Donate

Help us to help others, please Donate

Related Links

e-Procurement Process 2015

Tender Application Form

Related Links

“ಮಹಾರುದ್ರ ” ಕಾರ್ಯಕ್ರಮ ಪಾರಾಯಣ ಸಂಪನ್ನ

ಬುಧವಾರ, ಏಪ್ರಿಲ್ 6th, 2016 -

ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ
ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಶ್ರೀ ಕ್ಷೇತ್ರ ಗೋಕರ್ಣದ ಉಪಾಧಿವಂತ ಮಂಡಳಿಯ ಸಹಯೋಗದಲ್ಲಿ ದಿನಾಂಕ 06-04-2016 ಬುಧವಾರ ಲೋಕಕಲ್ಯಾಣಾರ್ಥ “ಮಹಾರುದ್ರ ” ಸಂಪನ್ನಗೊಂಡಿತು .
ಈ ಸಂದರ್ಭದಲ್ಲಿ ವಿಶ್ವಶಾಂತಿ ಮತ್ತು ಧರ್ಮರಕ್ಷಣೆಗಾಗಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು . ಮುಂಜಾನೆಯಿಂದ ಮಧ್ಯಾಹ್ನ 02.00 ಘಂಟೆಯ ವರೆಗೆ ರುದ್ರ ಪಾರಾಯಣ , ರುದ್ರ ಹೋಮ , ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಿತು . ಬಂದ ಎಲ್ಲ ಭಕ್ತಾದಿಗಳಿಗೆ ಪ್ರಸಾದ ಭೋಜನ ವಿತರಿಸಲಾಯಿತು .
ಉಪಾಧಿವಂತ ಮಂಡಳಿಯ ಅಧ್ಯಕ್ಷ ವೇ ಗಣೇಶ ಭಟ್ ಹಿರೇಗಂಗೆ , ಪ್ರಧಾನ ಅರ್ಚಕರಾದ ವೇ ಶಿತಿಕಂಠ ಹಿರೇ ಭಟ್ , ಮತ್ತು ಉಪಾಧಿವಂತ ಮಂಡಳಿಯ ಸದಸ್ಯರು , ಜಿ ಪಂ ಸದಸ್ಯ ಶ್ರೀ ಪ್ರದೀಪ ನಾಯಕ , ಶ್ರೀ ರಾಜೇಶ ನಾಯಕ , ಮಾಜಿ ಶಾಸಕ ಶ್ರೀ ದಿನಕರ ಶೆಟ್ಟಿ , ಡಾ ವಿ ಆರ್ ಮಲ್ಲನ್ , ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಹಾಗೂ ಭಕ್ತಾದಿಗಳು, ಊರ ಮಹನೀಯರು ಉಪಸ್ಥಿತರಿದ್ದರು .

Leave a Reply

Highslide for Wordpress Plugin