ವಿದೇಶಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು:ಚಿತ್ರಪುಟದಲ್ಲಿ
ರವಿವಾರ, ಫೆಬ್ರವರಿ 22nd, 2009ಗೋ್ರ್ಣ,ೆಬ್ರವರಿ ೨೦೦೯: ಶಿವರತ್ರಿ ಪ್ರಯುಕ್ತ ವಿದೇಶಿಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಚಿತ್ರಪುಟದಲ್ಲಿ


Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಗೋ್ರ್ಣ,ೆಬ್ರವರಿ ೨೦೦೯: ಶಿವರತ್ರಿ ಪ್ರಯುಕ್ತ ವಿದೇಶಿಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ಚಿತ್ರಪುಟದಲ್ಲಿ
Gokarna,21 february 2009: Latest photos of the cultural programmes of Shivaratri Festival,Gokarna are updated in the website gallery.
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೧ ಮನುಷ್ಯ ಎಲ್ಲ ರೀತಿಯಿಂದಲೂ ಬೆಳೆಯಬೇಕು. ಸಾಹಿತ್ಯದಿಂದ ಹೃದಯ ಅರಳುತ್ತದೆ. ಬದುಕಿಗೆ ಅಗತ್ಯವಾದ ಭಾವ ಸಾಹಿತ್ಯದ ಕೊಡುಗೆ. ಭಾವ ಸಂವೇದನೆಯೇ ವ್ಯಕ್ತಿಯ ನೈಜ ರೂಪ ಎಂದು ರಾಘವೇಶ್ವರ ಶ್ರೀಗಳು ಹೇಳಿದರು. ಇಂದಿಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೋಕರ್ಣ ಘಟಕವನ್ನು ಶುಭಾರಂಭಗೊಳಿಸಿ ಮಾತನಾಡಿದ ಅವರು ಈ ಘಟಕದಿಂದ ಸಮಾಜೋಪಯೋಗಿಯಾದ ಸಾಹಿತ್ಯ ಕಾರ್ಯಗಳು ನಿರಂತರವಾಗಿ ಆಯೋಜಿತವಾಗಲಿ ಎಂದು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಾಹಿತಿ, ವಿಚಾರವಾದಿ ಬಿ.ಎ. ಸನದಿ ಕನ್ನಡ ಸಾಹಿತ್ಯ ಹಲವಾರು ಖ್ಯಾತ ಕವಿಗಳ ಕೊಡುಗೆಯಿಂದ […]
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೨೧ ಇಂದಿನ ಯಾಂತ್ರಿಕ ಯುಗದಲ್ಲಿ ಮನುಷ್ಯ ಸಹಜವಾದ ತಾಯ್ತನದ ತುಡಿತ, ಹಸುಗೂಸಿನ ಬೆರಗು, ಎರಡನ್ನೂ ನಾವು ನಿಧಾನವಾಗಿ ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಬದುಕಿನಲ್ಲಿ ಹಣವೇ ಮುಖ್ಯ ಮೂಲ್ಯವಾಗಿ ನಮ್ಮ ಸಂಸ್ಕೃತಿಯ ಮಮತೆ, ಸಮತೆಯ ಬಂಧ ಸಡಿಲವಾಗಿದೆ. ಹಣದ ಹಿಂದೆ ಧಾವಿಸುವ ನಮ್ಮ ಪ್ರವೃತ್ತಿಯಿಂದಾಗಿ ಜೀವನದ ಸರಳ ಸಂತೋಷಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಖ್ಯಾತ ಕವಿ, ಸಾಹಿತಿ ಜಯಂತ ಕಾಯ್ಕಿಣಿ ಹೇಳಿದ್ದಾರೆ. ಇಂದು ಸಾಗರ ಸಂಗಮದ ನಂದಿಕೇಶ್ವರ ವೇದಿಕೆಯಲ್ಲಿ ನಡೆದ ಧರ್ಮ ಸಭೆಯಲ್ಲಿ ನಾಡಿನ ಖ್ಯಾತ ಚಿಂತಕ, […]
ಗೋಕರ್ಣ :ಫೆಬ್ರವರಿ ೨೧ : ಇಂದು ನಡೆದ ಧರ್ಮ ಸಭೆ ಹಾಗೂ ಸಾರ್ವಭೌಮ ಸಮ್ಮಾನ ದ ಚಿತ್ರಗಳು ಚಿತ್ರಪುಟದಲ್ಲಿ ಲಭ್ಯ. (ಕಾರ್ಯಕ್ರಮ ದ ಇನ್ನಷ್ಟು ಫೋಟೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ )
Gokarna, Feb 21: : Today’s Dharmasabha and Sarvabhouma Sammana photos have been updated at our photo gallery. (Click here to view the Gallery)
ನಂದಿಶ್ವರ ವೇದಿಕೆ, ಗೋಕರ್ಣ, ಫೆ.೨೦ - ನಮ್ಮೆಲ್ಲರ ಬದುಕಿಗೆ ಅತ್ಯಂತ ಅಗತ್ಯವಾದದ್ದು ಎರಡೇ, ಆರೋಗ್ಯ ಮತ್ತು ನೆಮ್ಮದಿ. ಒಂದು ಶಾರೀರಿಕ, ಮತ್ತೊಂದು ಆಧ್ಯಾತ್ಮಿಕ. ಆರೋಗ್ಯ ಬಹಿರಂಗದ ಅಗತ್ಯವಾದರೆ, ನೆಮ್ಮದಿ ಅಂತರಂಗಕ್ಕೆ ಅಪೇಕ್ಷಿತ. ಇಂದಿನ ಧಾವಂತದ ಯುಗದಲ್ಲಿ ಬದುಕಿನ ಮೌಲ್ಯಗಳಾದ ಇವೆರಡನ್ನು ಬಿಟ್ಟು ಬೇಡವಾದವುಗಳ ಬೆನ್ನು ಹತ್ತಿ ಹೋಗುತ್ತಿದ್ದೇವೆ. ಅಷ್ಟೇ ಅಲ್ಲ ಹಣಕ್ಕಾಗಿ ಶರೀರ ಮನಸ್ಸುಗಳೆರಡರ ಸ್ಥಿತಿಯನ್ನೂ ಕೆಡಿಸಿಕೊಳ್ಳುತ್ತಿದ್ದೇವೆ. ಆಮೇಲೆ ಇದನ್ನು ಪಡೆಯಲು ಹಣ ಖರ್ಚು ಮಾಡುತ್ತೇವೆ. ಬದುಕಿಗೆ ಹಣದ ಅಗತ್ಯವಿದೆ. ಹಾಗೆಂದು ಹಣವೇ ಸರ್ವಸ್ವವಲ್ಲ. ನೆಮ್ಮದಿಯ ಭಾವ, […]
Gokarna, Feb 20 : Today’s Dharmasabha and Sarvabhouma Sammana photos have been updated at our photo gallery. (Click here to view the gallery)
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೯ : ಗೋಕರ್ಣ ಕ್ಷೇತ್ರದಲ್ಲಿ ಈ ವರ್ಷ ಎಲ್ಲವೂ ಹೊಸತು. ಶಿವರಾತ್ರಿಯ ಸಡಗರ, ಸಾಂಸ್ಕೃತಿಕ ಸೌರಭ, ಲಕ್ಷ ಲಕ್ಷ ಮಂದಿ ಯಾತ್ರಿಕ ಭಕ್ತರ ಹೊಟ್ಟೆಯನ್ನು ತಂಪಾಗಿಸುವ ಅಮೃತಾನ್ನ, ಧಾರ್ಮಿಕ ಪ್ರಕಲ್ಪಗಳು, ಈ ಎಲ್ಲ ಹೊಸತುಗಳ ಮೂಲಕ ಕ್ರಾಂತಿಕಾರಿ ಪರಿವರ್ತನೆಯೊಂದಿಗೆ ಶ್ರೀ ಕ್ಷೇತ್ರದಲ್ಲಿ ಹೊಸ ಶಕೆ ಆರಂಭಗೊಂಡಿದೆ.
ನಂದಿಕೇಶ್ವರ ವೇದಿಕೆ, ಗೋಕರ್ಣ, ಫೆ.೧೯ - ಸ್ವಾಮಿ ವಿವೇಕಾನಂದರು ಹೇಳಿದಂತೆ ಜಗತ್ತಿಗೆ ಭಾರತದ ಮುಖ್ಯ ಕೊಡುಗೆ ತ್ಯಾಗ ಮತ್ತು ಸೇವೆ. ಈ ಎರಡೂ ಗುಣಗಳೂ ಭಾರತೀಯರ ಬದುಕಿನಲ್ಲಿ ಹಾಸುಹೊಕ್ಕಾಗಿವೆ. ಭಗವಂತ ಉದಾರ ಹೃದಯನಾಗಿ ನಮಗೆ ನೀಡಿದ ಕೊಡುಗೆಯಾದ ನಿಸರ್ಗ ಇಂದು ತೀರ ಕಲುಷಿತವಾಗುತ್ತಿದೆ. ಕೇವಲ ಸ್ವಾರ್ಥಕ್ಕಾಗಿ ಇನ್ನೆಂದೂ ಪುನಃ ಸರಿಪಡಿಸಲಾರದಂತಹ ದೋಷಗಳೂ ನಡೆಯುತ್ತವೆ. ಇಂತಹ ತಪ್ಪುಗಳನ್ನು ಸೇವಾಭಾವನೆಯ ಮೂಲಕ ಮಾತ್ರ ದೂರಮಾಡಬಹುದು. ಈ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಗೋಕರ್ಣದಲ್ಲಿ ನಡೆಯುತ್ತಿರುವ ಉ.ಕ. ಜಿಲ್ಲಾ ರಾಷ್ಟ್ರೀಯ ಸೇವಾ […]