

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ರೂಢಿಗತ ಪಂಪರೆಯಂತೆ ರಥಸಪ್ತಮಿಯ ದಿನವಾದ ಇಂದು ಶ್ರೀ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಮಹಾರಥಕ್ಕೆ ಪೂಜೆ ಸಲ್ಲಿಸಲಾಯಿತು . ವೇ ನಾರಾಯಣ ಪಂಡಿತರು ಗಣಪತಿ ಪೂಜೆ ನೆರವೇರಿಸಿದರು . ಉಪಾಧಿವಂತ ಪುರೋಹಿತರು , ಹಾಲಕ್ಕಿ ಜನಾಂಗದವರು , ಖಾರ್ವಿ ಜನಾಂಗದವರು , ಗಾಬಿತ ಜನಾಂಗದವರು ಮತ್ತು ಊರ ನಾಗರಿಕರು ಉಪಸ್ಥಿತರಿದ್ದರು . ಇಂದಿನಿಂದ ಮಹಾರಥ ಕಟ್ಟುವ ಕೆಲಸಕ್ಕೆ ಚಾಲನೆ ದೊರೆಯಲಿದೆ ದಿನಾಂಕ 27-02-2017 ಸೋಮವಾರ ಮಹಾರಥೋತ್ಸವ ಜರುಗಲಿದೆ . ಮಹಾಶಿವರಾತ್ರಿಗೆ ಶ್ರೀ ಕ್ಷೇತ್ರ ಗೋಕರ್ಣ ಸಿದ್ಧಗೊಳ್ಳುತ್ತಲಿದೆ .