

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಮಹಾತ್ಮರಿಗೂ, ದುರಾತ್ಮರಿಗೂ ಸ್ವಲ್ಪಮಾತ್ರ ವ್ಯತ್ಯಾಸ. ಮಹಾತ್ಮರಿಗೆ ಮನಸ್ಸಿನಲ್ಲಿ ,ಮಾತಿನಲ್ಲಿ, ಕೃತಿಯಲ್ಲಿ ಒಂದೇ ಆಗಿರುತ್ತದೆ. ಆದರೆ ದುರಾತ್ಮರಲ್ಲಿ ಅದು ವಿರುದ್ಧ. ಮನಸ್ಸಿನಲ್ಲಿ ಒಂದಾದರೆ ಮಾತಿನಲ್ಲಿ ಇನ್ನೊಂದು. ಅದೇ ಕೃತಿಯಲ್ಲಿ ಮೊತ್ತೊಂದಾಗಿರುತ್ತದೆ. ಎಂದು ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಅವರು ಇಲ್ಲಿನ ಶ್ರೀ ಮಹಾಬಲೇಶ್ವರ ಕಡಲತೀರದ ಮಹರ್ಷಿ ದೈವರಾತ ವೇದಿಕೆಯಲ್ಲಿ ಶಿವರಾತ್ರಿ ಮಹೋತ್ಸವದ ಪ್ರಯುಕ್ತ ವಾಲ್ಮೀಕಿ ರಾಮಾಯಣದ ರಾಮಕಥಾ ಪುನರವತರಣ ಪ್ರವಚನವನ್ನು ಅನುಗ್ರಹಿಸಿ, ಮಾತನಾಡುತ್ತಿದ್ದರು.
ಸಜ್ಜನರು ಮಹಾತ್ಮರಲ್ಲಿ ಮನಸ್ಸು, ಮಾತು,ಕೃತಿ ಒಂದೇ ಆಗಿದ್ದರೆ, ದುರಾತ್ಮರಲ್ಲಿ ಅವೆಲ್ಲವೂ ಮೇಲ್ನೋಟಕ್ಕೆ ಒಂದೇ ಆಗಿದ್ದು, ನಿಜ ರೂಪದಲ್ಲಿ ಬೇರೆ ಬೇರೆ ಆಗಿರುತ್ತದೆ.ಮಹಾತ್ಮ ವ್ಯಕ್ತಿಯ ಪ್ರಭಾವ ಆತನ ಧೃಡ ಮನಸಂಕಲ್ಪದಿಂದ ನಾಡನ್ನೇ ಬದಲಾಯಿಸುವಷ್ಟು ಸಾಮರ್ಥ್ಯವಿರುತ್ತದೆ. ಒಬ್ಬ ವ್ಯಕ್ತಿಯ ಪ್ರಭಾವ ಮೂರುವ್ಯಕ್ತಿಗಳ ಮೇಲೆ ಬೀರುತ್ತದೆಯಂತೆ. ಹಾಗೇ ಉತ್ತಮ ಮನಸ್ಸಿನಿಂದ ಮಾಡಿದ ಕರ್ಮ ತಪಸ್ಸುಗಳು ಉತ್ತಮಫಲವನ್ನೇ ನೀಡುತ್ತದೆ. ಆದರೆ ವಿಕಲ್ಪದಿಂದ ಕೂಡಿದ ತಪಸ್ಸಿನಿಂದ ಉತ್ತಮ ಫಲದೊರೆಯದೇ ಕೇಡಾದ ಘಟನೆಗಳು ಅನೇಕ ಇವೆ. ಎಂದ ಶ್ರೀಗಳು ಇಲ್ಲಿಯೂ ರತ್ನಾಕರನೆಂಬವವನು ಘೋರತಪಸ್ಸನ್ನು ಮಾಡಿ, ಘೋರಕಾನನದಲ್ಲಿರುವ ಕ್ರೂರ ಪ್ರಾಣಿಗಳ ಮೇಲೆ ಪ್ರಭಾವ ಬೀರುವಂತೆ ಮಾಡಿದನು. ಇಂದ್ರನ ನಂದನ ವನವನ್ನಾಗಿಸಿದನು. ಎಲ್ಲ ಋತುಗಳಲ್ಲೂ ಫಲಪುಷ್ಪಗಳು ದೊರೆಯುವಂತೆ ಮಾಡಿದನು. ಆದರೆ ಈತನ ತಪಸ್ಸಿಗೆ ಬ್ರಹ್ಮ ಒಲಿದು ಬಂದು, ವರ ನೀಡಲು ಮುಂದಾದಾಗ ಸಾವಿರ ಆನೆಗಳ ಬಲವುಳ್ಳ ಮಗನನ್ನು ಕೊಡು ಎನ್ನುವ ಬದಲು ಸಾವಿರ ಆನೆಗಳ ಬಲವನ್ನು ತನಗೆ ನೀಡೆಂದು ಕೇಳಿದ. ಈ ಮತಿಯ ಭ್ರಮೆಯಿಂದಾಗಿಯೇ ಅಗಸ್ತ್ಯನನ್ನು ಕೆಣಕಲು ಹೋಗಿ ಸುಟ್ಟು ಭಸ್ಮನಾದ. ಈತ ತಾಟಕಿಯ ಪತಿಯಾಗಿದ್ದ. ಇವರಿಬ್ಬರ ಮಗನೇ ಮಾರೀಚ. ಹೀಗೆ ತಮ್ಮ ರಾಕ್ಷಸತ್ವದಿಂದ ಅಗಸ್ತ್ಯ ಮುನಿಯನ್ನು ಕೆಣಕಿದ ಮಾತ್ರದಿಂದಾಗಿ ರಾಕ್ಷಸತ್ವ ಉಂಟಾಯಿತು. ಎಂದರು. ಆದ್ದರಿಂದ ಹೆಚ್ಚಾದದ್ದೆಲ್ಲಾ ಒಳ್ಳೆಯದು. ಎಂದು ಭಾವಿಸಿದರೆ ಅದು ತಪ್ಪಾದೀತು. ಎಂದರು.
ಪ್ರವಚನಕ್ಕೆ ಪೂರಕವಾಗಿ ಶ್ರೀಪಾದ್ ಭಟ್,ಶ್ರೀ ಟಿ.ವಿ.ಗಿರಿ.,ಕುಮಾರಿ ಪೂಜಾ, ಕುಮಾರಿ ದೀಕ್ಷಾ, ಸಾಕೇತ ಶರ್ಮ,ಇವರ ಮನೋಹರವಾದ ಗಾಯನ, ಪ್ರಸಿದ್ಧ ಕಲಾವಿದ ಗೋಪಾಲಕೃಷ್ಣ ಹೆಗಡೆ, ಕುಮಾರಿ ವಿಜೇತ ಅವರ ತಬಲಾ, ಲೀಲಾ ಶುಕರ ಹಾರ್ಮೋನಿಯಮ್, ಉದಯ್ ಬಂಡಾರಿ ಅವರ ಕೀಬೋರ್ಡ್, ಮತ್ತು ಗಣೇಶ್ ಅವರ ವೇಣು ವಾದನ ಶೋತೃಗಳನ್ನು ರಂಜಿಸಿದವು. ಆಶುಚಿತ್ರಕಾರ ನೀರನಳ್ಳಿ ಗಣಪತಿ ಅವರ ಸಾಂದರ್ಭಿಕ ಚಿತ್ರ ಸುಂದರವಾಗಿ ಮೂಡಿಬಂತು. ನಂತರ ಶಂಕರ ನಾರಾಯಣ ಉಪಾಧ್ಯ ಕೊಡಗಿ ಅವರ ನಿರ್ದೇಶನದಲ್ಲಿ ವಿಶ್ವಾಮಿತ್ರ ದಶರಥರ ರೂಪಕ ಯಕ್ಷಗಾನ ಕಲಾವಿದರ ಖ್ಯಾತ ಯಕ್ಷಗಾನ ಕಲಾವಿದ ಶ್ರೀಪಾದ ಹೆಗಡೆ ಹಡಿಂಬಾಳ, ಈಶ್ವರ್ ಭಟ್ ಕಟ್ಟೆ, ವಿಷ್ಣು ಭಟ್ಟ ಮುರೂರು, ವಿಶ್ವೇಶ್ವರ ಹೆಗಡೆ, ಕುಮಾರಿ ಪೂರ್ಣಿಮಾ ಹಾಗೂ ಶ್ರೀಶಾ ಹೆಗಡೆ ಮುಂದಾದವರು ಪ್ರದರ್ಶಿಸಿದರು.ಶ್ರೀಮತಿ ಪಾರ್ವತಿ ಹಾಗೂ ಶ್ರೀ ಮಹಾಬಲೇಶ್ವರ ಉಪಾಧ್ಯ ಇವರಿಂದ ಶ್ರೀ ರಾಮಪೂಜೆ ಹಾಗೂ ರಾಮಾಯಣ ಗ್ರಂಥ ಪೂಜೆ ನಡೆದು, ಶ್ರೀಗಳಿಗೆ ಫಲ ಸಮರ್ಪಣೆ ನೀಡಿದರು.
ಆದಿರಾಮಾಯಣ ಗ್ರಂಥಕ್ಕೆ ಚಿಂತಾಮಣಿ ಗಾಯತ್ರಿ ಮುಂಬೈ,ಡಾ! ಜಿ.ಜಿ.ಹೆಗಡೆ,ರವೀಂದ್ರನಾಥ, ಮೋಹನ್ ಪ್ರಸಾದ್, ಡಿ.ಎನ್.ಚೋಡನ್ ಕರ್, ಉಪಾಧಿವಂತ ಮಂಡಳದ ಕಾರ್ಯದರ್ಶಿ ಬಾಲಕೃಷ್ಣ ಜಂಭೆ, ರಾಮಚಂದ್ರ ಮಾಸ್ಕೇರಿ ಮುಂತದಾವರು ಮಾಲಾರ್ಪಣೆ ಗೈದರು.