Donate

Help us to help others, please Donate

Related Links

e-Procurement Process 2015

Tender Application Form

Related Links

“ಗೋಕರ್ಣ ಗೌರವ” ದಿನ – 7

“ಗೋಕರ್ಣ ಗೌರವ” ದಿನ - 7

ಸೋಮವಾರ, ಜನವರಿ 16th, 2017

ಗೋಕರ್ಣ ಗೌರವ ಕಾರ್ಯಕ್ರಮದ ಏಳನೇ ದಿನ (15-01-2017) ರವಿವಾರ ಪ.ಪೂ.ಮ.ನಿ.ಪ್ರ. ಮಹಾಲಿಂಗ ಸ್ವಾಮೀಜಿ ಪೂರ್ಣಗಿರಿ ವಿರಕ್ತಮಠ , ಯದಲದೊಡ್ಡಿ ಸಿಂಧನೂರು ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಚಿತ್ತೈಸಿ ಶ್ರೀ ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದರು . ವೇ ಪರಮೇಶ್ವರ ಮಾರ್ಕಾ೦ಡೆ ಹಾಗೂ ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು . ಪೂಜೆಯ ವ್ಯವಸ್ಥೆ ಕುರಿತು ಸ್ವಾಮೀಜಿ ಸಂತಸ ವ್ಯಕ್ತಪಡಿಸಿದರು .

“ಗೋಕರ್ಣ ಗೌರವ” :  ದಿನ – 6

“ಗೋಕರ್ಣ ಗೌರವ” : ದಿನ - 6

ಶನಿವಾರ, ಜನವರಿ 14th, 2017

“ಗೋಕರ್ಣ ಗೌರವ” ದಿನ - 6 (14-01-2017) ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಮಕರ ಸಂಕ್ರಮಣದ ದಿನವಾದ ಇಂದು ಪೂಜ್ಯ ಶ್ರೀ ಗುರುಪಾದ ದೇವರು ,ಗುಲಗಂಜಿ ಮಠ ರೋಣ ಮತ್ತು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ೧೧೦೮ ಜಗದ್ಗುರು ಶ್ರೀ ಶ್ರೀ ಜ್ಞಾನಪ್ರಭು ಸಿದ್ಧರಾಮ ದೇಶೀಕೇಂದ್ರ ಮಹಾಸ್ವಾಮಿಗಳು , ಶ್ರೀಮದ್ ಯಳನಾಡು ಅರಸೀಕೆರೆ ಮಹಾಸಂಸ್ಥಾನ ಕಡೂರು - ಪೂಜ್ಯ ಸ್ವಾಮೀಜಿಗಳು ಭೇಟಿ ನೀಡಿ ಶ್ರೀ ಆತ್ಮಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಿದರು . ವೇ ಪರಮೇಶ್ವರ ಮಾರ್ಕಾ೦ಡೆ, […]

ಗೋಕರ್ಣ ಗೌರವ : ದಿನ – 5

ಗೋಕರ್ಣ ಗೌರವ : ದಿನ - 5

ಶನಿವಾರ, ಜನವರಿ 14th, 2017

ಗೋಕರ್ಣ ಗೌರವ : ದಿನ - 5 (13-01-2017) ಪೂಜ್ಯ ಶ್ರೀ ಷ. ಬ್ರ. ರೇಣುಕಾ ಶಿವಾಚಾರ್ಯ ಮಹಾಸ್ವಾಮೀಜಿ ಸಂಸ್ಥಾನ ಹಿರೇಮಠ ಮಂತ್ರೂಪ್, ಸೊಲ್ಲಾಪುರ ಇವರು ಚಿತ್ತೈಸಿ ಆತ್ಮಲಿಂಗರೂಪಿ ಮಹಾಬಲೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು . ಪ್ರಧಾನ ಅರ್ಚಕ ವೇ. ಶಿತಿಕಂಠ ಹಿರೇಭಟ್ , ಉಪಾಧಿವಂತ ಪುರೋಹಿತರು ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು . ಪೂಜಾ ಪದ್ಧತಿ, ವ್ಯವಸ್ಥೆ ಕುರಿತು ಸ್ವಾಮೀಜಿ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು […]

ಗೋಕರ್ಣ ಗೌರವ : ದಿನ-4

ಗೋಕರ್ಣ ಗೌರವ : ದಿನ-4

ಗುರುವಾರ, ಜನವರಿ 12th, 2017

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದ ಅಂಗವಾಗಿ ಪೂಜ್ಯ ಶ್ರೀ ಷ. ಬ್ರ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ , ಪಂಚವಣಗಿ ಹಿರೇಮಠ ಹರಗಿನಡೋಣಿ ಬಳ್ಳಾರಿ ಇವರು 12-01-2017 ಗುರುವಾರ ಆಗಮಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ಶ್ರೀರಾಮಚಂದ್ರಾಪುರಮಠದ ವತಿಯಿಂದ ನಡೆಯುತ್ತಿರುವ ವಿಶೇಷ ಪೂಜೆಯ ವ್ಯವಸ್ಥೆ ಕುರಿತು ಸಂತಸ ವ್ಯಕ್ತಪಡಿಸಿದರು . ವೇ ಶಿತಿಕಂಠ ಹಿರೇ ಭಟ್ ಹಾಗೂ ಉಪಾಧಿವಂತ ಮಂಡಳಿ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು . […]

ಗೋಕರ್ಣ ಗೌರವ : ದಿನ-3

ಗೋಕರ್ಣ ಗೌರವ : ದಿನ-3

ಗುರುವಾರ, ಜನವರಿ 12th, 2017

ಗೋಕರ್ಣ ಗೌರವ ಕಾರ್ಯಕ್ರಮದ ಮೂರನೇ ದಿನ (11-01-2017) ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ , ವಜ್ರದೇಹಿ ಮಠ, ಗುರುಪುರ ಮಂಗಳೂರು ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಚಿತ್ತೈಸಿ ಶ್ರೀ ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದರು . ವೇ ಶಿತಿಕಂಠ ಹಿರೇಭಟ್ ಹಾಗೂ ಉಪಾಧಿವಂತ ಮಂಡಳಿಯ ಸದಸ್ಯರು ಹಾಗೂ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಉಪಸ್ಥಿತರಿದ್ದರು . “ಯತಿಗಳನ್ನು ಸ್ವಾಗತಿಸಿ, ಲೋಕಕಲ್ಯಾಣವನ್ನು ಪ್ರಾರ್ಥಿಸಿ , ಪೂಜೆಯ ಸೌಲಭ್ಯ ಕಲ್ಪಿಸಿರುವುದು ಅತೀವ ಸಂತಸ ತಂದಿದೆ” ಎಂದು […]

“ಗೋಕರ್ಣ ಗೌರವ ” –  ಎರಡನೇ ದಿನ : 10-01-2017

“ಗೋಕರ್ಣ ಗೌರವ ” - ಎರಡನೇ ದಿನ : 10-01-2017

ಮಂಗಳವಾರ, ಜನವರಿ 10th, 2017

ಶ್ರೀ ಶ್ರೀ ೧೦೦೮ ವಿದ್ಯಾವಾರಿಧಿ ಶ್ರೀಪಾದ ತೀರ್ಥರು , ಶ್ರೀಮದ್ ಕಣ್ವ ಪೀಠ - ಮೂಲಮಹಾಸಂಸ್ಥಾನ ಹುಣಸಿಹೊಳೆ ಯಾದಗಿರಿ ಇವರು “ಗೋಕರ್ಣ ಗೌರವ ” ಕಾರ್ಯಕ್ರಮದ ಎರಡನೇ ದಿನವಾದ ಇಂದು 10-01-2017 ಮಂಗಳವಾರ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಆತ್ಮಲಿಂಗಕ್ಕೆ ಪೂಜೆ ನೆರವೇರಿಸಿದರು . ಪೂಜೆ ಕೈಗೊಂಡ ನಂತರ ಸ್ವಾಮೀಜಿಯವರಿಗೆ ಫಲಗಾಣಿಕೆ ಸಮರ್ಪಿಸಲಾಯಿತು . ವೇ ಶಿತಿಕಂಠ ಹಿರೇಭಟ್ ಹಾಗೂ ಉಪಾಧಿವಂತ ಮಂಡಳಿಯ ಸದಸ್ಯರು ಹಾಗೂ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ […]

“ಗೋಕರ್ಣ ಗೌರವ”  ವಿಶೇಷ ಕಾರ್ಯಕ್ರಮ ಪ್ರಾರಂಭ .

“ಗೋಕರ್ಣ ಗೌರವ” ವಿಶೇಷ ಕಾರ್ಯಕ್ರಮ ಪ್ರಾರಂಭ .

ಸೋಮವಾರ, ಜನವರಿ 9th, 2017

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಾಡಿನ ವಿವಿಧ ಸಂತರುಗಳಿಂದ ಲೋಕಕಲ್ಯಾಣಾರ್ಥ ಶ್ರೀ ಆತ್ಮಲಿಂಗ ಪೂಜೆ ಹಾಗು ಸಂತರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ “ಗೋಕರ್ಣ ಗೌರವ” ಇಂದು 09-01-2017 ಸೋಮವಾರ ಶುಭಾರಂಭಗೊಂಡಿತು. ಶ್ರೀಮದ್ ಗಿರಿರಾಜಸೂರ್ಯ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಶ್ರೀಶೈಲ ಜಗದ್ಗುರು ಡಾ|| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು. ಸೂರ್ಯಸಿಂಹಾಸನ ಮಠಾಧೀಶ . […]

“ಶತಚಂಡಿ ಹವನ” ಸಂಪನ್ನ

“ಶತಚಂಡಿ ಹವನ” ಸಂಪನ್ನ

ಶುಕ್ರವಾರ, ದಶಂಬರ 23rd, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ 23-12-2016 ಶುಕ್ರವಾರ ಶತಚಂಡಿ ಹವನ ಸಂಪನ್ನಗೊಂಡಿತು .ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ, ವೇ ಶಿತಿಕಂಠ ಹಿರೇ ಭಟ್ ಹಾಗೂ ವೇ ಗಣೇಶ ಭಟ್ ಹಿರೇಗಂಗೆ ಇವರ ನೇತೃತ್ವದಲ್ಲಿ ಶತಚಂಡಿ ಹವನ ಜರುಗಿತು .

ಗೋಕರ್ಣ : ಶತಚಂಡಿ ಹವನ (22-12-2016 & 23-12-2016)

ಸೋಮವಾರ, ದಶಂಬರ 19th, 2016

ಗೋಕರ್ಣ : ಶತಚಂಡಿ ಹವನ:- ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ 22-12-2016 , 23-12-2016 ರಂದು ‘ಶತಚಂಡಿ ಹವನ’ ಜರುಗಲಿದೆ . ಶ್ರೀ ದೇವಾಲಯದ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರತಿ ಶುಕ್ರವಾರ ಸಪ್ತಶತಿ ಪಾರಾಯಣ ಸೇವೆ ಜರುಗುತ್ತಿದ್ದು , ಈ ಸೇವೆ ಒಂದು ವರ್ಷ ಪೂರೈಸಿದ್ದರ ಬಗ್ಗೆ ‘ಶತಚಂಡಿ ಹವನ’ ಹಮ್ಮಿಕೊಳ್ಳಲಾಗಿದೆ . ಉಪಾಧಿವಂತ ಮಂಡಳಿಯ […]

ಶ್ರೀ ದೇವಾಲಯದಲ್ಲಿ ಗೋ-ಪೂಜೆ

ಶ್ರೀ ದೇವಾಲಯದಲ್ಲಿ ಗೋ-ಪೂಜೆ

ಬುಧವಾರ, ದಶಂಬರ 14th, 2016

14-12-2016 — ಬುಧವಾರ — ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ , ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥ “ಗೋಪೂಜೆ ” ನೆರವೇರಿತು . ವೇ ಶಿತಿಕಂಠ ಹಿರೇಭಟ್ ಮತ್ತು ಉಪಾಧಿವಂತ ಮಂಡಳಿಯ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು .

Highslide for Wordpress Plugin