

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ (24-08-2016) ಬುಧವಾರ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ದೀವಟಿಗೆ, ವಾದ್ಯ ಸಹಿತ ಸಲಾಮು ಕೋಟಿತೀರ್ಥ ಕಟ್ಟೆಯಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಾಲಯ ಹಾಗೂ ಶ್ರೀ ವೆಂಕಟರಮಣ ದೇವಾಲಯಗಳಿಗೆ ತೆರಳಿ ರಥಬೀದಿಯ ಮೂಲಕ ಶ್ರೀದೇವಾಲಯಕ್ಕೆ ಮರಳಿತು . ನಂತರದಲ್ಲಿ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿರುವ ನಂದಿ ಮಂಟಪದಲ್ಲಿರುವ ಶ್ರೀ ಕೃಷ್ಣನಿಗೆ ವಿಶೇಷ ಪೂಜೆ, ನೈವೇದ್ಯ, ಮಂಗಳಾರತಿ ನೆರವೇರಿತು . ವೇ ಸಾಂಬ ಭಟ್ ಷಡಕ್ಷರಿ ಪೂಜಾ ಕೈಂಕರ್ಯ ನೆರವೇರಿಸಿದರು .
25-08-2016 ಗುರುವಾರ ‘ದಧಿ ಶಿಕ್ಯೋತ್ಸವ’ ಸಂಪನ್ನ :
ಸಂಜೆ ಐದು ಘಂಟೆಗೆ ಶ್ರೀ ದೇವರ ಉತ್ಸವವು ಬಿರುದು ಬಾವಲಿ, ಪಕ್ಕೆ-ಪರಾಕು ಸಮೇತ ವಾದ್ಯಗಳೊಂದಿಗೆ ಕೃಷ್ಣಾಪುರ ದೇವಾಲಯಕ್ಕೆ ತೆರಳುತ್ತದೆ . ಅಲ್ಲಲ್ಲಿ ನಿಗದಿತ ಸ್ಥಳದಲ್ಲಿ 19 ಮೊಸರು ಗಡಿಗೆ ಹಾಗು ತೆಂಗಿನ ಕಾಯಿ ಒಡೆಯುವುದು ಈ ಉತ್ಸವದ ವಿಶೇಷ . ನಂತರ ಕೋಟಿತೀರ್ಥವನ್ನು ಸುತ್ತುವರಿದು ಕೃಷ್ಣಾಪುರ ದೇವಾಲಯ ಹಾಗೂ ವೆಂಕಟರಮಣ ದೇವಾಲಯಗಳ ಮೂಲಕ ಶ್ರೀದೇವರ ಉತ್ಸವವು ಮರಳಿ ಬಂದಿತು . ದುರ್ಮುಖ ಸಂವತ್ಸರದ ‘ದಧಿ ಶಿಕ್ಯೋತ್ಸವ’ ಸುಸಂಪನ್ನಗೊಂಡಿತು .