Donate

Help us to help others, please Donate

Related Links

e-Procurement Process 2015

Tender Application Form

Related Links

‘ಶ್ರೀಕೃಷ್ಣ ಜನ್ಮಾಷ್ಟಮಿ’

ಬುಧವಾರ, ಆಗಸ್ತು 24th, 2016

ರೂಢಿಗತ ಪರಂಪರೆಯಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಇಂದು 24-08-2016 ಬುಧವಾರ ಸಾಯಂಕಾಲ ನಂದಿ ಮಂಟಪದಲ್ಲಿರುವ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ ನೆರವೇರಲಿದೆ . ನಾಳೆ ದಿನಾಂಕ 25-08-2016 ಗುರುವಾರ ಸಂಜೆ ‘ದಧಿ ಶಿಕ್ಯೋತ್ಸವ’ ಜರುಗಲಿದೆ . ಶ್ರೀದೇವರ ಉತ್ಸವವು ಬಿರುದು ಬಾವಲಿ, ಪಕ್ಕೆ-ಪರಾಕು ಸಮೇತ ವಾದ್ಯಗಳೊಂದಿಗೆ ಕೃಷ್ಣಾಪುರ ದೇವಾಲಯಕ್ಕೆ ತೆರಳುತ್ತದೆ . ಈ ಎಲ್ಲ ಕಾರ್ಯಕ್ರಮಗಳಿಗೆ ಸರ್ವರಿಗೂ ಆತ್ಮೀಯ ಆಮಂತ್ರಣ .

ಶ್ರೀ ದೇವಾಲಯಕ್ಕೆ ಭೇಟಿ

ಶ್ರೀ ದೇವಾಲಯಕ್ಕೆ ಭೇಟಿ

ಶನಿವಾರ, ಆಗಸ್ತು 20th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಕೇಂದ್ರ ರೇಲ್ವೆ ಸಚಿವ ಶ್ರೀ ಸುರೇಶ ಪ್ರಭು , ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ , ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಆರ್ ವಿ ದೇಶಪಾಂಡೆ ಇವರು ಭೇಟಿ ನೀಡಿ ಶ್ರೀ ಆತ್ಮಲಿಂಗಕ್ಕೆ ಅಭಿಷೇಕ, ಪೂಜೆ ನೆರವೇರಿಸಿದರು . ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು . ಉಪಾಧಿವಂತ ಮಂಡಳಿಯ ಅಧ್ಯಕ್ಷ ವೇ ಗಣೇಶ ಭಟ್ […]

ಶ್ರಾವಣ ಸೋಮವಾರ – ವಿಶೇಷ ಪೂಜೆ

ಶ್ರಾವಣ ಸೋಮವಾರ - ವಿಶೇಷ ಪೂಜೆ

ಸೋಮವಾರ, ಆಗಸ್ತು 15th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಶ್ರಾವಣ ಸೋಮವಾರ (15-08-2016) ದಿನವಾದ ಇಂದು ಭಕ್ತ ಸಾಗರವೇ ಹರಿದು ಬಂದಿತ್ತು . ಸಾವಿರಾರು ಜನರು ಮಹಾಬಲೇಶ್ವರ ದೇವರನ್ನು ಅರ್ಚಿಸಿ, ಭಜಿಸಿ ಹಾಗೂ ಅಭಿಷೇಕ ಮಾಡಿ ಪುನೀತರಾದರು. ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಪ್ರತಿವರ್ಷದಂತೆ ಶ್ರಾವಣ ಸೋಮವಾರ ಪ್ರಯುಕ್ತ ವಿಶೇಷ ‘ಅಮೃತಾನ್ನ ‘ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಇಡ್ಲಿ, ವಡೆ , ಸಾಬೂದಾನಿ , ಪಾಯಸ , […]

ಶ್ರಾವಣ ಸೋಮವಾರ – ವಿಶೇಷ ಪೂಜೆ

ಶ್ರಾವಣ ಸೋಮವಾರ - ವಿಶೇಷ ಪೂಜೆ

ಸೋಮವಾರ, ಆಗಸ್ತು 8th, 2016

ಶ್ರಾವಣ ಮಾಸದ ಸೋಮವಾರದ ಪುಣ್ಯ ಪರ್ವ ಕಾಲದಲ್ಲಿ ಆತ್ಮಲಿಂಗರೂಪಿ, ಮಹಾಬಲೇಶ್ವರ ದೇವರಿಗೆ ವಿಶೇಷಗಟ್ಲೆ ಪೂಜೆ .

Gou Pooja

ಕಾರ್ಕಳದ ಶಾಸಕ ಶ್ರೀ ವಿ. ಸುನಿಲ್ ಕುಮಾರ್ ಭೇಟಿ

ಗುರುವಾರ, ಆಗಸ್ತು 4th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಕಾರ್ಕಳದ ಶಾಸಕ, ವಿರೋಧ ಪಕ್ಷದ ಮುಖ್ಯ ಸಚೇತಕರೂ ಆಗಿರುವ ಶ್ರೀ ವಿ. ಸುನಿಲ್ ಕುಮಾರ್ ಇವರು ಈ ದಿನ ಕುಟುಂಬ ಸಮೇತ ಆಗಮಿಸಿ ಶ್ರೀ ದೇವರಿಗೆ ಅಭಿಷೇಕ-ಪೂಜೆ ಸಲ್ಲಿಸಿದರು . ಆನಂತರ ಶ್ರೀ ದೇವಾಲಯದ ಗೋಶಾಲೆಗೆ ಆಗಮಿಸಿ ಗೋಪೂಜೆ ನೆರವೇರಿಸಿದರು . ವೇ ರಾಮಕೃಷ್ಣ ಶಂಕರಲಿಂಗ ಪೂಜಾ ಕೈಂಕರ್ಯ ನೆರವೇರಿಸಿದರು . ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಸ್ವಾಗತಿಸಿದರು . ಶ್ರೀಮಠದ ದೇಶೀ ತಳಿಯ ಗೋ ಸಂರಕ್ಷಣೆಯ […]

1st Yaama Pooja

‘ಯಾಮಪೂಜೆ’ ಸಂಪನ್ನ.

ಸೋಮವಾರ, ಆಗಸ್ತು 1st, 2016

ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ -ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ - ದುರ್ಮುಖ ಸಂವತ್ಸರದ ‘ಯಾಮಪೂಜೆ’ ಕಾರ್ಯಕ್ರಮವು ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ವಿಶೇಷ ಪೂಜೆ, ಕೊನೆಯಲ್ಲಿ ರುದ್ರಹೋಮದೊಂದಿಗೆ ಸಂಪನ್ನಗೊಂಡಿತು .

‘ಯಾಮಪೂಜೆ’  31-07-2016

‘ಯಾಮಪೂಜೆ’ 31-07-2016

ರವಿವಾರ, ಜುಲಾಯಿ 24th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ -ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ - ದುರ್ಮುಖ ಸಂವತ್ಸರದ ‘ಯಾಮಪೂಜೆ’ ಕಾರ್ಯಕ್ರಮವು ದಿ 31-07-2016 ರವಿವಾರ ಮುಂಜಾನೆ ಪ್ರಾರಂಭಗೊಂಡು 01-08-2016 ಸೋಮವಾರ ಮುಂಜಾನೆವರೆಗೆ ರೂಢಿಗತ ಪರಂಪರೆಯಂತೆ ಉಪಾಧಿವಂತ ಮಂಡಳಿಯ ಸಹಯೋಗದೊಂದಿಗೆ ಜರುಗಲಿದೆ . ಎಂಟು ಯಾಮಗಳ ಕಾಲ ನಿರಂತರ ರುದ್ರ ಪಠಣ, ನಿರಂತರ ಅಭಿಷೇಕ , ಪ್ರತೀ ಯಾಮದ ಕೊನೆಯಲ್ಲಿ ಒಂದು ವಿಶೇಷ ಪೂಜೆ, ಕೊನೆಯಲ್ಲಿ ಹೋಮ ಇರುವುದು […]

‘ಗುರುಪೂರ್ಣಿಮೆ’ ಪ್ರಯುಕ್ತ ಗೋಕರ್ಣದಲ್ಲಿ ವಿಶೇಷ ಪೂಜೆ

‘ಗುರುಪೂರ್ಣಿಮೆ’ ಪ್ರಯುಕ್ತ ಗೋಕರ್ಣದಲ್ಲಿ ವಿಶೇಷ ಪೂಜೆ

ಮಂಗಳವಾರ, ಜುಲಾಯಿ 19th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ – ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ - ಗುರುಪೂರ್ಣಿಮೆ ಪ್ರಯುಕ್ತ ದತ್ತಾತ್ರೇಯ ಗುರುದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು . ಶ್ರೀಪಾದ ಶ್ರೀ ವಲ್ಲಭರು ಈ ಸ್ಥಳದಲ್ಲಿ ಬಹಳ ಕಾಲ ತಪಸ್ಸನ್ನು ಆಚರಿಸಿದ್ದರು . ವೇ ಪರಮೇಶ್ವರ ಮಾರ್ಕಾ೦ಡೆ ಪೂಜಾ ಕೈಂಕರ್ಯ ನೆರವೇರಿಸಿದರು . ಪ್ರಧಾನ ಅರ್ಚಕ ವೇ ಶಿತಿಕಂಠ ಹಿರೇ ಭಟ್ , ಆಡಳಿತಾಧಿಕಾರಿ ಶ್ರೀ ಜಿ […]

Religious Programme

ಶ್ರೀ ಚಿಂತಾಮಣಿ ಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವರಿಗೆ ನೂತನ ರಜತ ಕವಚ

ಶುಕ್ರವಾರ, ಜುಲಾಯಿ 8th, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ - ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ - ಶ್ರೀ ಚಿಂತಾಮಣಿ ಗಣಪತಿ ಮತ್ತು ದುರ್ಗಾಪರಮೇಶ್ವರಿ ದೇವರಿಗೆ ನೂತನ ರಜತ ಕವಚ ಸಮರ್ಪಿಸಲಾಯಿತು. ನವಗ್ರಹ ಹೋಮ, ಅಥರ್ವಶೀರ್ಷ ಹವನ , ದುರ್ಗಾಶಾಂತಿ ಕಾರ್ಯಕ್ರಮ ಸಂಪನ್ನಗೊಂಡಿತು . ಉಪಾಧಿವಂತ ಮಂಡಳಿಯ ಸದಸ್ಯರು ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು .

ಆತ್ಮಲಿಂಗದ ಸುತ್ತ ಬೆಳ್ಳಿಯ ನೂತನ ಕವಚ

ಆತ್ಮಲಿಂಗದ ಸುತ್ತ ಬೆಳ್ಳಿಯ ನೂತನ ಕವಚ

ಶುಕ್ರವಾರ, ಜುಲಾಯಿ 1st, 2016

ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ - ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ - ಶ್ರೀ ಆತ್ಮಲಿಂಗದ ಸುತ್ತ ಬೆಳ್ಳಿಯ ನೂತನ ಕವಚವನ್ನು ಶಾಸ್ತ್ರೋಕ್ತವಾಗಿ ತೊಡಿಸಲಾಯಿತು . ಈ ಸಂದರ್ಭದಲ್ಲಿ ವೇ ಗಣೇಶ ಭಟ್ ಹಿರೇಗಂಗೆ, ವೇ ಶಿತಿಕಂಠ ಹಿರೇಭಟ್ , ವೇ ಕೃಷ್ಣ ಭಟ್ ಷಡಕ್ಷರಿ , ವೇ ಗಣೇಶ ಭಟ್ ಜಂಭೆ , ವೇ ವಿನಾಯಕ ರಮಣಿ ಪ್ರಸಾದ , ಆಡಳಿತಾಧಿಕಾರಿ […]

Highslide for Wordpress Plugin