

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ
ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ನಂದನ ಸಂವತ್ಸರದ
ಶಿವರಾತ್ರಿ ಮಹೋತ್ಸವವು ಇಂದು ಗಣೇಶ ಪೂಜೆ , ನಂದಿ ಧ್ವಜಾರೋಹಣ ಹಾಗೂ
ಮೃತ್ತಿಕಾ ಹರಣೋತ್ಸವ ಗಳ ಮೂಲಕ ಪ್ರಾರಂಭಗೊಂಡಿತು .
ಮುಖ್ಯ ಅರ್ಚಕರಾದ ವೇ . ಮೂ . ಶಿತಿಕಂಠ ಹಿರೇ ಭಟ್ಟ ಇವರ ನೇತೃತ್ವದಲ್ಲಿ ಜಗತ್ರ್ಪಸಿದ್ಧ ಶಿವರಾತ್ರಿ ಮಹೋತ್ಸವಕ್ಕೆ ಚಾಲನೆ ದೊರೆಯಿತು.
ಉಪಾಧಿವಂತ ಮಂಡಲದ ಅಧ್ಯಕ್ಷ ವೇ ಗಣೇಶ ಭಟ್ಟ ಹಿರೇಗಂಗೆ ಹಾಗೂ ಸದಸ್ಯರು , ಊರ ನಾಗರೀಕರು ಹಾಜರಿದ್ದರು.
ಪರಮಪೂಜ್ಯ ಶ್ರೀ ಶ್ರೀ ಗಳವರಿಂದ ವಾಲ್ಮೀಕಿ ರಾಮಾಯಣದ ಪುನರವತರಣ “ರಾಮಕಥಾ”
ಸಾಯಂಕಾಲ 06- 09 ರ ವರೆಗೆ ಕಡಲ ತೀರದ ಮಹರ್ಷಿ ವೇದಿಕೆಯಲ್ಲಿ ಜರುಗಿತು.