ಸುದ್ದಿಪುಟ
ಪ್ರಸಕ್ತ ಆಗುಹೋಗುಗಳಿಗಾಗಿ, ಗೋಕರ್ಣದ ಎಲ್ಲಾ ಕಾರ್ಯಕ್ರಮಗಳ ಸುದ್ದಿಗಾಗಿ ಈ ಅಂಕಣ.
ಕ್ಷೇತ್ರಾಧೀಶ ಸಾರ್ವಭೌಮನಿಗೆ ಕನಕಾಭಿಷೇಕ.
ಸಾರ್ವಭೌಮ ಶ್ರೀಮಹಾಬಲೇಶ್ವರ ದೇವರಿಗೆ ಅಮೆರಿಕದ ಶಿಕ್ಯಾಗೋ ನಗರದ ಶ್ರೀ ಅಶ್ವತ್ಥನಾರಾಯಣ ಇವರುದಿನಾಂಕ ೧೫-೦೧-೨೦೧೨ ರವಿವಾರದಂದು ಕನಕಾಭಿಷೇಕ ಮತ್ತು ರಜತಾಭಿಷೇಕ ಸೇವೆಗಳನ್ನು ಸಮರ್ಪಿಸಿದರು.
ಶ್ರೀಕ್ಷೇತ್ರ ಗೋಕರ್ಣಕ್ಕೆ ಫಲಿಮಾರು ಮಠಾಧೀಶರ ಭೇಟಿ.
ಗೋಕರ್ಣ.ಉಡುಪಿಯ ಶ್ರೀಹೃಷೀಕೇಶ ತೀರ್ಥ ಸಂಸ್ಥಾನದ ಫಲಿಮಾರು ಮಠದ ಪೀಠಾಧಿಪತಿ ಶ್ರೀ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಮಕರಸಂಕ್ರಮಣದ ಪುಣ್ಯಸಂದರ್ಭದ ದಿನವಾದ೧೪ ಶನಿವಾರದಂದು ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರನ್ನು ಆರಾಧಿಸಿದರು.ಪೂಜೆಯ ನಂತರ ಮಾತನಾಡಿದ ಪೂಜ್ಯಶ್ರೀಗಳು ಅಮೃತಾನ್ನ ಪ್ರಸಾದಭೋಜನ, ಕೋಟಿರುದ್ರ ಮೊದಲಾದ ದೇವಾಲಯದ ವಿಶೇಷಕಾರ್ಯಕ್ರಮಗಳ ಬಗ್ಗೆ ಕೇಳಿ ತಿಳಿದು ಹರ್ಷವನ್ನು ವ್ಯಕ್ತಪಡಿಸಿದರು.ಮೊದಲು ಮಹಾಗಣಪತಿ ದೇವಾಲಯಕ್ಕೆ ಭೇಟಿನೀಡಿ ಗಣಪತಿಯನ್ನು ಅರ್ಚಿಸಿದ ಶ್ರೀಗಳು ತಾಮ್ರಗೌರೀ ದೇವಾಲಯವನ್ನೂ ಸಂದರ್ಶಿಸಿದರು.ದೇವಾಲಯದ ಆಡಳಿತದ ಪರವಾಗಿ ಶ್ರೀ ಜಿ.ಕೆ.ಹೆಗಡೆಯವರು ಪೂಜ್ಯಶ್ರೀಗಳಿಗೆ ಫಲಕಾಣಿಕೆಯನ್ನು [...]
ಶ್ರೀಕ್ಷೇತ್ರ ಗೋಕರ್ಣಕ್ಕೆ ಮಹಾಪೌರರ ಭೇಟಿ.
ಶ್ರೀಕ್ಷೇತ್ರ ಗೋಕರ್ಣಕ್ಕೆ ಮಹಾಪೌರರ ಭೇಟಿ.
ಗೋಕರ್ಣ.೩ ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯ ಪೂಜ್ಯ ಮಹಾಪೌರ ಶ್ರೀಮತಿ ಪೂರ್ಣಾ ಸುಧೀರ ಪಾಟೀಲ ಇವರು ಕುಟುಂಬಸಮೇತರಾಗಿ೨ ಸೋಮವಾರದಂದು ಶ್ರೀಕ್ಷೇತ್ರ ಗೋಕರ್ಣಕ್ಕೆ ಆಗಮಿಸಿಶ್ರೀ ಮಹಾಬಲೇಶ್ವರನ ಆತ್ಮಲಿಂಗದ ದರ್ಶನ ಮಾಡಿ ಪೂಜೆಯನ್ನುಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಪೂರ್ಣಾ ಪಾಟೀಲ ದೇವಾಲಯದ ಪೂಜಾಪದ್ಧತಿ,ಆಡಳಿತವ್ಯವಸ್ಥೆ ಹಾಗೂನಿರಂತರವಾಗಿ ನಡೆಸಿಕೊಂಡುಬರುತ್ತಿರುವ ಅನ್ನದಾನ ಅಮೃತಾನ್ನ ಪ್ರಸಾದಭೋಜನದ ಕುರಿತಾಗಿಯೂ ಪ್ರಶಂಸಿಸಿ ಪುನಃಪುನಃಈ ಕ್ಷೇತ್ರಕ್ಕೆ ಬರುವಂತೆ ಆಕರ್ಷಿಸುವ ಅಪೂರ್ವಪುಣ್ಯಸ್ಥಳ ಎಂದೂ ಹೇಳಿದರು.ದೇವಾಲಯದ ಆಡಳಿತದ ವತಿಯಿಂದಶ್ರೀ ಜಿ.ಕೆ.ಹೆಗಡೆಯವರು ಮಹಾಪೌರರಿಗೆಸ್ಮರಣಿಕೆಯನ್ನಿತ್ತು ಗೌರವಿಸಿದರು.
ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಶ್ರೀ ಎಸ್.ಎಸ್.ಶಿಂಧೆ
ಹರೇರಾಮ,
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಈ ದಿನ ಮಹಾರಾಷ್ಟ್ರ ಹೈ ಕೋರ್ಟಿನ ನ್ಯಾಯಮೂರ್ತಿಗಳಾದ ಶ್ರೀ ಎಸ್.ಎಸ್.ಶಿಂಧೆ ತಮ್ಮ ಕುಟುಂಬ ಸಮೇತ ಆಗಮಿಸಿ, ಶೀ ದೇವರ ಪೂಜಾ ಕೈಂಕರ್ಯ ನೆರವೇರಿಸಿದರು.
ಶ್ರೀ ದೇವಾಲಯದ ಪರಿಸರ , ಪೂಜಾ ವಿಧಾನ, ಹಾಗೂ ಆಡಳಿತ ವನ್ನು ಪ್ರಶಂಸಿಸಿದರು.
ವೆ.ಮು. ರಮೇಶ್ ಪ್ರಸಾದ ಪೂಜಾ ವಿಧಾನಗಳನ್ನು ನೆರವೇರಿಸಿದರು.
ಶ್ರೀ ದೇವಾಲಯದ ಅಮೃತಾನ್ನ ವಿಭಾಗದಲ್ಲಿ ಪ್ರಸಾದ ಸ್ವೀಕರಿಸಿದ ಶ್ರೀ ಶಿಂಧೆ ಅಲ್ಲಿ ಊಟ ಮಾಡುತ್ತಿರುವ ಶಾಲಾ ಮಕ್ಕ್ಕಳನ್ನು ನೋಡಿ ಸಂತಸ ವ್ಯಕ್ತಪಡಿಸಿದರು.