ಮುಖಪುಟ >> News, Recent, ಸುದ್ದಿಪುಟ

ಶ್ರೀ ದೇವಾಲಯದಲ್ಲಿ ರಂಗಪೂಜೆ

..................................................................................................................................................

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಅನುಗ್ರಹ ಪಡೆದು , ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ರೂಢಿಗತ ಪರಂಪರೆಯಂತೆ ದಿನಾಂಕ 24/11/2011 ಗುರುವಾರದಂದು (ಕಾರ್ತಿಕ ಬಹುಳ ಅಮಾವಾಸ್ಯೆ) ರಂಗಪೂಜೆಯು ನೆರವೇರಿತು. ಉಪಾಧಿವಂತ ಮಂಡಲದ ಸಲಹೆ ಪಡೆದು ಈ ಪೂಜಾ ಕಾರ್ಯಕ್ರಮವನ್ನು ವಿಶೇಷ ವೈಭವಗಳಿಂದ ಹಾಗೂ ಶೃದ್ಧಾ - ಭಕ್ತಿಯಿಂದ ನಡೆಸಲಾಯಿತು. 108 ಎಡೆಗಳಲ್ಲಿ ವಿಶೇಷ ಭಕ್ಷ ಭೋಜ್ಯಗಳನ್ನು ತಯಾರಿಸಿ ಮಹಾಬಲನಿಗೆ ನೈವೇದ್ಯ ಮಾಡಲಾಯಿತು. ಊರಿನ ಬಹಳ ಜನ ಬಂದು ವೀಕ್ಷಿಸಿದರು. ಅನಾದಿ ಕಾಲದಿಂದ ನಡೆದುಕೊಂಡು ಬಂದ ಈ ಪೂಜೆಯನ್ನು ತುಂಬಾ ಸುಂದರವಾಗಿ ಎತ್ತರಕ್ಕೆ ಏರಿಸಿ ಮಾಡುತ್ತಿದ್ದೀರಿ, ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

---------------------------------------------------------------------------------------------------------------------------------------------------------------------------------------

Leave a Reply