ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಎರಡನೇ ಶ್ರಾವಣ ಸೋಮವಾರ ವಿಶೇಷ ಭಕ್ತಸಮುದಾಯ ನೆರೆದಿತ್ತು . ನಮ್ಮ ರಾಜ್ಯದ ಬೇರೆ ಬೇರೆ ಕಡೆಗಳಿಂದ ಅಲ್ಲದೇ , ನೆರೆಯ ಮಹಾರಾಷ್ಟ್ರ , ಆಂಧ್ರ ಪ್ರದೇಶದಿಂದಲೂ ಭಕ್ತರು ಬಂದಿದ್ದರು . ಶ್ರಾವಣ ಸೋಮವಾರ ಪುಣ್ಯ ಪರ್ವ ಕಾಲದಲ್ಲಿ ಆತ್ಮಲಿಂಗರೂಪಿ ಮಹಾಬಲನನ್ನು ಪೂಜಿಸಿ ಧನ್ಯರಾದರು . ಬಂದಂತಹ ಎಲ್ಲ ಭಕ್ತಾದಿಗಳಿಗೆ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಂತೆ “ಅಮೃತಾನ್ನ” ಭವನದಲ್ಲಿ ಉಪಹಾರ ನೀಡಲಾಯಿತು . ಜಗದೀಶ್ವರನ ಅನುಗ್ರಹದಿಂದ , ಜಗದ್ಗುರುವಿನ ಆಶೀರ್ವಾದಗಳಿಂದ ಎಲ್ಲವೂ ಶಾಂತಿ-ಸಮಾಧಾನಗಳಿಂದ ಸುಗಮವಾಗಿ ನೆರವೇರಿದವು .