Donate

Help us to help others, please Donate

Related Links

e-Procurement Process 2015

Tender Application Form

Related Links

ಶಿವ-ಗಂಗಾ ವಿವಾಹೋತ್ಸವ ಸಂಪನ್ನ

ಶಿವ-ಗಂಗಾ ವಿವಾಹೋತ್ಸವ ಸಂಪನ್ನ

ರವಿವಾರ, ಅಕ್ತೂಬರ 30th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ಶಿವಗಂಗಾ ವಿವಾಹೋತ್ಸವವು ಆಶ್ವೀಜ ಬಹುಳ ಚತುರ್ದಶಿ ದಿನ ೨೯-೧೦-೨೦೧೬ ಶನಿವಾರ ವೈಭವದಿಂದ ಜರುಗಿತು . ಗೋಕರ್ಣದ ವಿಶಾಲವಾದ ಮಹಾಬಲೇಶ್ವರ ಕಡಲ ತೀರದಲ್ಲಿ ಸೂರ್ಯ ಪಶ್ಚಿಮಾ೦ಬುಧಿಗೆ ತೆರಳುತ್ತಿರುವ ಗೋಧೂಳಿ ಮುಹೂರ್ತದಲ್ಲಿ ಸಹಸ್ರಾರು ಭಕ್ತ ಜನರ ಸಮ್ಮುಖದಲ್ಲಿ ನಿಶ್ಚಯಿತ ವಧುವಾಗಿ ಬಂದ ಗಂಗಾಮಾತೆ ಜಗದೀಶ್ವರನನ್ನು ವಿವಾಹವಾದಳು. ಕಡಲಿನ ಅಬ್ಬರ, ವಾದ್ಯಘೋಷ , ವೇದಘೋಷ, ವಿಶಿಷ್ಟ ತೋರಣ, ಹಾಲಕ್ಕಿ ಸಮಾಜದ ಗುಮಟೆಪಾಂಗ್ -ಜಾನಪದ ಹಾಡುಗಳು ಉತ್ಸವಕ್ಕೆ ಮೆರುಗನ್ನು ನೀಡಿದವು. ವಿವಾಹದ […]

29-10-2016 ಶನಿವಾರ – ಶಿವ-ಗಂಗಾ ವಿವಾಹೋತ್ಸವ

29-10-2016 ಶನಿವಾರ - ಶಿವ-ಗಂಗಾ ವಿವಾಹೋತ್ಸವ

ರವಿವಾರ, ಅಕ್ತೂಬರ 23rd, 2016

ಶಿವ-ಗಂಗಾ ವಿವಾಹ ನಿಶ್ಚಿತಾರ್ಥ : ಪೌರಾಣಿಕ ಕಥೆಯ ಹಿನ್ನೆಲೆಯಲ್ಲಿ ಕದಿರು ಹರಣೋತ್ಸವದ ಸಂದರ್ಭ ಶಿವನು ಗಂಗೆಯ ಸುಂದರ ರೂಪಕ್ಕೆ ಮಾರು ಹೋಗಿರುತ್ತಾನೆ. ಆದರೆ ಶಿವನಿಗೆ ಪಾರ್ವತಿಯೊಂದಿಗೆ ವಿವಾಹವಾಗಿರುವುದರಿಂದ ಪಾರ್ವತಿಗೆ ತಿಳಿಯದಂತೆ ಮಾರುವೇಷದಲ್ಲಿ ಗಂಗೆಯನ್ನು ವರಿಸಲು, ವಿವಾಹ ನಿಶ್ಚಿತಾರ್ಥ ನೆರವೇರಿಸಲು ಗಂಗೆಯ ಹತ್ತಿರ ಬರುತ್ತಾನೆ. ಹಾಗಾಗಿ ಉತ್ಸವ ಕೂಡಾ ರಾತ್ರಿ ಮಹಾಬಲೇಶ್ವರ ದೇವಾಲಯದಲ್ಲಿ ನಿತ್ಯವಿಧಿಯಂತೆ, ಮಹಾಪೂಜೆ ಬಲಿ, ಮುಂತಾದ ವಿಧಿ-ವಿಧಾನಗಳನ್ನು ಪೂರೈಸಿ, ರಾತ್ರಿ 12 ಗಂಟೆ ಸುಮಾರಿಗೆ ಗೋಕರ್ಣದಿಂದ ಉತ್ಸವವು ತೆರಳುತ್ತದೆ. ಗಂಗಾವಳಿ ನದಿ ಸಮುದ್ರವನ್ನು ಸೇರುವ ಗಂಗೆಕೊಳ್ಳದ […]

ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಭೇಟಿ

ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರ ಭೇಟಿ

ಶನಿವಾರ, ಅಕ್ತೂಬರ 22nd, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷೆ ಶ್ರೀಮತಿ ಮೀರಾ ಸಕ್ಸೆನಾ ಇವರು ಭೇಟಿ ನೀಡಿ ಗಂಗಾಭಿಷೇಕ , ಬಿಲ್ವಾರ್ಚನೆ ವಿಶೇಷ ಪೂಜೆ ಸಲ್ಲಿಸಿದರು . ಶ್ರೀ ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಸ್ವಾಗತಿಸಿ, ಸ್ಮರಣಿಕೆ ನೀಡಿದರು ಹಾಗೂ ಶ್ರೀ ದೇವಾಲಯದ ವತಿಯಿಂದ ಭಕ್ತಾದಿಗಳಿಗೆ ಕಲ್ಪಿಸಲಾದ ವ್ಯವಸ್ಥೆಗಳ ಕುರಿತು ವಿವರಿಸಿದರು . ಆಯೋಗದ ಅಧ್ಯಕ್ಷರು ಈ ಕುರಿತು ಸಂತಸ ವ್ಯಕ್ತಪಡಿಸಿದರು .

ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ (23-10-2016)

ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ (23-10-2016)

ಗುರುವಾರ, ಅಕ್ತೂಬರ 20th, 2016

ದಿನಾಂಕ 23-10-2016 : ಗಂಗಾಷ್ಟಮಿಯ ಪರ್ವಕಾಲದಲ್ಲಿ ಬೆಳಿಗ್ಗೆ 6 ಗಂಟೆಗೆ ಸರಿಯಾಗಿ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವು ಶ್ರೀ ಕ್ಷೇತ್ರ ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಶ್ರೀ ಗಂಗಾಮಾತಾ ದೇವಾಲಯದಲ್ಲಿ ಜರುಗುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಹಿಂದಿನ ದಿನ ರಾತ್ರೆ ಸುಮಾರು 12 ಗಂಟೆಗೆ ಶ್ರೀ ಮಹಾಬಲೇಶ್ವರ ದೇವಾಲಯದಿಂದ ಶ್ರೀ ದೇವರ ಉತ್ಸವವು ಸಕಲ ಬಿರುದು ಬಾವಲಿಗಳೊಡನೆ ವಾದ್ಯಘೋಶದೊಂದಿಗೆ ಗಂಗಾವಳಿಗೆ ಹೋಗಿ ಬೆಳಿಗ್ಗೆ ನೇಸರ ಮೂಡುವ ಪೂರ್ವಕಾಲದಲ್ಲಿಯೇ ಗಂಗಾವಳಿ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತಾ ದೇವಾಲಯಕ್ಕೆ ಉತ್ಸವವು ಹೋಗುತ್ತದೆ.ಆ ಸಮಯದಲ್ಲಿ […]

‘ಕದಿರು ಹರಣೋತ್ಸವ ಸಂಪನ್ನ.

‘ಕದಿರು ಹರಣೋತ್ಸವ ಸಂಪನ್ನ.

ಮಂಗಳವಾರ, ಅಕ್ತೂಬರ 4th, 2016

ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ‘ಕದಿರು ಹರಣೋತ್ಸವ’ ಶಾಸ್ತ್ರೀಯ , ರೂಢಿಗತ ಪರಂಪರೆಯಂತೆ,ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ, 03-10-2016 ಸೋಮವಾರ ಸು-ಸಂಪನ್ನಗೊಂಡಿತು . ಬಾವಿಕೊಡ್ಲದ ದೇವರ ಗದ್ದೆಯಲ್ಲಿ ಮುಂಜಾನೆ 06.00 ಘಂಟೆಗೆ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರಿಗೆ ಮೊದಲ ಕದಿರನ್ನು ಸಮರ್ಪಿಸಲಾಯಿತು . ನೂತನ ಕದಿರಿಗೆ ಪೂಜೆ ಸಲ್ಲಿಸಿದ ನಂತರ ಹೊಸ ಅಕ್ಕಿ ಪ್ರಸಾದ ವಿತರಣೆ ನಡೆಯಿತು. ನಂತರ ಶ್ರೀ ದೇವರ ಉತ್ಸವವು ದಾರಿಯುದ್ದಕ್ಕೂ […]

ಕದಿರು ಹರಣೋತ್ಸವ (03-10-2016)

ಕದಿರು ಹರಣೋತ್ಸವ (03-10-2016)

ಶುಕ್ರವಾರ, ಸೆಪ್ಟೆಂಬರ 23rd, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದುರ್ಮುಖ ಸಂವತ್ಸರದ ಕದಿರು ಹರಣೋತ್ಸವವು ದಿ 03-10-2016 ಸೋಮವಾರ ಜರುಗಲಿದೆ . ತತ್ಸಂಬಂಧವಾಗಿ ರವಿವಾರ ರಾತ್ರಿ ಸಾರ್ವಭೌಮ ಶ್ರೀ ಮಹಾಬಲೇಶ್ವರ ದೇವರ ಉತ್ಸವವು ಸಕಲ ಬಿರುದು ಬಾವಲಿಗಳೊಂದಿಗೆ ಹೊರಟು ಬಂಕಿಕೊಡ್ಲ ತಲುಪುವುದು . ಮರುದಿನ ಸೋಮವಾರ - ನಸುಕಿನಲ್ಲಿ ಭತ್ತದ ಗದ್ದೆಗೆ ಹೋಗಿ ಭತ್ತದ ಬೆಳೆಯನ್ನು ಕೊಯ್ದು ಪೂಜೆ ಸ್ವೀಕರಿಸುವುದು . […]

ಶ್ರೀ ದೇವಾಲಯಕ್ಕೆ ಪರಿಶಿಷ್ಟ ಜನಾಂಗದ ಕೇಂದ್ರ ಆಯೋಗದ ಅಧ್ಯಕ್ಷರ ಭೇಟಿ.

ಶ್ರೀ ದೇವಾಲಯಕ್ಕೆ ಪರಿಶಿಷ್ಟ ಜನಾಂಗದ ಕೇಂದ್ರ ಆಯೋಗದ ಅಧ್ಯಕ್ಷರ ಭೇಟಿ.

ಶನಿವಾರ, ಸೆಪ್ಟೆಂಬರ 17th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಪರಿಶಿಷ್ಟ ಜನಾಂಗದ ಕೇಂದ್ರ ಆಯೋಗದ ಅಧ್ಯಕ್ಷ ಡಾ ರಾಮೇಶ್ವರ ಓರಾನ್ ಇವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು . ವೇ ಶಿತಿಕಂಠ ಹಿರೇ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಶ್ರೀಯುತರು ದೇವಾಲಯದ ಸ್ವಚ್ಛತೆ ಹಾಗೂ ವ್ಯವಸ್ಥೆಯನ್ನು ಶ್ಲಾಘಿಸಿದರು . ದೇವಾಲಯದ ಗರ್ಭಗುಡಿಗೆ ಎಲ್ಲ ಜಾತಿ , ಸಮುದಾಯಗಳ ಜನರು ಪ್ರವೇಶಿಸಿ […]

EKADASHA RUDRA

ವಿಶೇಷ ‘ಅಭಿನಂದನಾ ಪೂಜೆ’ ಸಂಪನ್ನ

ಶುಕ್ರವಾರ, ಸೆಪ್ಟೆಂಬರ 16th, 2016

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ೨೩ ನೆಯ ಗೋ-ಚಾತುರ್ಮಾಸ್ಯವು ಇಂದು ಸಂಪನ್ನಗೊಂಡ ಪ್ರಯುಕ್ತ ಶ್ರೀ ಕ್ಷೇತ್ರ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ವಿಶೇಷ ಅಭಿನಂದನಾ ಪೂಜೆ ಸಂಪನ್ನಗೊಂಡಿತು. ವೇ ಶಿತಿಕಂಠ ಹಿರೇ ಭಟ್ ಇವರ ನೇತೃತ್ವದಲ್ಲಿ ಉಪಾಧಿವಂತ ಪುರೋಹಿತರು ಏಕಾದಶ ರುದ್ರ, ಗಂಗಾಭಿಷೇಕ, ನವಧಾನ್ಯ ಅಭಿಷೇಕ , ಸುವರ್ಣ ನಾಗಾಭರಣ ಪೂಜೆ ನೆರವೇರಿಸಿದರು .

ಶ್ರೀ ಶ್ರೀ ರವಿಶಂಕರ ಗುರೂಜಿಯವರ ಗೋಕರ್ಣ  ಭೇಟಿ

ಶ್ರೀ ಶ್ರೀ ರವಿಶಂಕರ ಗುರೂಜಿಯವರ ಗೋಕರ್ಣ ಭೇಟಿ

ಮಂಗಳವಾರ, ಆಗಸ್ತು 30th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರಾವಣ ಸೋಮವಾರ ದಿನ (29-08-2016) ಶ್ರೀ ಶ್ರೀ ರವಿಶಂಕರ್ ಗುರೂಜಿ ಪ್ರದೋಷ ಕಾಲದಲ್ಲಿ ಭೇಟಿ ನೀಡಿ, ಪೂಜೆ ಸಲ್ಲಿಸಿದರು . ವೇ ಶಿತಿಕಂಠ ಹಿರೇ ಭಟ್ ಇವರ ನೇತೃತ್ವದಲ್ಲಿ ಉಪಾಧಿವಂತ ಮಂಡಳಿಯ ಸದಸ್ಯರು ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿದರು . ಪೂಜಾ ವ್ಯವಸ್ಥೆಯ ಕುರಿತು ಗುರೂಜಿ ಸಂತಸ ವ್ಯಕ್ತಪಡಿಸಿದರು .

Krishnashtami

ಶ್ರೀ ಕೃಷ್ಣ ಜನ್ಮಾಷ್ಟಮಿ, ‘ದಧಿ ಶಿಕ್ಯೋತ್ಸವ’ ಸಂಪನ್ನ .

ಗುರುವಾರ, ಆಗಸ್ತು 25th, 2016

ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ (24-08-2016) ಬುಧವಾರ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದೀವಟಿಗೆ, ವಾದ್ಯ ಸಹಿತ ಸಲಾಮು ಕೋಟಿತೀರ್ಥ ಕಟ್ಟೆಯಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಾಲಯ ಹಾಗೂ ಶ್ರೀ ವೆಂಕಟರಮಣ ದೇವಾಲಯಗಳಿಗೆ ತೆರಳಿ ರಥಬೀದಿಯ ಮೂಲಕ ಶ್ರೀದೇವಾಲಯಕ್ಕೆ ಮರಳಿತು . ನಂತರದಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿರುವ ನಂದಿ ಮಂಟಪದಲ್ಲಿರುವ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ, ನೈವೇದ್ಯ, ಮಂಗಳಾರತಿ ನೆರವೇರಿತು . ವೇ ಸಾಂಬ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು . 25-08-2016 ಗುರುವಾರ […]

Highslide for Wordpress Plugin