

Jagadguru Shankaracharya Maha Samsthanam - ShreeSamsthanaGokarna; SriRamachandrapuraMatha
ಶ್ರೀಮದ್ ಜ್ಞಾನಸಿಂಹಾಸನಾಧೀಶ್ವರ ೧೦೦೮ ಶ್ರೀ ಶ್ರೀ ಶ್ರೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಮಹಾಸನ್ನಿಧಾನ - ಜಂಗಮವಾಡಿ, ಮಹಾಸಂಸ್ಥಾನ ಮಠ - ಕಾಶಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಶ್ರೀ ಆತ್ಮಲಿಂಗಕ್ಕೆ ಅಭಿಷೇಕ ಹಾಗೂ ಸುವರ್ಣ ನಾಗಾಭರಣ ವಿಶೇಷ ಪೂಜೆ ಸಲ್ಲಿಸಿದರು . ಶ್ರೀ. ಮ.ನಿ.ಪ್ರ. ಕಲ್ಯಾಣಮಹಾಸ್ವಾಮಿಗಳು , ಶ್ರೀ. ಶ್ರೀ ಷ ಬ್ರ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು , ಶ್ರೀ ಶ್ರೀ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಶ್ರೀ ಷ ಬ್ರ ರಾಜಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸಿದರು . ದೇವಾಲಯದ ವತಿಯಿಂದ ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ ಫಲ ಸಮರ್ಪಿಸಿ, ಗೌರವ ಸಲ್ಲಿಸಿದರು .