ಶ್ರೀ ದೇವರಲ್ಲಿ ಭಕ್ತರು ಉಪಾಧಿವಂತರ ದ್ವಾರಾ ನಡೆಸತಕ್ಕ ವಿಶೇಷ ಪೂಜಾ ಸೇವೆಗಳ ವಿವರ :
ಶನಿವಾರ, ಜನವರಿ 31st, 2009ಶ್ರೀ ದೇವರಲ್ಲಿ ಭಕ್ತರು ಉಪಾಧಿವಂತರ ದ್ವಾರಾ ನಡೆಸತಕ್ಕ ವಿಶೇಷ ಪೂಜಾ ಸೇವೆಗಳ ವಿವರ


Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ದೇವರಲ್ಲಿ ಭಕ್ತರು ಉಪಾಧಿವಂತರ ದ್ವಾರಾ ನಡೆಸತಕ್ಕ ವಿಶೇಷ ಪೂಜಾ ಸೇವೆಗಳ ವಿವರ
- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ ಶರಣಾಗತಿಗೆ ಅದ್ಭುತ ಶಕ್ತಿ ಇದೆ. ಹನುಮಂತ ಶ್ರೀರಾಮನಲ್ಲಿ ಶರಣಾಗತನಾಗಿ ಅಮರನಾದ. ವಿಭೀಷಣ ಶರಣಾಗಿ ಬಂದು ಲಂಕೆಯಲ್ಲಿ ಸತ್ಯರಾಜ್ಯ ಸ್ಥಾಪಿಸಿದ. ಅಂತೆಯೇ ಭಕ್ತ ದೇವನಲ್ಲಿ ಶರಣಾಗತನಾಗಿ ಭವದ ಬಂಧನವನ್ನೇ ಕಳಚಿಕೊಳ್ಳಬಲ್ಲ. ಶರನಾಗತಿಯೆಂದರೆ ಗುರು - ಶಿಷ್ಯ; ಜೀವ -ದೇವ; ಪ್ರಕೃತಿ-ಪುರುಷರ ಸಂಗಮದ ವ್ಯಾಪಾರ. || ಹರೇ ರಾಮ ||
- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ ಸತ್ಯದ ಹಾದಿ ಸದಾ ದುರ್ಗಮ. ಅದು ನಿರಂತರ ಎಕಾಂಗಿತನದಿಂದ ಕೂಡಿದೆ. ಕಾಣುವ ಪ್ರಪಂಚದ ಭೋಗಗಳನ್ನು ಬಿಟ್ಟು ಕಾಣದ ಭಗವಂತನ ಹಿಂದೆ ಓಡುವ ಸಂತರ ಜೀವನ ಜನರ ಕಣ್ಣಿಗೆ ವಿಲಕ್ಷಣವಾಗಿ ಕಾಣುವುದು. ಎಲ್ಲ ಸುಖ - ದುಃಖಗಳ ತಾಯಿಯೆನಿಸಿದ, ತಮ್ಮಲ್ಲೇ ಹುದುಗಿರುವ ಪರಮಾತ್ಮ ಸುಖವನ್ನು ಬಿಟ್ಟು ಹೊರಗಿನ ವಿಷಯ ಸುಖಗಳಿಗಾಗಿ ಹಾತೊರೆಯುವ ಜಗತ್ತು ಜ್ಞಾನಿಗಳ ಕಣ್ಣಿಗೆ ಹುಚ್ಚಾಗಿ ತೋರುವುದು. ವಿಷಯ ಸುಖದ ಪೊರೆಯನ್ನು ಕಳಚಿ ಅಂತರಂಗದ […]
- ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರು, ಶ್ರೀ ಸಂಸ್ಥಾನ, ಗೋಕರ್ಣ ಜಗತ್ತಿನ ಎಲ್ಲ ಮಾದಕ ವಸ್ತುಗಳಿಗಿಂತ ಹೆಚ್ಚು ಮತ್ತೇರಿಸುವ ವಸ್ತು ಹಣ. ಮಾದಕ ವಸ್ತುಗಳು ತಾತ್ಕಾಲಿಕವಾಗಿ ಮತ್ತೇರಿಸಿದರೆ ಹಣ ನಿರಂತರ ಮತ್ತೆರಿಸುತ್ತಲೇ ಇರುತ್ತದೆ, ಅರ್ಥದ ಹಿಂದೆ ಧರ್ಮದ ಹಿನ್ನೆಲೆ ಇರದಿದ್ದರೆ ಮನುಷ್ಯ ಹಾರಾಡುತ್ತಾನೆ. ದೇವ - ಗುರು - ಹಿರಿಯರನ್ನು ಧಿಕ್ಕರಿಸುತ್ತಾನೆ. ಹಣ ಕಳೆದುಕೊಂಡರೆ ಬಲ - ದರ್ಪಗಳು ಕಳೆದು ಹೋಗುತ್ತವೆ, ಬದುಕನ್ನು ಬಿರುಗಾಳಿಗೆ ಒಡ್ಡಬಲ್ಲ ಅರ್ಥವೂ ಧರ್ಮದ ಚೌಕಟ್ಟಿನಲ್ಲಿ ಬಂಧಿತವಾಗಿ ಆತ್ಮಕಲ್ಯಾಣಕ್ಕೂ ಲೋಕ […]
ಜಗದ ಏಕೈಕ ಆತ್ಮಲಿಂಗದ ದಿವ್ಯ ಸನ್ನಿಧಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಸ್ವೀಕರಿಸಲಾಗುವ ದೇಣಿಗೆ ವಿವರ :- 1. ಅಮೃತಾನ್ನ ಪ್ರಸಾದ ಭೋಜನ. ಶ್ರೀ ಕ್ಷೇತ್ರಕ್ಕೆ ಆಗಮಿಸುವ ಯಾತ್ರಿಕರಿಗೆ ಪ್ರತಿದಿನವೂ ಮಧ್ಯಾಹ್ನ 12.00 ರಿಂದ 02.00 ವರೆಗೆ ಮತ್ತು ಸಾಯಂಕಾಲ 07.30 ರಿಂದ 08.30 ವರೆಗೆ ಅಮೃತಾನ್ನ ಪ್ರಸಾದ ಭೋಜನ ವ್ಯವಸ್ಥೆ ಇರುತ್ತದೆ. ಈ ಪುಣ್ಯ ಕಾರ್ಯದಲ್ಲಿ ಭಕ್ತಾದಿಗಳು ಪಾಲ್ಗೊಳ್ಳಲು ಅವಕಾಶವಿದೆ. ಅನ್ನದಾನಕ್ಕೆ ದೇಣಿಗೆ ನೀಡಲು ಇಚ್ಛಿಸುವ ದಾನಿಗಳು ಶ್ರೀ ದೇವಾಲಯದ ಖಾತೆಗೆ ನೇರವಾಗಿ […]
‘ಮಹಾ ಶಿವರಾತ್ರಿ’ ಯು ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದು. ಈ ಹಬ್ಬವನ್ನು ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಸಾಮಾನ್ಯವಾಗಿ ಫೆಬ್ರುವರಿ ಅಥವಾ ಮಾರ್ಚ್ ತಿಂಗಳಿನಲ್ಲಿ ಶಿವರಾತ್ರಿ ಹಬ್ಬ ಬರುತ್ತದೆ.ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ,೪ ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಈ ವರ್ಷ, 2009 ರ ಫೆಬ್ರವರಿ ೧೭ ರಿಂದ ೨೬ ನೆ ತಾರೀಕಿನ ತನಕ ಶಿವರಾತ್ರಿ ಆಚರಿಸಲಾಗುವುದು.
ಗೋಕರ್ಣ ಮತ್ತು ಪರಿಸರದ ಪ್ರವಾಸಿ ತಾಣಗಳ ಬಗೆಗಿನ ವಿವರಗಳು : ಪ್ರಸಿದ್ಧ ಉಪ್ಪು ತಯಾರಿಕಾ ಕೇಂದ್ರವಾದ ಸಾಣಿಕಟ್ಟೆ. ಮೀನುಗಾರಿಕಾಬಂದರುಪ್ರದೇಶ ತದಡಿ. ಕ್ರಿ. ಶ.೭ರಲ್ಲಿದ್ದ ಶ್ರೀಹರ್ಷನ ನಾಗಾನಂದ ನಾಟಕಕ್ಕೆ ಆಧಾರವೆಂದು ಪರಿಗಣಿತವಾದ ನಾಗರ ಬಯಲು, ಶ್ರೀಗೌರಿದೇವಾಲಯ, ಚಕ್ರಬಂಡೇಶ್ವರ ದೇವಾಲಯ, ಕಪಿಲಾತೀರ್ಥ, ದ್ವೇಷತೀರ್ಥ, ಅಸೂಯಾತೀರ್ಥ, ಕೇಸರೀತೀರ್ಥ, ಜಟಾಯುತೀರ್ಥ ಮೊದಲಾದ ಹಲವಾರು ತೀರ್ಥಗಳ ಸಮುಚ್ಚಯ. ಗೋಕರ್ಣ ಸಮೀಪದ ಓಂ ಬೀಚ್. ದೇವನಾಗರಿಲಿಪಿಯ ಓಂಕಾರದ ರೂಪವನ್ನು ಹೊಂದಿರುವ ಈ ಕಡಲತೀರದ ಹಿಂದಿನ ಹೆಸರು ದೋಣಿಬಯಲು. ಜಾಗತಿಕ ಪ್ರವಾಸಿ ಭೂಪಟದಲ್ಲಿ ಗುರುತಿಸಲ್ಪಟ್ಟ ಈ ಸಾಗರತೀರವು […]
ಶ್ರೀಸಂಸ್ಥಾನ ಮಹಾಬಲೇಶ್ವರದೇವ, ಗೋಕರ್ಣ ವತಿಯಿಂದ ಕೈಗೊಳ್ಳಲಿರುವ ವಿವಿಧ ಯೋಜನೆಗಳು : ಶಾಶ್ವವಾದ ಶಿಲಾಮಯ ರೀತಿಯಲ್ಲಿ ದೇವಾಲಯ ನವೀಕರಣ. ಯಾತ್ರಿಕಭಕ್ತರ ಅನುಕೂಲಕ್ಕಾಗಿ ಅಮೃತಾನ್ನ ಪ್ರಸಾದ ಭೋಜನ ಹಾಗೂ ವಸತಿಗಾಗಿ ಭೋಜನಶಾಲೆ ಮತ್ತು ವಸತಿಸಮುಚ್ಚಯ ನಿರ್ಮಾಣ. ಪ್ರಾಚೀನಭಾರತೀಯ ವಿದ್ಯೆ - ಕಲೆಗಳ ಅಧ್ಯಯನ - ಅಧ್ಯಾಪನಕ್ಕಾಗಿ ಗುರುಕುಲ ಮಾದರಿಯ ವಿಶ್ವವಿದ್ಯಾನಿಲಯ ಸ್ಥಾಪನೆ. ಗೋಕರ್ಣದಲ್ಲಿ ಉತ್ತಮ ದರ್ಜೆಯ ಸುಸಜ್ಜಿತ ವೈದ್ಯಕೀಯ ಚಿಕಿತ್ಸಾ ಕೇಂದ್ರ. ಒಂದು ಸಹಸ್ರ ಗೋವುಳನ್ನೊಳಗೊಂಡ ಗೋಶಾಲೆ ಮತ್ತು ಗವ್ಯೋತ್ಪನ್ನ ಖರೀದಿ ಕೇಂದ್ರ ಸ್ಥಾಪನೆ. ಕನಿಷ್ಠ ಹನ್ನೆರಡು ವರ್ಷಗಳಿಗೊಮ್ಮೆಯಾದರೂ ನಡೆಯಲೇಬೇಕಾದ […]
ಸನಾತನ ವೈದಿಕಧರ್ಮಪ್ರತಿಷ್ಠಾಪನಾಚಾರ್ಯ ಎಂದೇ ಪ್ರಸಿದ್ಧರಾದ ಪರಶಿವನ ಅವತಾರವೆಂದೇ ಖ್ಯಾತರಾದ ಶ್ರೀಮದಾಚಾರ್ಯಶಂಕರಭಗವತ್ಪಾದರು ತಮ್ಮ ಶಿಷ್ಯ - ಪ್ರಶಿಷ್ಯರೊಂದಿಗೆ ಗೋಕರ್ಣಕ್ಕೆ ಆಗಮಿಸಿ, ಸಾರ್ವಭೌಮ ಮಹಾಬಲನನ್ನು ವಿಧಿವತ್ತಾಗಿ ಅರ್ಚಿಸಿದರು. ಅಲ್ಲದೇ ಆಸ್ತಿಕಮತೋಜ್ಜೀವನ ಕಾರ್ಯದಲ್ಲಿ ಕಟಿಬದ್ಧರಾಗಿದ್ದ ಶ್ರೀಮದಾಚಾರ್ಯರು ಗೋಕರ್ಣದ ಅಶೋಕೆಯಲ್ಲಿ ಧರ್ಮಾಚಾರ್ಯ ಪೀಠವೊಂದನ್ನು ಸಂಸ್ಥಾಪಿಸಿದರು…
’ಗೋಕರ್ಣ’ ಭಾರತೀಯರೆಲ್ಲರಿಗೆ ಅತ್ಯಂತ ಪವಿತ್ರವಾದ ತ್ರಿಸ್ಥಳಗಳಲ್ಲಿ ಒಂದು. ಅಂತೆಯೇ ಭರತಖಂಡದ ಹತ್ತು ಭಾಸ್ಕರ ಕ್ಷೇತ್ರಗಳಲ್ಲಿಯೂ ಒಂದು. ಜಗದಾಧಾರನಾದ ಪರಶಿವನು ಇಲ್ಲಿ ಆತ್ಮಲಿಂಗರೂಪಿಯಾಗಿ ನೆಲೆಸಿದ್ದಾನೆ. ಭೋರ್ಗರೆವ ಪಶ್ಚಿಮ ಸಮುದ್ರದ ತಡಿಯಲ್ಲಿ ಸಾಗರಾಭಿಮುಖನಾಗಿ ಸ್ಥಾಪಿತನಾದ ಈ ಕೃಪಾಸಾಗರ ಸಾರ್ವಭೌಮ ಮಹಾಬಲನೆಂದೇ ಖ್ಯಾತ.