ತ್ರಿಪುರಾಖ್ಯದೀಪೋತ್ಸವ
..................................................................................................................................................
ಶ್ರೀಕ್ಷೇತ್ರ ಗೋಕರ್ಣದ ಸಾರ್ವಭೌಮ ಮಹಾಬಲೇಶ್ವರ ದೇವಾಲಯದ ಪ್ರಸಿದ್ಧ ತ್ರಿಪುರಾಖ್ಯದೀಪೋತ್ಸವವು ೧೦-ಗುರುವಾರದಂದು ಅತ್ಯಂತ ವೈಭವ ಮತ್ತು ವಿಜ್ರುಮ್ಭನೆಯಿಂದ ಸಂಪನ್ನವಾಯಿತು.ಸ್ಥಳೀಯ ಭಕ್ತರಲ್ಲದೆ
ನೆರೆ ಜಿಲ್ಲೆಗಳಾದ ಶಿವಮೊಗ್ಗ,ಮತ್ತು ಮಂಗಳೂರು ಮೊದಲಾದ ಪ್ರದೆಶಗಳಿಂದ ಬಂದ ಸಹಸ್ರಸಹಸ್ರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಕಾರ್ತಿಕಮಾಸದ ದೀಪವನ್ನು ಬೆಳಗುವುದರ ಮೂಲಕ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಮಧ್ಯಾಹ್ನ ಸಮೀಪದ ಭಿಮಕೊಂಡ ದಲ್ಲಿ ವಿಶೇಷ ಪೂಜೆ ಮುಗಿದನಂತರ ದೇವಾಲಯಕ್ಕೆ ಆಗಮಿಸಿದ ಮೇಲೆ ನಡೆದ ಈ ಉತ್ಸವ ಹಾಗೂ ನಡುರಾತ್ರಿಯಲ್ಲಿ ಕೋಟಿತೀರ್ಥದಲ್ಲಿ ನಡೆದ ಜಲಯಾನೋತ್ಸವ ಮತ್ತು ದೀಪಾಲಂಕಾರಗಳು ನಯನಮನೋಹರವಾಗಿದ್ದವು.



Leave a Reply