Donate

Help us to help others, please Donate

Related Links

e-Procurement Process 2015

Tender Application Form

Related Links

ಶ್ರಾವಣ ಸೋಮವಾರ – ವಿಶೇಷ ಪೂಜೆ

ಶ್ರಾವಣ ಸೋಮವಾರ - ವಿಶೇಷ ಪೂಜೆ

ಸೋಮವಾರ, ಆಗಸ್ತು 8th, 2016

ಶ್ರಾವಣ ಮಾಸದ ಸೋಮವಾರದ ಪುಣ್ಯ ಪರ್ವ ಕಾಲದಲ್ಲಿ ಆತ್ಮಲಿಂಗರೂಪಿ, ಮಹಾಬಲೇಶ್ವರ ದೇವರಿಗೆ ವಿಶೇಷಗಟ್ಲೆ ಪೂಜೆ .

Gou Pooja

ಕಾರ್ಕಳದ ಶಾಸಕ ಶ್ರೀ ವಿ. ಸುನಿಲ್ ಕುಮಾರ್ ಭೇಟಿ

ಗುರುವಾರ, ಆಗಸ್ತು 4th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಕಾರ್ಕಳದ ಶಾಸಕ, ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಶ್ರೀ ವಿ. ಸುನಿಲ್ ಕುಮಾರ್ ಇವರು ಈ ದಿನ ಕುಟುಂಬ ಸಮೇತ ಆಗಮಿಸಿ ಶ್ರೀ ದೇವರಿಗೆ ಅಭಿಷೇಕ-ಪೂಜೆ ಸಲ್ಲಿಸಿದರು . ಆನಂತರ ಶ್ರೀ ದೇವಾಲಯದ ಗೋಶಾಲೆಗೆ ಆಗಮಿಸಿ ಗೋಪೂಜೆ ನೆರವೇರಿಸಿದರು . ವೇ ರಾಮಕೃಷ್ಣ ಶಂಕರಲಿಂಗ ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಸ್ವಾಗತಿಸಿದರು . ಶ್ರೀಮಠದ ದೇಶೀ ತಳಿಯ ಗೋ ಸಂರಕ್ಷಣೆಯ […]

1st Yaama Pooja

‘ಯಾಮಪೂಜೆ’ ಸಂಪನ್ನ.

ಸೋಮವಾರ, ಆಗಸ್ತು 1st, 2016

ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ -ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ - ದುರ್ಮುಖ ಸಂವತ್ಸರದ ‘ಯಾಮಪೂಜೆ’ ಕಾರ್ಯಕ್ರಮವು ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ವಿಶೇಷ ಪೂಜೆ, ಕೊನೆಯಲ್ಲಿ ರುದ್ರಹೋಮದೊಂದಿಗೆ ಸಂಪನ್ನಗೊಂಡಿತು .

‘ಯಾಮಪೂಜೆ’  31-07-2016

‘ಯಾಮಪೂಜೆ’ 31-07-2016

ರವಿವಾರ, ಜುಲಾಯಿ 24th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ -ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ - ದುರ್ಮುಖ ಸಂವತ್ಸರದ ‘ಯಾಮಪೂಜೆ’ ಕಾರ್ಯಕ್ರಮವು ದಿ 31-07-2016 ರವಿವಾರ ಮುಂಜಾನೆ ಪ್ರಾರಂಭಗೊಂಡು 01-08-2016 ಸೋಮವಾರ ಮುಂಜಾನೆವರೆಗೆ ರೂಢಿಗತ ಪರಂಪರೆಯಂತೆ ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಜರುಗಲಿದೆ . ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ಒಂದು ವಿಶೇಷ ಪೂಜೆ, ಕೊನೆಯಲ್ಲಿ ಹೋಮ ಇರುವುದು […]

‘ಗುರುಪೂರ್ಣಿಮೆ’ ಪ್ರಯುಕ್ತ ಗೋಕರ್ಣದಲ್ಲಿ ವಿಶೇಷ ಪೂಜೆ

‘ಗುರುಪೂರ್ಣಿಮೆ’ ಪ್ರಯುಕ್ತ ಗೋಕರ್ಣದಲ್ಲಿ ವಿಶೇಷ ಪೂಜೆ

ಮಂಗಳವಾರ, ಜುಲಾಯಿ 19th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ – ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ - ಗುರುಪೂರ್ಣಿಮೆ ಪ್ರಯುಕ್ತ ದತ್ತಾತ್ರೇಯ ಗುರುದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು . ಶ್ರೀಪಾದ ಶ್ರೀ ವಲ್ಲಭರು ಈ ಸ್ಥಳದಲ್ಲಿ ಬಹಳ ಕಾಲ ತಪಸ್ಸನ್ನು ಆಚರಿಸಿದ್ದರು . ವೇ ಪರಮೇಶ್ವರ ಮಾರ್ಕಾ೦ಡೆ ಪೂಜಾ ಕೈಂಕರ್ಯ ನೆರವೇರಿಸಿದರು . ಪ್ರಧಾನ ಅರ್ಚಕ ವೇ ಶಿತಿಕಂಠ ಹಿರೇ ಭಟ್ , ಆಡಳಿತಾಧಿಕಾರಿ ಶ್ರೀ ಜಿ […]

Religious Programme

ಶ್ರೀ ಚಿಂತಾಮಣಿ ಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವರಿಗೆ ನೂತನ ರಜತ ಕವಚ

ಶುಕ್ರವಾರ, ಜುಲಾಯಿ 8th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ - ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ - ಶ್ರೀ ಚಿಂತಾಮಣಿ ಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವರಿಗೆ ನೂತನ ರಜತ ಕವಚ ಸಮರ್ಪಿಸಲಾಯಿತು. ನವಗ್ರಹ ಹೋಮ, ಅಥರ್ವಶೀರ್ಷ ಹವನ , ದುರ್ಗಾಶಾಂತಿ ಕಾರ್ಯಕ್ರಮ ಸಂಪನ್ನಗೊಂಡಿತು . ಉಪಾಧಿವಂತ ಮಂಡಳಿಯ ಸದಸ್ಯರು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು .

ಆತ್ಮಲಿಂಗದ ಸುತ್ತ ಬೆಳ್ಳಿಯ ನೂತನ ಕವಚ

ಆತ್ಮಲಿಂಗದ ಸುತ್ತ ಬೆಳ್ಳಿಯ ನೂತನ ಕವಚ

ಶುಕ್ರವಾರ, ಜುಲಾಯಿ 1st, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ - ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ - ಶ್ರೀ ಆತ್ಮಲಿಂಗದ ಸುತ್ತ ಬೆಳ್ಳಿಯ ನೂತನ ಕವಚವನ್ನು ಶಾಸ್ತ್ರೋಕ್ತವಾಗಿ ತೊಡಿಸಲಾಯಿತು . ಈ ಸಂದರ್ಭದಲ್ಲಿ ವೇ ಗಣೇಶ ಭಟ್ ಹಿರೇಗಂಗೆ, ವೇ ಶಿತಿಕಂಠ ಹಿರೇಭಟ್ , ವೇ ಕೃಷ್ಣ ಭಟ್ ಷಡಕ್ಷರಿ , ವೇ ಗಣೇಶ ಭಟ್ ಜಂಭೆ , ವೇ ವಿನಾಯಕ ರಮಣಿ ಪ್ರಸಾದ , ಆಡಳಿತಾಧಿಕಾರಿ […]

ಮಹಾರುದ್ರ ಸೇವೆ ಸಂಪನ್ನ

ಮಹಾರುದ್ರ ಸೇವೆ ಸಂಪನ್ನ

ಸೋಮವಾರ, ಜೂನ್ 27th, 2016

ಮಹಾರಾಷ್ಟ್ರದ ಶ್ರೀ ಶ್ರೀ ಸಮೀರಗುರೂಜಿಯವರ ಅನುಯಾಯಿಗಳಿಂದ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಮಹಾರುದ್ರ ಸೇವೆ ಸಂಪನ್ನಗೊಂಡಿತು .

ಜೀವಜಲ ಉಚಿತ ವಿತರಣಾ’ ಯೋಜನೆ

ಜೀವಜಲ ಉಚಿತ ವಿತರಣಾ’ ಯೋಜನೆ

ಸೋಮವಾರ, ಮೇ 30th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ವತಿಯಿಂದ ‘ಜೀವಜಲ ಉಚಿತ ವಿತರಣಾ’ ಯೋಜನೆಯಡಿ ಗೋಕರ್ಣದ ಸುತ್ತಲಿನ ಗ್ರಾಮಗಳಿಗೆ ಉಚಿತವಾಗಿ ಶುದ್ಧವಾದ ಕುಡಿಯುವ ನೀರು ಪೂರೈಸಲಾಗುತ್ತಿದೆ . ಈ ಜನಪರ ಯೋಜನೆಯ ಬಗ್ಗೆ ತಿಪ್ಪಸಗಿ, ಕಟನಬಾವಿ ಗ್ರಾಮದ ಫಲಾನುಭವಿ ಜನರು ಕೃತಜ್ಞತೆ ವ್ಯಕ್ತಪಡಿಸಿ , ಈ ಯೋಜನೆ ಪ್ರಾರಂಭಿಸಿದ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳವರನ್ನು ನೆನೆದು ಶೃದ್ಧಾ ಭಕ್ತಿಗಳಿಂದ ಫಲ ಸಮರ್ಪಿಸಿದರು . ಕುಡಿಯಲೂ ಸಹ ಹನಿ ನೀರಿಲ್ಲದ ಕಷ್ಟದ ಸಮಯದಲ್ಲಿ ಈ ಯೋಜನೆಯಿಂದ ಬಹಳ […]

ಶ್ರೀ ದೇವಾಲಯಕ್ಕೆ ಪುತ್ತಿಗೆ ಶ್ರೀ ಭೇಟಿ

ಶ್ರೀ ದೇವಾಲಯಕ್ಕೆ ಪುತ್ತಿಗೆ ಶ್ರೀ ಭೇಟಿ

ಮಂಗಳವಾರ, ಮೇ 24th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ದಿ 23-05-2016 ಸೋಮವಾರ ಪುತ್ತಿಗೆ ಮಠದ ಶ್ರೀಮದ್ ಸುಗುಣೇಂದ್ರ ತೀರ್ಥ ಶ್ರೀಪಾದ ಸ್ವಾಮೀಜಿಗಳವರು ಭೇಟಿ ನೀಡಿ ಅಭಿಷೇಕ, ಸುವರ್ಣ ನಾಗಾಭರಣ ವಿಶೇಷ ಪೂಜೆ ಸಲ್ಲಿಸಿದರು . ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿ ಗೌರವಿಸಿದರು . ವೇ ಶಿತಿಕಂಠ ಹಿರೇಭಟ್ , ವೇ ಪರಮೇಶ್ವರ ಮಾರ್ಕಾಂಡೆ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಉಪಾಧಿವಂತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು .

Highslide for Wordpress Plugin