Donate

Help us to help others, please Donate

Related Links

e-Procurement Process 2015

Tender Application Form

Related Links

ಆಂಜನೇಯ ಉತ್ಸವ ; ಶ್ರೀರಾಮ ಪಾದುಕಾಪೂಜೆ ಸಂಪನ್ನ .

ಆಂಜನೇಯ ಉತ್ಸವ ; ಶ್ರೀರಾಮ ಪಾದುಕಾಪೂಜೆ ಸಂಪನ್ನ .

ಶನಿವಾರ, ಮೇ 21st, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ಸಮರ್ಪಣೆಗೊಂಡ “ಶ್ರೀರಾಮ” ಪಾದುಕೆಗಳನ್ನು ಆಂಜನೇಯ ದೇವರ ಹುಣ್ಣಿಮೆ ಉತ್ಸವದಲ್ಲಿ ಕರೆತರಲಾಯಿತು . ಶ್ರೀ ರಮೇಶ್ ಭಟ್ ದಂಪತಿಗಳು ಶ್ರೀರಾಮ ಪಾದುಕಾ ಪೂಜೆ ನೆರವೇರಿಸಿದರು . ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು . ವೇ ಗಣೇಶ ಭಟ್ ಜಂಭೆ ಮತ್ತು ವೇ ಜನಾರ್ಧನ್ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಈ ಸಂದರ್ಭದಲ್ಲಿ ಉಪಾಧಿವಂತ ಮಂಡಳಿಯ ಸದಸ್ಯರು , ಭಕ್ತಾದಿಗಳು […]

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ವಿಶೇಷ ಪೂಜೆ ಸಂಪನ್ನ .

ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಂದ ವಿಶೇಷ ಪೂಜೆ ಸಂಪನ್ನ .

ಸೋಮವಾರ, ಮೇ 9th, 2016

ಅಕ್ಷಯ ತೃತೀಯ ಶುಭದಿನವಾದ ಇಂದು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಆಗಮಿಸಿ ಶ್ರೀ ಮಹಾಬಲೇಶ್ವರ , ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು .

‘ಜಲಜನಪದೋತ್ಸವ 2016’ ಸಂಪನ್ನ .

‘ಜಲಜನಪದೋತ್ಸವ 2016’ ಸಂಪನ್ನ .

ಬುಧವಾರ, ಏಪ್ರಿಲ್ 27th, 2016

ಕನ್ನಡ ಜಾನಪದ ಪರಿಷತ್ - ಉತ್ತರಕನ್ನಡ ಜಿಲ್ಲಾ ಘಟಕದ ವತಿಯಿಂದ ದಿನಾಂಕ 25-04-20106 ಸೋಮವಾರ ಶ್ರೀ ಕ್ಷೇತ್ರ ಗೋಕರ್ಣದ ಮಹರ್ಷಿ ದೈವರಾತ ವೇದಿಕೆಯಲ್ಲಿ ರಾಜ್ಯಮಟ್ಟದ ಜಲಜನಪದೋತ್ಸವ 2016 ‘ ಕಾರ್ಯಕ್ರಮ ಜರುಗಿತು . ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಕಲಾತಂಡಗಳು ಪ್ರತಿಭೆ ಪ್ರದರ್ಶಿಸಿದವು . ಕಾರ್ಯಕ್ರಮವನ್ನು ಶ್ರೀ ಮಹಾಬಲೇಶ್ವರ ದೇವಾಲಯದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಇವರು ಉದ್ಘಾಟಿಸಿದರು . ಗುಮಟೆ ಬಾರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು .ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶ್ರೀ ಜಿ ಕೆ ಹೆಗಡೆಯವರು […]

ಗೋಕರ್ಣ : ಹನುಮ ಜಯಂತಿ ಉತ್ಸವ

ಗೋಕರ್ಣ : ಹನುಮ ಜಯಂತಿ ಉತ್ಸವ

ಶನಿವಾರ, ಏಪ್ರಿಲ್ 23rd, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಹನುಮ ಜನ್ಮಭೂಮಿಯಲ್ಲಿ ಹನುಮ ಜಯಂತಿ ಪ್ರಯುಕ್ತ ಪಲ್ಲಕ್ಕಿ ಉತ್ಸವ , ಚತುರ್ವೇದ ಪಾರಾಯಣ , ಗಣಪತಿ ಉಪನಿಷತ್ ಹವನ , ಶ್ರೀ ಸೂಕ್ತ ಹವನ , ಪುರುಷ ಸೂಕ್ತ ಹವನ , ರುದ್ರ ಹವನ , ಹನುಮಾನ್ ಮೂಲಮಂತ್ರ ಹವನ , ಪವಮಾನ ಹವನ ಕಾರ್ಯಕ್ರಮಗಳು ಜರುಗಿದವು . ಶ್ರೀ ರಾಜಾರಾಮ ಭಟ್ ದಂಪತಿಗಳ ಯಜಮಾನತ್ವದಲ್ಲಿ […]

FOLK DANCE

‘ಆನಂಗ ತ್ರಯೋದಶಿ’ (ಸುಗ್ಗಿ ಉತ್ಸವ ) ಸಂಪನ್ನ

ಬುಧವಾರ, ಏಪ್ರಿಲ್ 20th, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ರೂಢಿಗತ ಪರಂಪರೆಯಂತೆ ದುರ್ಮುಖ ಸಂವತ್ಸರದ ‘ ಕಾಮಾಘನಾಶಿನಿ ಸಂದರ್ಶನೋತ್ಸವ ಮತ್ತು’ ‘ಆನಂಗ ತ್ರಯೋದಶಿ’ (ಸುಗ್ಗಿ ಉತ್ಸವ ) ಸಂಪನ್ನಗೊಂಡಿತು . ಶ್ರೀ ದೇವರ ಉತ್ಸವದ ಮುಂದುಗಡೆ ಸಾಂಪ್ರದಾಯಿಕ ಅಲಂಕೃತ ಸುಗ್ಗಿ ಕುಣಿಯುತ್ತ ಸಾಗುತ್ತದೆ . ಸ್ಥಳೀಯ ಹುಳಸೆಕೇರಿ ಹಾಲಕ್ಕಿ ಪಂಗಡದವರಿಂದ ಸುಗ್ಗಿ ಕುಣಿತ ಸೇವೆ ಜರುಗುತ್ತದೆ . ಶ್ರೀ ದೇವಾಲಯದಿಂದ ರಥಬೀದಿಯ […]

ಶ್ರೀರಾಮನವಮಿ – ವಿಶೇಷ ಪೂಜೆ

ಶ್ರೀರಾಮನವಮಿ - ವಿಶೇಷ ಪೂಜೆ

ಶನಿವಾರ, ಏಪ್ರಿಲ್ 16th, 2016

ಶ್ರೀರಾಮನವಮಿ ಪ್ರಯುಕ್ತ (15-04-2016) ಶ್ರೀ ಕ್ಷೇತ್ರ ಗೋಕರ್ಣದ ಸಮುದ್ರ ತೀರದ ಶ್ರೀ ರಾಮ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿತು . ಶ್ರೀ ಮಹಾಬಲೇಶ್ವರ ದೇವಾಲಯದ ದೀವಟಿಗೆ, ವಾದ್ಯ ಸಹಿತ ಸಲಾಮು ಬಂದ ನಂತರ ಮಹಾಪೂಜೆ ನೆರವೇರಿತು . ವೇ ಪ್ರಕಾಶ ಅಂಬೇಕರ್ ಪೂಜೆ ನೆರವೇರಿಸಿದರು .ಶ್ರೀ ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು . ಸಾವಿರಾರು ಭಕ್ತರು ಶ್ರೀರಾಮನ ದರ್ಶನ ಪಡೆದು ಧನ್ಯರಾದರು .

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಭೇಟಿ

ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಭೇಟಿ

ಮಂಗಳವಾರ, ಏಪ್ರಿಲ್ 12th, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀ ಕ್ಷೇತ್ರ ಗೋಕರ್ಣಕ್ಕೆ ಇಂದು ಆಗಮಿಸಿ ಶ್ರೀ ಮಹಾಬಲೇಶ್ವರ , ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು . “ಕಳೆದ ೨೧ ತಿಂಗಳುಗಳ ನಂತರ ಶ್ರೀ ಸವಾರಿಯ ಸಂಚಾರವು ಶ್ರೀ ಕ್ಷೇತ್ರ ಗೋಕರ್ಣದ ಮೂಲಕ ಪ್ರಾರಂಭಗೊಂಡಿದೆ , ನಮ್ಮ ಮೂಲ ಸ್ಥಾನವಾದ ಸಾರ್ವಭೌಮ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರು ಮತ್ತು ಪರಿವಾರ ದೇವರುಗಳಿಗೆ ಪೂಜೆ ಸಲ್ಲಿಸಿ ಈ ವಿಜಯ […]

ಉಚಿತವಾಗಿ ನೀರಿನ ಪೂರೈಕೆ – “ಜೀವಜಲ ವಿತರಣಾ ಸೇವೆ ”

ಉಚಿತವಾಗಿ ನೀರಿನ ಪೂರೈಕೆ - “ಜೀವಜಲ ವಿತರಣಾ ಸೇವೆ ”

ಶುಕ್ರವಾರ, ಏಪ್ರಿಲ್ 8th, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ ಶ್ರೀ ಕ್ಷೇತ್ರ ಗೋಕರ್ಣ ಹಾಗೂ ಸುತ್ತಮುತ್ತಲಿನ ಊರುಗಳಿಗೆ ಉಚಿತವಾಗಿ ನೀರು ವಿತರಿಸುವ ಕಾರ್ಯಕ್ರಮಕ್ಕೆ ಯುಗಾದಿ ಹಬ್ಬದ ಶುಭ ದಿನವಾದ ಇಂದು ಚಾಲನೆ ನೀಡಲಾಯಿತು . ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ವೇ . ಶಿವರಾಮ ಮಯ್ಯರ್ ಗೋಕರ್ಣ ಮತ್ತು ಶ್ರೀ ಮಂಗಲಮೂರ್ತಿ ಸಭಾಹಿತ - ವಕೀಲರು - ಗೋಕರ್ಣ ಇವರುಗಳು […]

“ಮಹಾರುದ್ರ ” ಕಾರ್ಯಕ್ರಮ ಪಾರಾಯಣ ಸಂಪನ್ನ

“ಮಹಾರುದ್ರ ” ಕಾರ್ಯಕ್ರಮ ಪಾರಾಯಣ ಸಂಪನ್ನ

ಬುಧವಾರ, ಏಪ್ರಿಲ್ 6th, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಳಿಯ ಸಹಯೋಗದಲ್ಲಿ ದಿನಾಂಕ 06-04-2016 ಬುಧವಾರ ಲೋಕಕಲ್ಯಾಣಾರ್ಥ “ಮಹಾರುದ್ರ ” ಸಂಪನ್ನಗೊಂಡಿತು . ಈ ಸಂದರ್ಭದಲ್ಲಿ ವಿಶ್ವಶಾಂತಿ ಮತ್ತು ಧರ್ಮರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು . ಮುಂಜಾನೆಯಿಂದ ಮಧ್ಯಾಹ್ನ 02.00 ಘಂಟೆಯ ವರೆಗೆ ರುದ್ರ ಪಾರಾಯಣ , ರುದ್ರ ಹೋಮ , ಪೂರ್ಣಾಹುತಿ, ಪ್ರಸಾದ ವಿತರಣೆ […]

Sri Sri Shivananda Swaraswati Swamiji @ Car Festival

ಶ್ರೀಮನ್ಮಹಾರಥೋತ್ಸವ ಸು-ಸಂಪನ್ನ

ಗುರುವಾರ, ಮಾರ್ಚ 10th, 2016

ದಿನಾಂಕ 09-03-2016 ರಂದು ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಶ್ರೀಮನ್ಮಹಾರಥೋತ್ಸವವು ಸು-ಸಂಪನ್ನಗೊಂಡಿತು . ಮಧ್ಯಾಹ್ನ 03.30 ಕ್ಕೆ ರಥಬೀದಿಯ ಶುರುವಿನಿಂದ ಶ್ರೀ ಮಹಾಬಲೇಶ್ವರ ದೇವರ ಉತ್ಸವಮೂರ್ತಿ ರಥವನ್ನು ಏರಿದ ನಂತರ ಹೊರಟ ಮಹಾರಥ ರಥಬೀದಿಯ ತುದಿಯಲ್ಲಿರುವ ವೆಂಕಟರಮಣ ದೇವಾಲಯದ ವರೆಗೆ ಸಾಗಿತು . ಊರ , ಹೊರ ಊರಿನ, ಹೊರ ರಾಜ್ಯಗಳ ಅಲ್ಲದೆ ವಿದೇಶೀಯ ಭಕ್ತರೂ ಜಗದೀಶ್ವರನ ಮಹಾರಥ ಎಳೆದು ಪುನೀತರಾದರು . ಜಗದೀಶ್ವರ ಮಹಾಬಲೇಶ್ವರನನ್ನು ಹೊತ್ತ ಮಹಾರಥ ವಿಶೇಷ ವಾದ್ಯ , ಭಕ್ತರ ಹರ ಹರ […]

Highslide for Wordpress Plugin