

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕ್ಷೇತ್ರ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಆಂಧ್ರ ಪ್ರದೇಶದ ಉದ್ಯಮಿ ಶ್ರೀ ಪಿ. ಪ್ರತಾಪ ರೆಡ್ಡಿ ಮತ್ತು ಶ್ರೀಮತಿ ವೆಂಕಟಲಕ್ಷ್ಮಿ ಇವರು ಶ್ರೀ ಆತ್ಮಲಿಂಗಕ್ಕೆ ಅಭಿಷೇಕ ಮಾಡಲು ಒಂದು ಚಿನ್ನದ ಹಾಗು ಒಂದು ರಜತ ಶಂಖವನ್ನು ಸಮರ್ಪಣೆ ಮಾಡಿದರು . ದಿ. 19-11-2012 ಕಾರ್ತಿಕ ಸೋಮವಾರದ ಶ್ರವಣ ನಕ್ಷತ್ರ ಪ್ರದೋಷ ಕಾಲದಲ್ಲಿ ಈ ಸಮರ್ಪಣಾಕಾರ್ಯವು ಸಂಪನ್ನವಾಯಿತು. ಸಾರ್ವಭೌಮಶ್ರೀ ಮಹಾಬಲೇಶ್ವರ ದೇವರಿಗೆ ಶಂಖದಿಂದ ಮಾಡುವ ವಿವಿಧ ಅಭಿಷೇಕಗಳು ವಿಶಿಷ್ಟಸೇವೆಗಳಾಗಿವೆ. ವೇ . ಶಿತಿಕಂಠ ಭಟ್ಟ ಹಿರೇ ಆಚಾರ್ಯತ್ವದಲ್ಲಿ ನಡೆದ ಪೂಜಾ ಕೈಂಕರ್ಯದಲ್ಲಿ ವೇ. ವಾಗೀಶ ಪ್ರಸಾದ, ವೆ. ಬಾಲಕೃಷ್ಣ ಭಟ್ಟ ಜಂಭೆ ಉಪಾಧಿವಂತ ಮಂಡಲದ ಸದಸ್ಯರು ಹಾಜರಿದ್ದರು.