ಪ್ರಸಕ್ತ

ಶ್ರೀ ಸಂಸ್ಥಾನ ಗೋಕರ್ಣ, ಶ್ರೀ ರಾಮಚಂದ್ರಾಪುರ ಮಠ, ಹಾಗೂ ಶ್ರೀ ಮಠದ ಶ್ರಮದಿಂದ ನಡೆಯುವ, ಪ್ರಸ್ತುತ ವಿದ್ಯಮಾನಗಳ ಸಮಗ್ರ ವಿವರ.


ಗೋಕರ್ಣದಲ್ಲಿ ಕದಿರುಹಬ್ಬ.


ರುದ್ರಾನುಷ್ಠಾನದಿಂದ ಲೋಕಕಲ್ಯಾಣ ಸಾಧ್ಯ-ಪೂಜ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಶ್ರೀ.

ಗೋಕರ್ಣ.ಜೂ.೧೬. ಮಾನವ ಪ್ರಕೃತಿಯ ಅಡಿಯಾಳು.ಆಕೆಯ ಅನುಗ್ರಹದಿಂದ ಮಾತ್ರ ಬದುಕು ಸಾಧ್ಯ. ಇಂದು ಲೋಕದಲ್ಲಿ ಪ್ರಾಕೃತಿಕವಾದ ಹಲವಾರು ತೊಂದರೆಗಳನ್ನು ನಾವು ಕಾಣುತ್ತಿದ್ದೇವೆ.ಜೀವನದಲ್ಲಿ ಸಂಪತ್ತಿದೆ,ಅಧಿಕಾರವಿದೆ,ಎಲ್ಲವೂ ಇದ್ದೂ ಮನಶ್ಶಾಂತಿಯು ಮಾತ್ರ ಮರೀಚಿಕೆಯಾಗಿದೆ.ಮಾನವಜೀವನದಲ್ಲಿ ಕಂಡುಬರುವ ಈ ಎಲ್ಲ ಸಮಸ್ಯೆಗಳನ್ನೂ ಧಾರ್ಮಿಕತೆಯಿಂದ,ಧ್ಯಾನ-ಅನುಷ್ಠಾನಗಳಿಂದ ಮಾತ್ರ ಪರಿಹಾರ ಮಾಡಿಕೊಳ್ಳಲು ಸಾಧ್ಯ ಎಂದುಕೂಡಲೀಶೃಂಗೇರಿಮಠದ ಪೀಠಾಧಿsಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಶ್ರೀಗಳುಹೇಳಿದ್ದಾರೆ.ಇಂದುಗೋಕರ್ಣದ ಸಾಗರತೀರದಲ್ಲಿ ಆಯೋಜಿತವಾಗಿದ್ದ ಕೋಟಿರುದ್ರ ಸಮಿತಿಯ ಕೋಟಿರುz ಷಷ್ಠಪರ್ವದ ಸಮಾರಂಭದಲ್ಲಿದಿವ್ಯಸಾನ್ನಿಧ್ಯ ವಹಿಸಿ ಅನುಗ್ರಹಭಾಷಣ ನೀಡುತ್ತಿದ್ದ ಶ್ರೀಗಳು.ವೈಯ್ಯಕ್ತಿಕ ಹಾಗೂ ಸಾಮಾಜಿಕವಾದ ತೊಂದರೆಗಳ ಶಮನಕ್ಕೆ ರುದ್ರಪಾರಾಯಣ ಅತ್ಯಂತಶ್ರೇಷ್ಠ [...]


ಶ್ರೀರುದ್ರಾಧ್ಯಾಯ

ಶಿವ. ಜಗತ್ತಿಗೆಶುಭವನ್ನು ಮಂಗಳವನ್ನು ನೀಡುವವ.ಲೋಕಹಿತಂಕರನಾದುದರಿಂದ ಈತ ಶಂಕರನೂ ಹೌದು.ನಮ್ಮ ಈ ಬವಬಂಧನಕ್ಕೆ ಈತನಿಂದಲೇ ಬಿಡುಗಡೆ.ಆದ್ದರಿಂದ ಇವನಿಗೆ ರುದ್ರ ಎಂದೂ ಹೆಸರು. ರುದ್ರಪ್ರೀತಿಕರವಿಧಾನಗಳಿಂದ ಪರಮೇಶ್ವರಾನುಗ್ರಹ ತೀರಸುಲಭ.ಎಂದೇ ಸಾಧನೆಯ ಪ್ರಪಂಚದಲ್ಲಿ,ಸಾಧಕರಪರಿಧಿಯಲ್ಲಿ ರುದ್ರಪಾರಾಯಣ,ರುದ್ರಾರ್ಚನೆಗಳಿಗೆ ಅತಿಶ್ರೇಷ್ಠಸ್ಥಾನ.
ನಮ್ಮ ಬದುಕಿನ ಉನ್ನತಿಗೆ ಪ್ರಾಚೀನವೈದಿಕಪರಂಪರೆಯು ತೋರಿಸಿದ ಅನುಷ್ಠಾನಗಳಪಂಕ್ತಿ ತುಂಬದೊಡ್ಡದು. ಅವುಗಳಲ್ಲಿ ಮೊದಲಸ್ಥಾನದಲ್ಲಿರುವುದು ಅತಿಪ್ರಾಚೀನ ಹಾಗೂಪ್ರಸಿದ್ಧವಾದದ್ದುರುದ್ರಾನುಷ್ಠಾನ.ಕಾರ್ಯಸೌಲಭ್ಯ ಮತ್ತು ಶೀಘ್ರಫಲಲಾಭ ಈ ಅನುಷ್ಠಾನದವೈಶಿಷ್ಟೈ.ಲೌಕಿಕವಾದ ಸುಖಸಂತೋಷಗಳಲ್ಲದೆ ಜನ್ಮಾಂತರಗಳ ಕರ್ಮಫಲರೂಪವಾದ ಸಂತಾಪವನ್ನುಶಮನಮಾಡುವಶಕ್ತಿಯೂ ಈ ಅನುಷ್ಠಾನಕ್ಕಿದೆಯೆಂಬುದು ಆಪಸ್ತಂಭ,ಪರಾಶರ ಮೊದಲಾದ ಸ್ಮೃತಿಗಳಲ್ಲಿ ಹಾಗೂ ಕೈವಲ್ಲ್ಯ, ಜಾಬಾಲೋಪನಿಷತ್ತುಗಳಲ್ಲಿಯೂ ಸಹ ಉಲ್ಲೇಖಿತ. ಶಾಂತಿ,ಪುಷ್ಟಿ,ತುಷ್ಟಿ [...]


ಕೋಟಿ ರುದ್ರ “ತೃತೀಯ ಪರ್ವ”

ಭಗವತ್ಪ್ರೀಯರೇ,
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಆತ್ಮಲಿಂಗದ ದಿವ್ಯ ಸನ್ನಿಧಿಯಲ್ಲಿ ಸಂಪನ್ನಗೊಳ್ಳುತ್ತಿರುವ
“ಕೋಟಿ ರುದ್ರ “ತೃತೀಯ ಪರ್ವ”
ದಿನಾಂಕ 06-09-2009 ನೇ ಶನಿವಾರ ಬೆಳಿಗ್ಗೆ 9 ಘಂಟೆಗೆ ಸಹಸ್ರಾಧಿಕ ಜನರಿಂದ ರುದ್ರದ ಪರ್ವ ಪೂಜೆ.
ಸಾಯಂಕಾಲ 3-30 ಕ್ಕೆ ಧರ್ಮ ಸಭೆ.
:ಸಾನ್ನಿಧ್ಯ:
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ
ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರಿ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಶ್ರೀ ರಾಮಚಂದ್ರಾಪುರ ಮಠ.
ಪರಮಪೂಜ್ಯ ತಪೋರತ್ನ ಶ್ರೀ|| ಷ.ಬ್ರ.ರೇವಣಸಿದ್ದ ಶಿವಾಚಾರ್ಯ
ಗುರು ಮಡಿವಾಳ ಶಿವಾಚಾರ್ಯರು ಹನ್ನೆರೆಡು ಮಠ ಕಲಘಟಗಿ.
ಅಂದು ನಮ್ಮೊಂದಿಗೆ:
ಮಾನ್ಯ ಶ್ರೀ ಭೀಮೇಶ್ವರ ಜೋಶಿಯವರು ಮಾನ್ಯ ಧರ್ಮಕರ್ತರು
ಶ್ರೀ ಆದಿಶಕ್ತ್ಯಾತ್ಮಕ [...]


“ಕೋಟಿ ರುದ್ರ ದ್ವಿತೀಯ ಪರ್ವ”

ಆತ್ಮೀಯ ಭಗವತ್ಪ್ರೀಯರೇ,
ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಆತ್ಮಲಿಂಗದ ದಿವ್ಯ ಸಾನ್ನಿಧ್ಯದಲ್ಲಿ ಲೋಕಕಲ್ಯಾಣದ ಸಂಕಲ್ಪದಿಂದ ಆಯೋಜನೆಗೊಂಡು ಮುನ್ನಡೆಯುತ್ತಿರುವ “ಕೋಟಿ ರುದ್ರ ದ್ವಿತೀಯ ಪರ್ವ” ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದ ಪಡೆದು ದಿನಾಂಕ 11-08-2009 ನೇ ಮಂಗಳವಾರ ಬೆಳಿಗ್ಗೆ 6.22 ರಿಂದ “ಶ್ರೀ ಮಹಾಬಲೇಶ್ವರನಿಗೆ ಯಾಮ ಪೂಜೆ” ಸಮರ್ಪಣೆಯೊಂದಿಗೆ ಜರುಗಲಿದೆ.ಸರ್ವಮಾನ್ಯ ಶ್ರೀ ಭೀಮೇಶ್ವರ ಜೋಶಿ ಮಾನ್ಯ ಧರ್ಮಕರ್ತರು,ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ಅಮ್ಮನವರ ದೇವಾಲಯ,ಶ್ರೀ ಕ್ಷೇತ್ರ ಹೊರನಾಡು ಇವರು ಪೂಜಾ ಪ್ರಾರಂಭದಲ್ಲಿ [...]


“ಕೋಟಿರುದ್ರ”ದಲ್ಲೊಂದು ರುದ್ರಾಧ್ಯಾಯ

‘ರುದ್ರಾಧ್ಯಾಯ’ ಅತಿ ವಿಶಿಷ್ಟವಾದ ಮಂತ್ರಗಳ ಸಂಕಲನ.ರುದ್ರನನ್ನು ಸ್ತುತಿಸುವ ಮಂತ್ರಗಳವು.ವೇದಗಳ ಅನೇಕ ಭಾಗಗಳಲ್ಲಿ ರುದ್ರನಸ್ತುತಿ ಇದೆಯಾದರೂ ಈ ರುದ್ರಾಧ್ಯಾಯಕ್ಕೆ ತನ್ನದೇ ಆದ ಸ್ಥಾನವಿದೆ.ಇದು ಇರುವುದು ‘ಯಜುರ್ವೇದ ‘ದಲ್ಲಿ.ಯಜುರ್ವೇದದ ತೈತ್ತರೀಯ ಸಂಹಿತೆ,ವಾದಸನೇಯ ಸಂಹಿತೆ,ಕಣ್ವಸಂಹಿತೆ,ಮೈತ್ರಾಯಣೀ ಸಂಹಿತೆ,ಕಾಛಕ ಸಂಹಿತೆ,ಕಪಿಷ್ಠಲ ಸಂಹಿತೆಗಳಲ್ಲಿ ರುದ್ರಾಧ್ಯಾಯವಿದೆ.ಯಜುರ್ವೇದದಲ್ಲಿ ಒಂದುನೂರು ಶಾಖೆಗಳಿದ್ದವು.ಅವುಗಳಲೆಲ್ಲ ರುದ್ರಾಧ್ಯಾಯವಿತ್ತಂತೆ.ಆದರೆ ಇವುಗಳಲ್ಲಿ ತೈತ್ತರೀಯ ಮತ್ತು ವಾದಸನೇಯ ರುದ್ರಾಧ್ಯಾಯಗಳು ವೈದಿಕ ಪ್ರಪಂಚದಲ್ಲಿ ಪ್ರಚಲಿತವಾಗಿದೆ.
ರುದ್ರಾಧ್ಯಾಯವನ್ನು ‘ಶತರುದ್ರೀಯ’ ಮತ್ತು ‘ನಮಕ-ಚಮಕ’ಗಳೆನ್ನುವ ಹೆಸರಿನಿಂದಲೂ ಗುರುತಿಸುತ್ತಾರೆ.ಶತ ಎಂದರೆ ಲೆಕ್ಕಕ್ಕೆ ಸಿಗದವನು,ಅನಂತ ಎಂದರ್ಥ.ಅಂತಹ ಅನಂತವಾಗಿರುವ ರುದ್ರನು ಇದರ ದೇವತೆಯಾಗಿರುವುದು ಇದನ್ನು ಶತರುದ್ರೀಯವೆನ್ನುವಂತೆ ಮಾಡಿದೆ.ರುದ್ರಾಧ್ಯಾಯದಲ್ಲಿ ಎರಡು ಅಧ್ಯಾಯಗಳಿವೆ.ಮೊದಲ ಅಧ್ಯಾಯದಲ್ಲಿ ‘ನಮಃ’ಎಂಬ ಶಬ್ಧ ಬಳಕೆಯಾಗಿದೆ.ಆದ್ದರಿಂದ ಅದು ‘ನಮಕ’.ಎರಡನೇಯ ಅಧ್ಯಾಯದಲ್ಲಿ ‘ಚಮೇ’ ಎನ್ನುವುದು [...]


ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಚಾತುರ್ಮಾಸ್ಯ

ಜುಲೈ 7 :ಕೋಲ್ಕತ್ತಾ:ಶ್ರೀರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಶ್ರೀಗಳ 16 ನೇ ಚಾತುರ್ಮಾಸ್ಯ ವೃತ ಮಂಗಳವಾರ ಕೋಲ್ಕತ್ತಾದ ಇಮಾಮಿಹೌಸ್ ನಲ್ಲಿ ಆರಂಭಗೊಂಡಿತು.ಜುಲೈ 7 ರಿಂದ ಸೆಪ್ಟೆಂಬರ್ 4 ರ ವರೆಗೆ ನಡೆಯಲಿರುವ ಚಾತುರ್ಮಾಸ್ಯ ಅನೇಕ ಸಾಂಸ್ಕೃತಿಕ,ಧಾರ್ಮಿಕ,ಸಾಮಾಜಿಕ ಕಾರ್ಯಕ್ರಮ ಒಳಗೊಂಡಿದೆ.ಬರುವ ವಿಜಯದಶಮಿಯಿಂದ ಪ್ರಾರಂಭಗೊಳ್ಳುವ ವಿಶ್ವಗೋಗ್ರಾಮಯಾತ್ರೆಯ ಚಿಂತನಾಸಭೆಗಳು ನಡೆಯಲಿವೆ.ಚಾತುರ್ಮಾಸ್ಯ ವೃತಾರಂಭದ ಬಳಿಕ ಸಂದೇಶ ನೀಡಿದ ಸ್ವಾಮೀಜಿ,ಗೋವುಗಳ ಸ್ವಾತಂತ್ರ್ಯಕ್ಕಾಗಿ ಗೋಪ್ರೇಮಿಗಳು ಮಾತ್ರವಲ್ಲ,ಅದನ್ನು ಅವಲಂಬಿಸಿದ ಪ್ರತಿಯೊಬ್ಬರೂ ಸಂಗ್ರಾಮ ಮಾಡಬೇಕಾದ ಅನಿವಾರ್ಯ ಇದೆ ಎಂದರು.


ಗೋಕರ್ಣವನ್ನು ಜಗತ್ತೇ ನಿರೀಕ್ಷಿಸುವ ಕಾಲ ಬಂದಿದೆ.-ಶ್ರೀ ರಾಘವೇಶ್ವರ ಶ್ರೀಗಳು


“ರಾಘವೇಶ್ವರ ಶ್ರೀಗಳು ದೇವರ ಸಮಾನರು”ಅವರಿಗಾಗಿಯೇ ಗೋಕರ್ಣ ವಹಿಸಿಕೊಡಲಾಗಿದೆ.

ಬೆಂಗಳೂರು:ರಾಮಚಂದ್ರಾಪುರ ಮಠದ ಸ್ವಾಮೀಜಿ ದೇವರ ಸಮಾನರು ಅಲ್ಲಿನ ವ್ಯವಸ್ಥೆ ಸರಿಪಡಿಸಲು ಗೋಕರ್ಣ ದೇವಾಲಯವನ್ನು ಅವರಿಗೆ ವಹಿಸಿಕೊಡಲಾಗಿದೆ.ಈಗ ಅಲ್ಲಿನ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ವಸತಿ ಹಾಗು ಮುಜರಾಯಿ ಖಾತೆ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.ವಿಧಾನಸೌಧದಲ್ಲಿ ನೂತನ ಕೊಠಡಿ ಪ್ರವೇಶ ಮಾಡಿ,ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಗೋಕರ್ಣ ದೇವಾಲಯಕ್ಕೆ ಸುಮಾರು 20 ಬಾರಿ ಭೇಟಿ ನೀಡಿದ್ದೆ,ಒಮ್ಮೆಯಂತೂ ಅಲ್ಲಿನ ವ್ಯವಸ್ಥೆಯನ್ನು ನೋಡಿ ರಾತ್ರೋರಾತ್ರಿ ವಾಪಸ್ ಬಂದಿದ್ದೆ.ಈಗ ಅಲ್ಲಿಗೆ ಹೋದರೆ ತುಂಬಾ ಸಂತೋಷವಾಗುತ್ತದೆ.ಈ ರೀತಿ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನುಡಿದರು.


“ಕೋಟಿರುದ್ರ” -ಪ್ರಥಮ ಪರ್ವ-

||ಹರೇರಾಮ||
||ಪಾತು ನಿತ್ಯಂ ಮಹಾಬಲ:||
ಶ್ರೀಸಂಸ್ಥಾನ ಮಹಾಬಲೇಶ್ವರದೇವ,ಗೋಕರ್ಣ
(ಶ್ರೀ ರಾಮಚಂದ್ರಾಪುರಮಠದ ಆಡಳಿತಕ್ಕೆ ಒಳಟ್ಟಿದೆ)
ಭಗವತ್ಪ್ರೀಯರೇ,
ವಂದನೆಗಳು.
ಮಹಾಬಲನ ಅನುಗ್ರಹದಿಂದ ಲೋಕಕಲ್ಯಾಣಕ್ಕಾಗಿ ಶ್ರೀಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರನ ಸನ್ನಿಧಿಯಲ್ಲಿ ಸಂಪನ್ನಗೊಳ್ಳುತ್ತಿರುವ
”ಕೋಟಿರುದ್ರ”
-ಪ್ರಥಮ ಪರ್ವ-
ದಿನಾಂಕ :30/6/2009 ನೇ ಮಂಗಳವಾರ ಸಾಯಂಕಾಲ 5.30ಕ್ಕೆ
ಸಾನ್ನಿಧ್ಯ:
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ|| ಶ್ರೀ|| ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು
ಶ್ರೀರಾಮಚಂದ್ರಾಪುರಮಠ
ಪೂಜ್ಯರ ಸಾನ್ನಿಧ್ಯದಲ್ಲಿ ಅಂದು ನಮ್ಮೊಂದಿಗೆ
ಸನ್ಮಾನ್ಯ ಶ್ರೀ ದಿನಕರಶೆಟ್ಟಿಯವರು
(ಮಾನ್ಯ ವಿಧಾನಸಭಾಸದಸ್ಯರು,ಕುಮಟಾ)
ಸನ್ಮಾನ್ಯ ಶ್ರೀ ಸಿ.ವಿ.ಎಲ್ ಶಾಸ್ತ್ರಿಯವರು
(ಮಾನ್ಯ ಅಧ್ಯಕ್ಷರು,ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ,ಬೆಂಗಳೂರು.)
ಸನ್ಮಾನ್ಯ ಶ್ರೀ ಗಿರೀಶ್ ಕೃಷ್ಣಮೂರ್ತಿ ,ಬೆಂಗಳೂರು
ಕಸೆಯಾ ಆಟೋಮೇಟಿಂಗ್ ಐಟಿ
(ಮೆನೆಜಿಂಗ್ ಡೈರಕ್ಟರ್-ಇಂಡಿಯಾ)
ಸನ್ಮಾನ್ಯ ಶ್ರೀ ಎಂ.ಎನ್.ಭಟ್.ಮದ್ಗುಣಿ
(ಮಾನ್ಯ ಅಧ್ಯಕ್ಷರು,ಶ್ರೀ [...]