Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರೀ ಕ್ಷೇತ್ರ ಗೋಕರ್ಣಕ್ಕೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಭೇಟಿ

ಬುಧವಾರ, ಸೆಪ್ಟೆಂಬರ 18th, 2019

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರಮಠ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಗಣಪತಿ , ಶ್ರೀ ಮಹಾಬಲೇಶ್ವರ , ತಾಮ್ರಗೌರಿ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು .

ಚಾತುರ್ಮಾಸ್ಯ ವೃತ ಸಂಪನ್ನ ಪ್ರಯುಕ್ತ ವಿಶೇಷ ಪೂಜೆ

ರವಿವಾರ, ಸೆಪ್ಟೆಂಬರ 15th, 2019

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ೨೬ ನೇಯ ಚಾತುರ್ಮಾಸ್ಯ ವೃತವು (ರಾಮಾಯಣ ಚಾತುರ್ಮಾಸ್ಯ ) ಬೆಂಗಳೂರಿನ ಗಿರಿನಗರದ ಶ್ರೀರಾಮಾಶ್ರಮದಲ್ಲಿ ಸಂಪನ್ನಗೊಂಡ ಇಂದಿನ ಶುಭ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಳದ ಸದಸ್ಯರು ರುದ್ರಾಭಿಷೇಕ , ನವಧಾನ್ಯ ಅಭಿಷೇಕ, ಗಂಗಾಜಲದ ಅಭಿಷೇಕ , ಬಿಲ್ವಾರ್ಚನ ಪೂಜೆ ಸಲ್ಲಿಸಿದರು ಹಾಗೂ ಶ್ರೀ ದೇವಾಲಯದ ಅನ್ನದಾನಕ್ಕೆ ಧಾನ್ಯ ಸಮರ್ಪಣೆ […]

ಶ್ರೀ ದೇವಾಲಯಕ್ಕೆ DRDO ಅಧ್ಯಕ್ಷರ ಭೇಟಿ

ರವಿವಾರ, ಸೆಪ್ಟೆಂಬರ 1st, 2019

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಸ್ಥಾನಕ್ಕೆ DRDO ಅಧ್ಯಕ್ಷರಾದ ಡಾ ಸತೀಶ ರೆಡ್ಡಿ ಇವರು ಭೇಟಿ ನೀಡಿ ಆತ್ಮಲಿಂಗ ಕ್ಕೆ ವಿಶೇಷ ಪೂಜೆ ಸಲ್ಲಿಸಿದರು . ವೇ ವಿಶ್ವನಾಥ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ , ಸ್ಮರಣಿಕೆ ನೀಡಿ ಗೌರವಿಸಿದರು . DRDO ಸಂಸ್ಥೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು .

ವಿಶೇಷ ಹೂವಿನಂಗಿ ಪೂಜೆ ಸಂಪನ್ನ

ರವಿವಾರ, ಸೆಪ್ಟೆಂಬರ 1st, 2019

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯದ ಸಿಬ್ಬಂದಿಗಳಿಂದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರಿಗೆ, ಶ್ರೀ ವೀರಭದ್ರ ದೇವರಿಗೆ ‘ಹೂವಿನಂಗಿ’ ಪೂಜೆ ನೆರವೇರಿತು .

ಚಂದ್ರಗ್ರಹಣ ಪ್ರಯುಕ್ತ ವಿಶೇಷ ದರ್ಶನ (16-07-2019)

ಮಂಗಳವಾರ, ಜುಲಾಯಿ 16th, 2019

#ಚಂದ್ರಗ್ರಹಣ ಪ್ರಯುಕ್ತ ದಿನಾಂಕ 16-07-2019 ಮಂಗಳವಾರ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಪೂಜೆ -ದರ್ಶನ ವೇಳೆಯಲ್ಲಿ ಬದಲಾವಣೆ ಇರುತ್ತದೆ . ಬೆಳಿಗ್ಗೆ 06.00 ರಿಂದ 12.30 ವರೆಗೆ ಪೂಜೆ - ಸ್ಪರ್ಶದರ್ಶನ . ನಂತರ ಮಹಾಪೂಜೆ. ಸಾಯಂಕಾಲ 05.00 ರಿಂದ 06.30 ವರೆಗೆ ಸ್ಪರ್ಶದರ್ಶನ . ನಂತರ ಮಹಾಪೂಜೆ. ಗ್ರಹಣ ಪುಣ್ಯ ಕಾಲದಲ್ಲಿ ರಾತ್ರಿ 01.32 ರಿಂದ ಬೆಳಿಗ್ಗೆ 04.29 ಘಂಟೆ ವರೆಗೆ ಪೂಜೆ, ಸ್ಪರ್ಶದರ್ಶನಕ್ಕೆ ಅವಕಾಶವಿರುತ್ತದೆ . ಭಕ್ತಮಹಾಜನತೆಗಮನಿಸಬೇಕಾಗಿ ಶ್ರೀ ದೇವಾಲಯದ ಪರವಾಗಿ […]

‘ಶಿವಪದ’ ವೇದಿಕೆ ಲೋಕಾರ್ಪಣೆ

ರವಿವಾರ, ಜೂನ್ 16th, 2019

೦೮-೦೬-೨೦೧೯ ಶನಿವಾರ : ಜಗತ್ತಿನ ಏಕೈಕ ಎನಿಸಿದ ಆತ್ಮಲಿಂಗವನ್ನು ಸ್ವತಃ ಸ್ಪರ್ಶಿಸಿ ಪೂಜಿಸಲು ಭಕ್ತರಿಗೆ ಅವಕಾಶ ಇರುವಂತೆ, ಶ್ರೀ ಸನ್ನಿಧಿಯಲ್ಲಿ ಕಲಾವಿದರು ಅನುದಿನವೂ ನಾದ- ನಾಟ್ಯದ ಮೂಲಕ ಶ್ರೀಮಹಾಬಲೇಶ್ವರನನ್ನು ಆರಾಧಿಸಲು ನಿತ್ಯ ನಿರಂತರ ಕಲೋಪಾಸನೆಗೆ ಅವಕಾಶ ಕಲ್ಪಿಸುವ ಸಂಕಲ್ಪದಿಂದ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಸ್ಥಾನದಲ್ಲಿ ವೇದಿಕೆ ಸಜ್ಜಾಗಿದೆ. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀ ರಾಮಂಚಂದ್ರಾಪುರಮಠ ಇವರ ದಿವ್ಯ ಹಸ್ತಗಳಿಂದ ‘ಶಿವಪದ’ ವೇದಿಕೆ ಲೋಕಾರ್ಪಣೆಗೊಂಡಿತು […]

ಶ್ರೀ ದೇವಾಲಯಕ್ಕೆ ಅನಿಲ್ ಕುಂಬ್ಳೆ ಭೇಟಿ

ರವಿವಾರ, ಏಪ್ರಿಲ್ 28th, 2019

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಶ್ರೀ ಅನಿಲ್ ಕುಂಬ್ಳೆ ಭೇಟಿದರು . ಶ್ರೀ ಆತ್ಮಲಿಂಗಕ್ಕೆ ಪಂಚಾಮೃತ, ನವಧಾನ್ಯ, ಗಂಗಾಭಿಷೇಕ ಪೂಜೆ ಮತ್ತು ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದರು . ಜಿ ಪಂ ಸದಸ್ಯ ಶ್ರೀ ಪ್ರದೀಪ ನಾಯಕ ಜೊತೆಗಿದ್ದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಆತ್ಮಲಿಂಗ ಸ್ಮರಣಿಕೆ ನೀಡಿ ಗೌರವಿಸಿದರು . ​ವೇ ವಿಶ್ವನಾಥ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು . ಉಪಾಧಿವಂತ […]

ಶ್ರೀ ದೇವಾಲಯಕ್ಕೆ ಗೋವಾ ರಾಜ್ಯದ ಗೌರವಾನ್ವಿತ ರಾಜ್ಯಪಾಲರ ಭೇಟಿ

ಶುಕ್ರವಾರ, ಏಪ್ರಿಲ್ 26th, 2019

ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಗೋವಾ ರಾಜ್ಯಪಾಲರಾದ ಗೌರವಾನ್ವಿತ ಶ್ರೀಮತಿ ಮೃದುಲಾ ಸಿನ್ಹಾ ಭೇಟಿ ನೀಡಿ ಶ್ರೀ ಆತ್ಮಲಿಂಗಕ್ಕೆ ನವಧಾನ್ಯಭಿಷೇಕ ಮತ್ತು ಸುವರ್ಣ ನಾಗಾಭರಣ ಪೂಜಾ ಸೇವೆ ನೆರವೇರಿಸಿದರು .ಶ್ರೀ ದೇವಾಲಯದ ಸ್ವಚ್ಛತೆ, ಪ್ರಶಾಂತತೆ ಮತ್ತು ಪೂಜಾ ವಿಧಾನದ ಬಗ್ಗೆ ಸಂತಸ ವ್ಯಕ್ತಪಡಿಸಿದರು . ಶ್ರೀ ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ , ಸ್ಮರಣಿಕೆ ನೀಡಿ ಗೌರವಿಸಿದರು . ವೇ ಮಹಾಬಲೇಶ್ವರ ಮಾರಿಗೋಳಿ ಪೂಜೆ ನೆರವೇರಿಸಿದರು […]

‘ ಕಾಮಾಘನಾಶಿನಿ ಸಂದರ್ಶನೋತ್ಸವ ಮತ್ತು’ ‘ಆನಂಗ ತ್ರಯೋದಶಿ’ (ಸುಗ್ಗಿ ಉತ್ಸವ ) ಸಂಪನ್ನ

ರವಿವಾರ, ಏಪ್ರಿಲ್ 21st, 2019

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ರೂಢಿಗತ ಪರಂಪರೆಯಂತೆ ವಿಕಾರಿ ಸಂವತ್ಸರದ ‘ ಕಾಮಾಘನಾಶಿನಿ ಸಂದರ್ಶನೋತ್ಸವ ಮತ್ತು’ ‘ಆನಂಗ ತ್ರಯೋದಶಿ’ (ಸುಗ್ಗಿ ಉತ್ಸವ ) ಸಂಪನ್ನಗೊಂಡಿತು . ದಿ 17-04-2019 ಬುಧವಾರ ಮುಂಜಾನೆ ಅಘನಾಶಿನಿ ನದಿಗೆ ಪೂಜೆ ಸಲ್ಲಿಸಿ, ಸಂಕಲ್ಪಸ್ನಾನ ಪೂರೈಸಿದ ನಂತರ ಉತ್ಸವವು ತದಡಿಯ ಶ್ರೀ ಅಶ್ವಥಗಣಪತಿ ದೇವಾಲಯದಲ್ಲಿ ಕುಳಿತು ಹಣ್ಣುಕಾಯಿ ಸಮರ್ಪಣೆ, ಪೂಜೆ ಸ್ವೀಕರಿಸಿ ಶ್ರೀ ದೇವಾಲಯಕ್ಕೆ […]

ಪ ಪೂ ಕಾಶಿ ಜಗದ್ಗುರುಗಳ ಗೋಕರ್ಣ ಭೇಟಿ

ಸೋಮವಾರ, ಮಾರ್ಚ 25th, 2019

ಪ ಪೂ ಕಾಶಿ ಸಿಂಹಾಸನಾಧೀಶ್ವರ ಶ್ರೀ ಶ್ರೀ ೧೦೦೮ ಡಾ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ಜಂಗಮವಾಡಿ ಮಠ, ವಾರಾಣಸಿ - ಇವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಚಿತ್ತೈಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಪೂಜ್ಯ ಶ್ರೀ ಷ. ಬ್ರ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ , ಪಂಚವಣಗಿ ಹಿರೇಮಠ , ಪ ಪೂ ಶ್ರೀ ಶ್ರೀ ಕಲ್ಯಾಣಸ್ವಾಮಿಗಳು , ಶ್ರೀ ಕಲ್ಯಾಣಸ್ವಾಮಿ ಮಹಾಸಂಸ್ಥಾನ ಮಠ ಇವರೂ ಸಹ ಉಪಸ್ಥಿತರಿದ್ದರು . ಆಡಳಿತಾಧಿಕಾರಿ ಶ್ರೀ ಜಿ ಕೆ […]

Highslide for Wordpress Plugin