

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶಾಸ್ತ್ರೀಯ ವಿಧಿ ವಿಧಾನದಂತೆ ಸಾರ್ವಭೌಮ ಮಹಾಬಲೇಶ್ವರ ದೇವರ ನಿಶ್ಚಿತಾರ್ಥ ತಾಂಬೂಲೋತ್ಸವವು ಗಂಗಾಷ್ಟಮಿಯ ಪುಣ್ಯ ದಿನವಾದ ಇಂದು ಮುಂಜಾನೆ 06.00 ಘಂಟೆಗೆ ಗಂಗಾವಳಿಯ ಶಾಲ್ಮಲೀ ಗಂಗಾ ನದಿ ತೀರದಲ್ಲಿರುವ ಶ್ರೀ ಗಂಗಾಮಾತಾ ದೇವಾಲಯದಲ್ಲಿ ಜರುಗಿತು. ಇದರಂತೆ ಶಿವ-ಗಂಗೆಯರ ವಿವಾಹವು ನರಕ ಚತುರ್ದಶಿ ದಿನವಾದ ಆಶ್ವೀನ ಕೃಷ್ಣ ಚತುರ್ದಶಿ 22/10/2014 ಬುಧವಾರ ಸಮುದ್ರ ತೀರದಲ್ಲಿ ವೈಭವದಿಂದ ಜರುಗಲಿದೆ. ಈ ದೈವಿಕ ವಿವಾಹ ಮಹೋತ್ಸವಕ್ಕೆ ಆದರದ ಆಮಂತ್ರಣ .