

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ದಿನಾಂಕ 27/10/2013 ರವಿವಾರ ಗಂಗಾಷ್ಟಮಿಯ ಪರ್ವಕಾಲದಲ್ಲಿ ಬೆಳಿಗ್ಗೆ
6 ಗಂಟೆಗೆ ಸರಿಯಾಗಿ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವವು ಶ್ರೀ ಕ್ಷೇತ್ರ
ಗೋಕರ್ಣದ ಸಮೀಪದ ಗಂಗಾವಳಿಯಲ್ಲಿರುವ ಶ್ರೀ ಗಂಗಾಮಾತಾ ದೇವಾಲಯದಲ್ಲಿ
ಜರುಗುತ್ತದೆ.
ಇದಕ್ಕೆ ಪೂರ್ವಭಾವಿಯಾಗಿ ದಿನಾಂಕ 26/10/2013 ನೇ ಶನಿವಾರ ರಾತ್ರೆ
ಸುಮಾರು 12 ಗಂಟೆಗೆ ಶ್ರೀ ಮಹಾಬಲೇಶ್ವರ ದೇವಾಲಯದಿಂದ ಶ್ರೀ ದೇವರ ಉತ್ಸವವು
ಸಕಲ ಬಿರುದು ಬಾವಲಿಗಳೊಡನೆ ವಾದ್ಯಘೋಶದೊಂದಿಗೆ ಗಂಗಾವಳಿಗೆ ಹೋಗಿ
ಬೆಳಿಗ್ಗೆ ನೇಸರ ಮೂಡುವ ಪೂರ್ವಕಾಲದಲ್ಲಿಯೇ ಗಂಗಾವಳಿ ನದಿಯಲ್ಲಿ ಸ್ನಾನ ಮಾಡಿ
ಗಂಗಾಮಾತಾ ದೇವಾಲಯಕ್ಕೆ ಉತ್ಸವವು ಹೋಗುತ್ತದೆ.ಆ ಸಮಯದಲ್ಲಿ ಗಂಗೆಯ ಉದ್ಭವ ಆಗುವುದು ವಿಶೇಷವಾಗಿರುತ್ತದೆ.
ಆಗ ಅಲ್ಲಿ ಸಹಸ್ರಾರು ಸಂಖ್ಯೆಯಲ್ಲಿಭಕ್ತ ಜನರು ಸೇರುತ್ತಾರೆ. ಅವರೆಲ್ಲರ ಸಮ್ಮುಖದಲ್ಲಿ ಗಂಗಾಮಾತೆಯು ಮಹಾಬಲೇಶ್ವರನನ್ನು
ಮದುವೆಯಾಗುವುದಾಗಿ ನಿಶ್ಚಿತಾರ್ಥ ತಾಂಬೂಲೋತ್ಸವವು ಜರುಗುತ್ತದೆ.