

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಆಶೀರ್ವಾದಗಳೊಂದಿಗೆ ಶ್ರೀ ಕ್ಷೇತ್ರ ಗೋಕರ್ಣ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ನಡೆಯುವ ಉಚಿತ ವಿವಾಹ ಕಾರ್ಯಕ್ರಮದಡಿಯಲ್ಲಿ ದಿನಾಂಕ 28-05-2015 ರಂದು ಕಾರವಾರದ ವಧೂ-ವರರು ಸಪ್ತಪದಿ ತುಳಿದರು . ಶ್ರೀ ಜಿ ಕೆ ಹೆಗಡೆ ಶ್ರೀ ದೇವಾಲಯದ ವತಿಯಿಂದ ಸ್ಮರಣಿಕೆ ನೀಡಿ ಆಶೀರ್ವದಿಸಿದರು . ಆರ್ಥಿಕವಾಗಿ ದುರ್ಬಲರಾಗಿರುವ ಸೂಕ್ತ ವಧೂ-ವರರಿಗೆ ಶ್ರೀ ದೇವಾಲಯದ ವತಿಯಿಂದ ಈ ಸಮಾಜಮುಖಿ ಯೋಜನೆಯಡಿ ಉಚಿತವಾಗಿ ವಿವಾಹ ಮಾಡಿಕೊಡಲಾಗುತ್ತಿದೆ .