Donate

Help us to help others, please Donate

Related Links

e-Procurement Process 2015

Tender Application Form

Related Links

ಮಾ ೨೦ - ಮಾಧ್ಯಮಗಳ ಹೊಣೆ ಹಿರಿದು - ಶ್ರೀ ಶ್ರೀಮದ್ರಾಘವೇಶ್ವರ ಭಾರತೀಶ್ರೀ

ಶನಿವಾರ, ಮಾರ್ಚ 20th, 2010 -

ಗೋಕರ್ಣ.ಮಾ೨೦ : ತಂತ್ರಜ್ಞಾನವು ಮುಂದುವರೆದಿರುವ ಈ ದಿನಗಳಲ್ಲಿ ಎಲ್ಲವೂ ಸ್ಪರ್ಧಾತ್ಮಕವಾಗಿ ಸಾಗುತ್ತಿದ್ದು ಮಾಧ್ಯಮಗಳೂ ಇದರಿಂದ ಹೊರತಾಗಿಲ್ಲ.ಹೊಸತನ್ನು ನೀಡಬೇಕೆಂಬಧಾವಂತದಲ್ಲಿ ಕೆಲವುಮಾದ್ಯಮಗಳು ವಿಷಯವನ್ನುವಸ್ತುನಿಷ್ಠವಾಗಿಸದೆ ಬೇರೆಯೇರೀತಿಯಲ್ಲಿ ಕೊಡುತ್ತಿರುವುದು ಅಪಾಯಕಾರಿಬೆಳವಣಿಗೆಯಾಗಿದೆ.ಕೇವಲ ಒಂದು ಪಾರ್ಶ್ವದವಿಚಾರವನ್ನು ಮಾತ್ರ ಅವಲಂಬಿಸದೆ ಸಮಗ್ರಮಾಹಿತಿಯನ್ನು ನೀಡುವುದಲ್ಲದೆ,ಋಣಾತ್ಮಕಚಿಂತನೆಯನ್ನು ದೂರಮಾಡಿ ಧನಾತ್ಮಕವಾದ ಅಂಶಗಳನ್ನು ಸಮಾಜದ ಮುಂದಿಡುವತ್ತ ಮಾಧ್ಯಮಗಳು ಗಮನ ನೀಡಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳವರು ಆಭಿಪ್ರಾಯಪಟ್ಟಿದ್ದಾರೆ.ಶನಿವಾರ ಅಪರಾಹ್ಣ ಸಮೀಪದ ಅಶೋಕೆಯ ಶ್ರೀ ಗುರುನಿವಾಸದಲ್ಲಿ ನಡೆದ ನೂತನ ಖಾಸಗಿಪ್ರಸಾರದ ಗೋಕರ್ಣಶ್ರೀ ಮಾಸಪತ್ರಿಕೆಯನ್ನು ಲೋಕಾರ್ಪಣೆಗೊಳಿಸಿ ಅನುಗ್ರಹಭಾಷಣನೀಡುತ್ತಿದ್ದ ಪೂಜ್ಯ ಶ್ರೀಗಳವರು ಒಳಿತುಕೆಡುಕುಗಳ ಸಮ್ಮಿಶ್ರವಾದ ಈ ಸಮಾಜzಲ್ಲಿ ಇರುವಹಲವಾರುಒಳ್ಳೆಯವಸ್ತು ವಿಚಾರಗಳನ್ನು ಸಮಾಜಕ್ಕೆ ತಲುಪಿಸುವುದಲ್ಲದೆ ಈ ಹಿನ್ನಲೆಯಲ್ಲಿ ಸರಿಯಾದ ಮಾರ್ಗದರ್ಶನ ನೀಡುವ ಹೊಣೆಗಾರಿಕಯೂ ಸಹ ಮಾಧ್ಯಮಗಳ ಮೇಲಿದೆ ಎಂದೂ ಹೇಳಿದರು.ಕಾರವಾರದ ಪ್ರೊ|| ಆರ.ಎಸ.ಹಬ್ಬು ರವರು ಮಾತನಾಡಿಇಂದು ಪತ್ರಿಕೆಯನ್ನು ಪ್ರಾರಂಭಿಸುವುದು ತುಂಬಾ ಸುಲಭ,ಆದರೆ ಮುಂದುವರೆಸಿಕೊಂಡುಹೋಗುವುದು ಕಷ್ಟದಕೆಲಸ,ಶ್ರೀ ಕ್ಷೇತ್ರಗೋಕರ್ಣದ ಮಹಾಬಲೇಶ್ವರದೇವಾಲಯದ ಆಶ್ರಯದಲ್ಲಿ ಪ್ರಕಟವಾಗುತ್ತಿರುವ ಈಪತ್ರಿಕೆ ಕೇವಲ ಧಾರ್ಮಿಕಕ್ಷೇತ್ರಕ್ಕೆ ಮಾತ್ರ ಮೀಸಲಾಗದೆ ಪರಿಸರದ ಅಭವೃದ್ಧಿ,ಕ್ಷೇತ್ರಪರಿಚಯ ಮೊದಲಾದ ವಿಷಯಗಳಿಗೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲಿ ಎಂದು ಆಶಿಸಿದರು.ಶ್ರೀ ಕ್ಷೇತ್ರಹೊರನಾಡಿನ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರೀ ದೇವಾಲಯದ ಧರ್ಮಕರ್ತ ಶ್ರಿ ಭೀಮೇಶ್ವರ ಜೋಷಿಯವರು ಈಪತ್ರಿಕೆಯು ಕೇವಲಶ್ರೀದೇವಾಲಯದ ಕಾರ್ಯಕ್ರಮದ ವರದಿಗಷ್ಟೇ ಸೀಮಿತವಾಗದೆ ದೇವಾಲಯ,ಶ್ರೀಮಠ ಹಾಗೂ ಸಮಾಜದ ಎಲ್ಲಶಿಷ್ಯರ ನಡುವೆ ಸೇತುವಾಗಿ ಪರಿಣಮಿಸಲಿ ಎಂದುಆಶಿಸಿದರು.ಪ್ರಾರಂಭದಲ್ಲಿ ಸಂಪಾದಕ ಶ್ರೀಧರ ಅಡಿ ಪ್ರಾಸ್ತಾವಿಕವಾಗಿ ಮಾತನಾಡಿ ಗೋಕರ್ಣಶ್ರೀ ಪತ್ರಿಕೆಯಪ್ರಕಾಶನದ ಅಗತ್ಯವನ್ನು ತಿಳಿಸಿ ಈ ಪ್ರಾಯೋಗಿಕ ಸಂಚಿಕೆಗೆ ಪ್ರಾಯೋಜಕತ್ವವನ್ನು ನೀಡಿದ ಗೋಕರ್ಣದ ರೋಟರಿಸಂಸ್ಥೆಯ ಸಹಕಾರವನ್ನು ಸ್ಮರಿಸಿದರು.ಈ ಪತ್ರಿಕೆಯನಿರ್ವಹಣಾ ಮಂಡಳಿಯಲ್ಲಿಗೌರವ ಸಂಪಾದಕರಾಗಿ ಡಾ.ವಿ.ಎನ್.ಹೆಗಡೆ.ಸಂಪಾದಕರಾಗಿ ಶ್ರೀ ಶ್ರೀಧರ ಅಡಿ, ಸದಸ್ಯರಾಗಿ ಶ್ರೀ ಕೆ.ಸತ್ಯನಾರಾಯಣ,ಶ್ರೀ ಮಹಾಬಲ ಉಪಾಧ್ಯ ಇವರು ನಿಯೋಜಿತರಾಗಿದ್ದು.ಶ್ರೀಮಹಾಬಲೇಶ್ವರ ದೇವಾಲಯದ ಆಡಳಿತಮಂಡಳಿಯು ಈ ಪತ್ರಿಕೆಯನ್ನು ಪ್ರಕಾಶಿಸುತ್ತಿದೆ.ಈ ಸಂದರ್ಭದಲ್ಲಿ ಶಿವರಾತ್ರಿ ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಡಾ.ವಿ ಆರ.ಮಲ್ಲನ ಕೋಟಿರುದ್ರ ಸಮಿತಿಯ ವೇ||ಶಿತಿಕಂಠ ಭಟ್ಟ ಹಿರೇ, ಜಿ.ಕೆ.ಹೆಗಡೆ.ರೋಟರಿ ಸಂಸ್ಥೆಯ ಶ್ರೀ ನಾಗರಾಜ ಹಿತ್ತಲಮಕ್ಕಿ,ಶ್ರೀಧರ ಕಾಮತ, ಮೊದಲಾದ ಗಣ್ಯನಾಗರಿಕರು ಭಕ್ತರು ಉಪಸ್ಥಿತರಿದ್ದರು.

Leave a Reply

Highslide for Wordpress Plugin