಗುತ್ತೇವೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ನುಡಿದರು. ಸಾಗರ ಸಂಗಮದ […]

ಗೋಕರ್ಣದಲ್ಲಿ ಬದಲಾವಣೆ ಕಂಡಿದೆ - ಆರ್.ಎಸ್. ಭಾಗವತ್

ರವಿವಾರ, ಫೆಬ್ರವರಿ 22nd, 2009

ಗೋಕರ್ಣ - ಮಹಾ ಸಂಕಲ್ಪದಿಂದ ಶಿವರಾತ್ರೆಯವರೆಗಿನ ೬ ತಿಂಗಳವರೆಗಿನ ಅವಧಿಯಲ್ಲಿ ಗೋಕರ್ಣದಲ್ಲಿ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿದೆ ಎಂದು ಮಾಜಿಶಾಸಕ, ಸಹಕಾರಿ ಧುರೀಣ ಆರ್.ಎಸ್.ಭಾಗ್ವತ್ ಹೇಳಿದರು.ಅರು ಗೋಕರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಳೆದ ಮೂವತ್ತೈದು ವರ್ಷಗಳಿಂದ ಗಕರ್ಣದ ಸಂಪರ್ಕದಲ್ಲಿದ್ದೇನೆ. ಪುರಾಣ ಪ್ರಸಿದ್ಧವಾದ ಈಕ್ಷೇತ್ರ ತನ್ನ ಮೊದಲಿನ ದಿವತೆ ಕಳೆದುಕೊಂಡು, ಪವಿತ್ರ ಕ್ಷೇತ್ರ ಅಪವಿತ್ರಗೊಂಡು ಮಲಿನವಾಗಿತ್ತು. ಪುಣ್ಯ ಕ್ಷೇತ್ರ ಕಳೆದು ಹೋಗುವ ಅಪಾಯವಿತ್ತು. ಸರ್ಕಾರ ಸಕಾಲದಲ್ಲಿ ಎಚ್ಚೆತ್ತು ರಾಮಚಂದ್ರಾಪುರ ಮಠದ ಸುಪರ್ದಿಗೆ ವಹಿಸಿದ್ದರಿಂದ ಕ್ಷೇತ್ರ ಪಾವಿತ್ರ ರಕ್ಷಣೆಯ ಅವಕಾಶ ದೊರೆತಿದೆ ಎಂದರು. […]

Highslide for Wordpress Plugin