

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಅಶೋಕೆ:ಮೇ 18.ಶಂಕರ ಭಗವತ್ಪಾದರು ಧರ್ಮರಕ್ಷಣೆಯ ಕಾರ್ಯಕ್ಕಾಗಿ ಧರ್ಮಪೀಠಗಳನ್ನು ಸ್ಥಾಪಿಸುವ ತಮ್ಮ ಪ್ರಕ್ರಿಯೆಯಲ್ಲಿ ಶ್ರೀಕ್ಷೇತ್ರ ಗೊಕರ್ಣಕ್ಕೆ ಆಗಮಿಸಿದಾಗ ಅಲ್ಲಿಗೆ ಸಮೀಪದ ಅಶೋಕೆಯಲ್ಲಿ ಜೀವಕಾರುಣ್ಯದ ದೃಶ್ಯವನ್ನು ಕಾಣುತ್ತಾರೆ.ಅಲ್ಲಿ ಒಂದು ಹುಲಿಯು ಚಿಗರೆ ಮರಿಗೆ ಹಾಲುಣಿಸುತ್ತಿತ್ತು.ಅದ್ಭುತವಾದ ಆ ದೃಶ್ಯವನ್ನು ನೋಡಿ ಆ ಸ್ಥಳದ ಮಹಿಮೆಯನ್ನು ಅಲ್ಲಿ ಶ್ರೀ ವಿದ್ಯಾನಂದಾಚಾರ್ಯರಿಗೆ ಶಿಷ್ಯಧೀಕ್ಷಯನ್ನು ಕೊಟ್ಟು ಶ್ರೀರಾಮಚಂದ್ರಾಪುರ ಮಠವನ್ನು ಸ್ಥಾಪಿಸುತ್ತಾರೆ.ಕಾಲಘಟ್ಟದಲ್ಲಿ ಅಶೋಕೆಯಲ್ಲಿ ಸ್ಥಾಪಿತವಾದ ಶ್ರೀ ರಾಮಚಂದ್ರಾಪುರ ಮಠವು ಹೊಸನಗರತಾಲೂಕಿಗೆ ಹೋದ ನಂತರ ಅಶೋಕೆ ನಿರ್ಜನ ಬೀಡಾದರೂ ಕೂಡ ಅಲ್ಲಿಯ ವಾತಾವರಣ ದೈವೀಸಾನ್ನಿಧ್ಯದಿಂದ ಕೂಡಿದ ಅನುಭವವನ್ನು ನೀಡುತ್ತಿರುತ್ತದೆ.ಈ ಮೂಲಸ್ಥಳದಲ್ಲಿಯೇ ಶ್ರೀರಾಮಚಂದ್ರಾಪುರ ಮಠದ ಮೂಲಮಠವನ್ನು ಪುನಃ ಸಂಸ್ಥಾಪಿಸಬೇಕೆಂದು ಶ್ರೀ ಮಠದ 36 ನೇಯ ಪೀಠಾಧಿಪತಿಗಳಾದ ಶ್ರೀಮಜ್ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ದಿನಾಂಕ 18-05-2009 ರಂದು ಮೂಲಮಠದ ಶಂಕುಸ್ಥಾಪನೆಯನ್ನು ನೆರವೇರಿಸಿದರು.ಶ್ರೀಮಠದ ಭಕ್ತರು,ಪದಾಧಿಕಾರಿಗಳು,ಗುರುಕಾರರು ಉಪಸ್ಥಿತರಿದ್ದರು.