ರುದ್ರಾನುಷ್ಠಾನದಿಂದ ಲೋಕಕಲ್ಯಾಣ ಸಾಧ್ಯ-ಪೂಜ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಶ್ರೀ.
..................................................................................................................................................
ಗೋಕರ್ಣ.ಜೂ.೧೬. ಮಾನವ ಪ್ರಕೃತಿಯ ಅಡಿಯಾಳು.ಆಕೆಯ ಅನುಗ್ರಹದಿಂದ ಮಾತ್ರ ಬದುಕು ಸಾಧ್ಯ. ಇಂದು ಲೋಕದಲ್ಲಿ ಪ್ರಾಕೃತಿಕವಾದ ಹಲವಾರು ತೊಂದರೆಗಳನ್ನು ನಾವು ಕಾಣುತ್ತಿದ್ದೇವೆ.ಜೀವನದಲ್ಲಿ ಸಂಪತ್ತಿದೆ,ಅಧಿಕಾರವಿದೆ,ಎಲ್ಲವೂ ಇದ್ದೂ ಮನಶ್ಶಾಂತಿಯು ಮಾತ್ರ ಮರೀಚಿಕೆಯಾಗಿದೆ.ಮಾನವಜೀವನದಲ್ಲಿ ಕಂಡುಬರುವ ಈ ಎಲ್ಲ ಸಮಸ್ಯೆಗಳನ್ನೂ ಧಾರ್ಮಿಕತೆಯಿಂದ,ಧ್ಯಾನ-ಅನುಷ್ಠಾನಗಳಿಂದ ಮಾತ್ರ ಪರಿಹಾರ ಮಾಡಿಕೊಳ್ಳಲು ಸಾಧ್ಯ ಎಂದುಕೂಡಲೀಶೃಂಗೇರಿಮಠದ ಪೀಠಾಧಿsಪತಿಗಳಾದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಶ್ರೀಗಳುಹೇಳಿದ್ದಾರೆ.ಇಂದುಗೋಕರ್ಣದ ಸಾಗರತೀರದಲ್ಲಿ ಆಯೋಜಿತವಾಗಿದ್ದ ಕೋಟಿರುದ್ರ ಸಮಿತಿಯ ಕೋಟಿರುz ಷಷ್ಠಪರ್ವದ ಸಮಾರಂಭದಲ್ಲಿದಿವ್ಯಸಾನ್ನಿಧ್ಯ ವಹಿಸಿ ಅನುಗ್ರಹಭಾಷಣ ನೀಡುತ್ತಿದ್ದ ಶ್ರೀಗಳು.ವೈಯ್ಯಕ್ತಿಕ ಹಾಗೂ ಸಾಮಾಜಿಕವಾದ ತೊಂದರೆಗಳ ಶಮನಕ್ಕೆ ರುದ್ರಪಾರಾಯಣ ಅತ್ಯಂತಶ್ರೇಷ್ಠ ವಿಧಾನವೆಂದು ನಮ್ಮ ಎಲ್ಲ ಸ್ಮೃತಿಗಳು ಉದ್ಘೋಷಿಸಿವೆ.ನಮ್ಮ ಪ್ರಾಚೀನರೂ ಸಹ ರುದ್ರಾನುಷ್ಠಾನವನ್ನು ಶೀಘ್ರಫಲಕಾರಿ ಎಂದು ಎಲ್ಲ ದೋಷದುರಿತಗಳನ್ನು ಪರಿಹಾರ ಮಾಡುವುದೆಂಬುದನ್ನು ನಂಬಿನಡೆದಿದ್ದಾರೆ. ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಜಾಗತಿಕಸ್ತರದಲ್ಲಿಯೇ ಪ್ರಥಮವಾದ ಕೋಟಿರುದ್ರಕಾರ್ಯವನ್ನು ಸಂಕಲ್ಪಿಸಿದ್ದಾರೆ.ಈಗಾಗಲೇ ಹನ್ನೆರಡುಲಕ್ಷಸಂಖ್ಯೆಯಷ್ಟು ರುದ್ರಪಾರಾಯಣಗಳು ಸಮಾಪ್ತವಾಗಿವೆಯೆಂದರೆ ಇದೊಂದು ಅದ್ಭುತಕಾರ್ಯವೇ.ಸಂತರಿಗೆ ಎಂದೂ ಸ್ವಂತದ ಚಿಂತೆಯಿಲ್ಲ.ಲೋಕಹಿvವೇ ಅವರಮುಖ್ಯಧ್ಯೇಯ.ಲೋಕಹಿತಂಕರವಾದ,ಜಗದೀಶನ ಪ್ರೀತಿಕರವಾದ ಈ ಕೋಟಿರುದ್ರಕಾರ್ಯವು ಜಗತ್ತಿಗೆ ಮಂಗಳವನ್ನು ನೀಡಲಿ ಎಂದು ಆಶಿಸಿದರು.ಸಮಾರಂಭದ ಅಭ್ಯಾಗತರಾಗಿ ಆಗಮಿಸಿದ ಕುಮುಟಾ ಶಾಸಕ ಶ್ರೀ ದಿನಕರ ಶೆಟ್ಟಿಯವರು ಮಾತನಾಡಿ ಈಕ್ಷೇತ್ರದ ಹಲವಾರು ಅಭಿವೃದ್ಧಿಕಾರ್ಯಗಳು ಪೂಜ್ಯಶ್ರೀಗಳ ಅನುಗ್ರಹದಿಂದಾಗಿ ಮಂಜೂರಾಗಿವೆ.ಒಂದುರೀತಿಯಲ್ಲಿ ಶ್ರೀಗಳು ನನ್ನ ಕೆಲಸವನ್ನು ಹಗುರಾಗಿಸಿದ್ದಾರೆ.ಅನೇಕ ನೂತನ ಜನೋಪಯೋಗಿ ಕಾರ್ಯಗಳನ್ನು ರೂಪಿಸಲು ಪ್ರೇರಣೆ ನೀಡಿದ್ದು ಈಗ ಲೋಕಶಾಂತಿಗಾಗಿ ಕೋಟಿರುದ್ರದಂತಹ ಅಪೂರ್ವಧಾರ್ಮಿಕಪ್ರಕ್ರಮವನ್ನು ಸಂಕಲ್ಪಿಸಿದ್ದಾರೆ.ಈ ರುದ್ರಾನಷ್ಠಾನವು ಲೋಕಕ್ಕೆ ಕಲ್ಯಾಣವನ್ನುಂಟುಮಾಡಲಿ ಎಂದು ನುಡಿದರು.ಸರ್ವೊಚ್ಚ ನ್ಯಾಯಾಲಯದ ನ್ಯಾಯವಾದಿ ಶ್ರೀ ಶಾಂತಾರಾಮ,ವಿ.ಪಿಕಳೆಯವರು ಈ ಹಿಂದೆ ಎಲ್ಲಿಯೂ ನಡೆಯದ ಅಪೂರ್ವ ಅನುಷ್ಠಾನವಿದಾಗಿದ್ದು ಶ್ರೀಗಳು ಸಂಕಲ್ಪಿಸಿದ ಈ ಕಾರ್ಯವು ಯಶಸ್ವಿಯಾಗಲು ನಾವೆಲ್ಲರೂ ಪ್ರಯತ್ನಶೀಲರಾಗಬೇಕೆಂದರು.ಸುಬ್ರಹ್ಮಣ್ಯದ ಸಂಸ್ಕೃತಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆ.ಗಣಪತಿ ಭಟ್ಟರು ರುದ್ರಾರಾಧನೆ ಎಂಬ ವಿಷಯದಲ್ಲಿ ಪ್ರವಚನನೀಡಿದರು.. ಕೋಟಿರುದ್ರಸಮಿತಿಯ ಅಧ್ಯಕ್ಷ ಹೊರನಾಡಿನ ಶ್ರೀ ಅನ್ನಪೂರ್ಣೇಶ್ವರೀ ದೇವಾಲಯದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಶಿಯರಿಂದ ಪ್ರಸ್ತಾವನೆ, ಶ್ರೀ ಕೃಷ್ಣಕುಮಾರ ಅತ್ರಿಜಾಲು ದಂಪತಿಗಳಿಂದ ಸಭಾಪೂಜೆ ನೆರವೇರಿತು.ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳವರು ಗೋಕರ್ಣದ ಖ್ಯಾತ ವೇದವಿದ್ವಾಂಸ ವೇ.ಗಣೇಶ ನರಸಿಂಹ ಉಪಾಧ್ಯರಿಗೆವಿದ್ವತ್ಸಮ್ಮಾನ ಹಾಗೂ ಸುಳ್ಯದ ಆರಂಬೂರಿನ ವೇದವಿದ್ಯಾಲಯ ಭಾರದ್ವಾಜ ಆಶ್ರಮಕ್ಕೆ ವೇದಪಾಠಶಾಲಾ ಸಮ್ಮಾನವನ್ನು ಅನುಗ್ರಹಿಸಿ ಆಶೀರ್ವದಿಸಿದರು.ಕೋಟಿರುದ್ರಸಮಿತಿಯ ಕಾರ್ಯದರ್ಶಿ ಶ್ರೀ ಜಿ.ಕೆ. ಹೆಗಡೆಯವರು ಧನ್ಯವಾದ ಸಲ್ಲಿಸಿದರು.
Leave a Reply