Donate

Help us to help others, please Donate

Related Links

e-Procurement Process 2015

Tender Application Form

Related Links

“ಶತಚಂಡಿ ಹವನ” ಸಂಪನ್ನ

“ಶತಚಂಡಿ ಹವನ” ಸಂಪನ್ನ

ಶುಕ್ರವಾರ, ದಶಂಬರ 23rd, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ 23-12-2016 ಶುಕ್ರವಾರ ಶತಚಂಡಿ ಹವನ ಸಂಪನ್ನಗೊಂಡಿತು .ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ, ವೇ ಶಿತಿಕಂಠ ಹಿರೇ ಭಟ್ ಹಾಗೂ ವೇ ಗಣೇಶ ಭಟ್ ಹಿರೇಗಂಗೆ ಇವರ ನೇತೃತ್ವದಲ್ಲಿ ಶತಚಂಡಿ ಹವನ ಜರುಗಿತು .

ಗೋಕರ್ಣ : ಶತಚಂಡಿ ಹವನ (22-12-2016 & 23-12-2016)

ಸೋಮವಾರ, ದಶಂಬರ 19th, 2016

ಗೋಕರ್ಣ : ಶತಚಂಡಿ ಹವನ:- ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ 22-12-2016 , 23-12-2016 ರಂದು ‘ಶತಚಂಡಿ ಹವನ’ ಜರುಗಲಿದೆ . ಶ್ರೀ ದೇವಾಲಯದ ದುರ್ಗಾಪರಮೇಶ್ವರಿ ದೇವಿ ಸನ್ನಿಧಿಯಲ್ಲಿ ಪ್ರತಿ ಶುಕ್ರವಾರ ಸಪ್ತಶತಿ ಪಾರಾಯಣ ಸೇವೆ ಜರುಗುತ್ತಿದ್ದು , ಈ ಸೇವೆ ಒಂದು ವರ್ಷ ಪೂರೈಸಿದ್ದರ ಬಗ್ಗೆ ‘ಶತಚಂಡಿ ಹವನ’ ಹಮ್ಮಿಕೊಳ್ಳಲಾಗಿದೆ . ಉಪಾಧಿವಂತ ಮಂಡಳಿಯ […]

ಶ್ರೀ ದೇವಾಲಯದಲ್ಲಿ ಗೋ-ಪೂಜೆ

ಶ್ರೀ ದೇವಾಲಯದಲ್ಲಿ ಗೋ-ಪೂಜೆ

ಬುಧವಾರ, ದಶಂಬರ 14th, 2016

14-12-2016 — ಬುಧವಾರ — ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ , ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಲೋಕಕಲ್ಯಾಣಾರ್ಥ “ಗೋಪೂಜೆ ” ನೆರವೇರಿತು . ವೇ ಶಿತಿಕಂಠ ಹಿರೇಭಟ್ ಮತ್ತು ಉಪಾಧಿವಂತ ಮಂಡಳಿಯ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು .

‘ದತ್ತ ಜಯಂತಿ’ – ವಿಶೇಷ ಪೂಜೆ

‘ದತ್ತ ಜಯಂತಿ’ - ವಿಶೇಷ ಪೂಜೆ

ಬುಧವಾರ, ದಶಂಬರ 14th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದತ್ತಾತ್ರೇಯ ಗುಡಿಯಲ್ಲಿ ‘ದತ್ತ ಜಯಂತಿ’ ಪ್ರಯುಕ್ತ (13-12-2016) ವಿಶೇಷ ಪೂಜೆ ಸಲ್ಲಿಸಲಾಯಿತು. ‘ದತ್ತಾತ್ರೇಯ ಪೂಜೆ’ ಸಮಯದಲ್ಲಿ ಹುಣ್ಣಿಮೆ ಉತ್ಸವ ಪ್ರಯುಕ್ತ ಶ್ರೀ ಆಂಜನೇಯ ದೇವರ ಉತ್ಸವವು ಆಗಮಿಸಿತ್ತು . ಪೂಜೆಯ ನಂತರ ಪ್ರಸಾದ ವಿತರಣೆ ಜರುಗಿತು .

ಅಮೃತಾನ್ನ ಪ್ರಸಾದ ಭೋಜನ ವಿತರಣೆ

ಅಮೃತಾನ್ನ ಪ್ರಸಾದ ಭೋಜನ ವಿತರಣೆ

ಶನಿವಾರ, ದಶಂಬರ 10th, 2016

ಶ್ರೀ ಕ್ಷೇತ್ರ ಗೋಕರ್ಣದ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಅನುಗ್ರಹ ರೂಪದಲ್ಲಿ, ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ವಿತರಿಸಲಾಗುತ್ತಿರುವ ‘ಅಮೃತಾನ್ನ ಪ್ರಸಾದ ಭೋಜನ’ ಸ್ವೀಕರಿಸಿದ ಚಿಣ್ಣರು , ಭಕ್ತಾದಿಗಳು ಹಾಗೂ ಪ್ರವಾಸಿಗರು .

ರಂಗ ಪೂಜೆ (ಎಡೆ ಅಮಾವಾಸ್ಯೆ ಉತ್ಸವ) ಸಂಪನ್ನ.

ರಂಗ ಪೂಜೆ (ಎಡೆ ಅಮಾವಾಸ್ಯೆ ಉತ್ಸವ) ಸಂಪನ್ನ.

ಬುಧವಾರ, ನವೆಂಬರ 30th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ಎಡೆ ಅಮಾವಾಸ್ಯೆ ಉತ್ಸವ (ರಂಗ ಪೂಜೆ) ದಿನಾಂಕ 29-11-2016 ಮಂಗಳವಾರ ರಾತ್ರಿ ಸಂಪನ್ನಗೊಂಡಿತು. 108 ಎಡೆ(ಬಾಳೆಎಲೆ)ಗಳಲ್ಲಿ ದೋಸೆ , ಇಡ್ಲಿ, ಸುಕ್ಕಿನುಂಡೆ, ವಡೆ, ಪಾಯಸ, ತೊವೆ, ಕಬ್ಬು, ಎಲೆ, ಹಣ್ಣಡಿಕೆ ಇವುಗಳನ್ನು ದೇವರಿಗೆ ನೈವೇದ್ಯ ಮಾಡಲಾಯಿತು . ನಂತರ ಮಹಾಪೂಜೆ , ಭೂತಬಲಿ , ರಥಬೀದಿಯಲ್ಲಿ ರಥೋತ್ಸವ ನೆರವೇರಿದವು . ಪ್ರಧಾನ ಅರ್ಚಕ ವೇ. ಶಿತಿಕಂಠ ಹಿರೇ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು .

ತ್ರಿಪುರಾಖ್ಯ ದೀಪೋತ್ಸವ ಸಂಪನ್ನ

ತ್ರಿಪುರಾಖ್ಯ ದೀಪೋತ್ಸವ ಸಂಪನ್ನ

ಮಂಗಳವಾರ, ನವೆಂಬರ 15th, 2016

ಜಗದ್ಗುರು ಶಂಕರಾಚಾರ್ಯ ಗೋಕರ್ಣಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ತ್ರಿಪುರಾಖ್ಯ ದೀಪೋತ್ಸವ 14-11-2016 ಸೋಮವಾರ ವಿಜೃಂಭಣೆಯಿಂದ ಜರುಗಿತು. ಲಕ್ಷಬಿಲ್ವಾರ್ಚನೆ , ಭೂತಬಲಿ, ವನಭೋಜನ, ದೇವಾಲಯದಲ್ಲಿ ಲಕ್ಷದೀಪೋತ್ಸವ , ಕೋಟಿತೀರ್ಥದಲ್ಲಿ ತೆಪ್ಪೋತ್ಸವ , ರಥೋತ್ಸವ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ವೇ ಸಾಂಬ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು .

ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಐ.ಎಸ್.ಓ ಪ್ರಮಾಣಪತ್ರ

ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯಕ್ಕೆ ಐ.ಎಸ್.ಓ ಪ್ರಮಾಣಪತ್ರ

ಶನಿವಾರ, ನವೆಂಬರ 12th, 2016

ಶ್ರೀರಾಮಚಂದ್ರಾಪುರಮಠವು ಶಿಸ್ತಿಗೆ ಹೆಸರಾಗಿದ್ದು, ಶ್ರೀಮಠದ ಆಡಳಿತಕ್ಕೊಳಪಟ್ಟಿರುವ ಗೋಕರ್ಣದ ಸಾರ್ವಭೌಮ ಶ್ರೀಮಹಾಬಲೇಶ್ವರ ದೇವಾಲಯದಲ್ಲಿನ ಸುವ್ಯವಸ್ಥಿತ ಆಡಳಿತ ಹಾಗೂ ಸಮರ್ಥ ನಿರ್ವಹಣೆಯನ್ನು ಪ್ರಮಾಣೀಕರಿಸುವ ಐ.ಎಸ್.ಓ ಪ್ರಮಾಣಪತ್ರ ಸೋಮವಾರ ದೊರಕಿದೆ. ಪ್ರಾಚೀನ ಕಾಲದಿಂದಲೂ ಶ್ರೀರಾಮಚಂದ್ರಾಪುರಮಠದ ಆಡಳಿತದಲ್ಲಿದ್ದ ಶ್ರೀಮಹಾಬಲೇಶ್ವರ ದೇವಾಲಯವನ್ನು 2008ರಲ್ಲಿ ಘನಸರ್ಕಾರವು ಶ್ರೀಮಠಕ್ಕೆ ಮರುಹಸ್ತಾಂತರಿಸುವ ಮೂಲಕ ದೇವಾಲಯದಲ್ಲಿ ಅಭಿವೃದ್ಧಿಯ ಮಹಾಪರ್ವಕ್ಕೆ ಹಾಗೂ ಗೋಕರ್ಣದ ಸರ್ವತೋಮುಖ ಅಭಿವೃದ್ಧಿಗೆ ನಾಂದಿಹಾಡಿತು. ಅಂದಿನಿಂದಲೇ ದಕ್ಷ ಆಡಳಿತ, ಪರಿಪೂರ್ಣ ನಿರ್ವಹಣೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಿ, ಧಾರ್ಮಿಕ - ಸಾಮಾಜಿಕ ಕಾರ್ಯದಲ್ಲಿ ಧನಾತ್ಮಕ ಬದಲಾವಣೆಯನ್ನು ತರುವುದರ ಮುಖಾಂತರ […]

ಸ್ವಾತಿ ಉತ್ಸವ ಸಂಪನ್ನ

ಸ್ವಾತಿ ಉತ್ಸವ ಸಂಪನ್ನ

ಗುರುವಾರ, ನವೆಂಬರ 3rd, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ಸ್ವಾತಿ ಉತ್ಸವವು ದಿನಾಂಕ 02-11-2016 ಬುಧವಾರ - ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಜರುಗಿತು . ಶ್ರೀ ದೇವರ ಉತ್ಸವವು ಬೆಳಿಗ್ಗೆ ರಥಬೀದಿಯ ಮೂಲಕ ಹೊರಟು ಕೋಟಿತೀರ್ಥವನ್ನು ಸುತ್ತುವರಿದು ಸ್ವಾತಿ ನಕ್ಷತ್ರದಲ್ಲಿ ಹೊಸದಾಗಿ ತಯಾರಿಸಿದ ಮಜ್ಜಿಗೆಯನ್ನು ಭಕ್ತಾದಿಗಳಿಗೆ ಪ್ರಸಾದ ರೂಪದಲ್ಲಿ ಹಂಚುತ್ತಾ ಪುನಃ ಶ್ರೀ ದೇವಾಲಯವನ್ನು ತಲುಪಿತು .

MAHA POOJA

ಶ್ರೀ ದೇವರ ಪ್ರತಿಷ್ಠಾ ಮಹೋತ್ಸವ ಸಂಪನ್ನ.

ಮಂಗಳವಾರ, ನವೆಂಬರ 1st, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವರ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ ವಿಶೇಷ ಪೂಜೆ ಸಂಪನ್ನವಾಯಿತು . ಶ್ರೀ ದೇವರ ಉತ್ಸವವು ಬೆಳ್ಳಿ ಪಲ್ಲಕ್ಕಿಯಲ್ಲಿ ಶ್ರೀ ವೆಂಕಟರಮಣ ದೇವಾಲಯದವರೆಗೆ ಸಾಗಿ ಬಂದಿತು . ಊರ ಭಕ್ತ ಜನರು ಶ್ರೀ ದೇವರಿಗೆ ತೆಂಗಿನ ಕಾಯಿಗಳನ್ನು ಸಮರ್ಪಿಸಿದರು. ಕಾರ್ತಿಕ ಮಾಸದಲ್ಲಿ ಪ್ರತಿದಿನ ‘ತಳಿ ದೀಪ’ ಸೇವೆ , ತುಳಸಿ ಪೂಜೆ - ನೈವೇದ್ಯ ಜರುಗಲಿದೆ .

Highslide for Wordpress Plugin